ರಾಕ್ಷಸ ರೂಪದಲ್ಲಿ ಪ್ರಜ್ವಲ್ ದೇವರಾಜ್, ಫೆಬ್ರವರಿ 26ಕ್ಕೆ ಬರ್ತಿದೆ ರಾಕ್ಷಸ ಸಿನಿಮಾ

Jan 8, 2025, 1:11 PM IST

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇದೂವರೆಗೂ 35ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ನೀವು ಇದೂವರೆಗೂ ನೋಡಿರದ ಪ್ರಜ್ವಲ್​ನ ತೋರಿಸಲಿದೆ ರಾಕ್ಷಸ ಸಿನಿಮಾ. ರಾಕ್ಷಸ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಟೈಮ್ ಲೂಪ್ ಕಾನ್ಸೆಪ್ಟ್‌ನ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿದೆ. ಈಗಾಗ್ಲೇ ರಿಲೀಸ್ ಆಗಿರೋ ರಾಕ್ಷಸ ಮೂವಿಯ ಟೀಸರ್ ಚಿತ್ರದ ಬಗೆಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಪ್ರಜ್ವಲ್ ಜೊತೆಗೆ  ಶೋಭಾರಾಜ್, ವತ್ಸಲಾಮೋಹನ್, ಸಿದ್ಲಿಂಗು ಶ್ರೀಧರ್ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.