Dec 18, 2024, 2:35 PM IST
ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆ ನಿರ್ದೇಶನದ UI ಸಿನಿಮಾ ತೆರೆಗೆ ಬರೋದಕ್ಕೆ ಇನ್ನೆರಡೇ ದಿನ ಬಾಕಿ. ಉಪೇಂದ್ರ 9 ವರ್ಷಗಳ ಬಳಿಕ ನಿರ್ದೇಶನ ಮಾಡಿರೋ ಸಿನಿಮಾ ಇದು. ಸೋ ಜನಸಾಮಾನ್ಯರಷ್ಟೇ ಅಲ್ಲ, ಸೆಲೆಬ್ರಿಟಿಗಳು ಕೂಡ ಈ ಸಿನಿಮಾಗಾಗಿ ಕಾಯ್ತಾ ಇದ್ದಾರೆ. ಇನ್ನೇನು ರಿಲೀಸ್ ಹೊಸ್ತಿಲಲ್ಲಿ UI ಗ್ರ್ಯಾಂಡ್ ಪ್ರೀ ಲಾಂಚ್ ಇವೆಂಟ್ ನಡೆದಿದ್ದು ಉಪ್ಪಿ ಸಿನಿಮಾ ಕುರಿತ ಒಂದಿಷ್ಟು ಇನ್ಟ್ರೆಸ್ಟಿಂಗ್ ಸಂಗತಿಗಳನ್ನ ಹಂಚಿಕೊಂಡಿದ್ದಾರೆ ರಿಯಲ್ ಸ್ಟಾರ್.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ UI ಸಿನಿಮಾ ರಿಲೀಸ್ಗೆ ಕೌಂಟ್ ಡೌನ್ ಶುರುವಾಗಿದೆ. ಉಪೇಂದ್ರ ನಿರ್ದೇಶನ ಮಾಡ್ತಾರೆ ಅಂದ್ರೆ ಸಹಜವಾಗೇ ದೊಡ್ಡ ನಿರೀಕ್ಷೆ ಸೃಷ್ಟಿಯಾಗುತ್ತೆ. ಇದು ಭರ್ತಿ 9 ವರ್ಷಗಳ ಗ್ಯಾಪ್ ಬಳಿಕ ತೆರೆಗೆ ಬರ್ತಾ ಇರೋ ಉಪೇಂದ್ರ ನಿರ್ದೇಶನದ ಸಿನಿಮಾ. ಸೋ ಸಹಜವಾಗೇ ಚಿತ್ರದ ಬಗ್ಗೆ ದೊಡ್ಡ ಹೈಪ್ ಸೃಷ್ಟಿಯಾಗಿದೆ.
ವಿಭಿನ್ನ ವಾರ್ನರ್ , ಟ್ರೋಲ್ ಆಗುತ್ತೆ ಹಾಡುಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನ ಹೆಚ್ಚು ಮಾಡಿವೆ. 2040ರ ದುನಿಯಾ ತೋರಿಸ್ತಿನಿ ಅನ್ನೋ ಸೂಚನೆ ಕೊಟ್ಟಿರೋ ಉಪ್ಪಿ, ಅದರ ಝಲಕ್ ನ ತೋರಿಸಿ ಎಲ್ಲರಿಗೂ ಕಿಕ್ ಕೊಟ್ಟಿದ್ದಾರೆ.
ಇನ್ನೂ ರಿಲೀಸ್ ಹೊಸ್ತಿಲಲ್ಲಿ ಭರ್ಜರಿ ಪ್ರೀ ಲಾಂಚ್ ಇವೆಂಟ್ ಮಾಡಿರೋ UI ಟೀಂ , UI ವರ್ಲ್ಡ್ಗೆ ಸ್ವಾಗತ ಎಂದಿದೆ. ಲಾಂಗ್ ಗ್ಯಾಪ್ ನಂತರ ನಿರ್ದೇಶನ ಮಾಡಿರೋ ಉಪ್ಪಿ, ಡೈರೆಕ್ಷನ್ ದೊಡ್ಡ ಸವಾಲು ಅಂತ ಹೇಳೋದ್ರ ಜೊತೆಗೆ ಈ ಬಾರಿ ಎರಡು ಆಯಾಮದಲ್ಲಿ ಕಥೆ ಹೇಳಿದ್ದೀನಿ ಅನ್ನೋ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..