Dec 26, 2024, 7:09 PM IST
ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಟೆಡ್ ಮೂವಿ ಮ್ಯಾಕ್ಸ್ ಇವತ್ತು ವರ್ಲ್ಡ್ ವೈಡ್ ತೆರೆಗೆ ಬಂದಿದೆ. ಭರ್ತಿ ಎರಡೂವರೇ ವರ್ಷಗಳ ಗ್ಯಾಪ್ ನಂತರ ಬಂದಿರೋ ಕಿಚ್ಚನ ಸಿನಿಮಾ ಇದು. ಸೋ ಸಹಜವಾಗೇ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಹಾಗಾದ್ರೆ ಬಹುನಿರೀಕ್ಷೆಯ ಮ್ಯಾಕ್ಸ್ ಮೂವಿ ಹೇಗಿದೆ..? ಕಿಚ್ಚನ ಮಿಡ್ ನೈಟ್ ಹಂಗಾಮ ಹೇಗೆ ಮೂಡಿಬಂದಿದೆ..? ಇಲ್ಲಿದೆ ನೋಡಿ ಮ್ಯಾಕ್ಸ್ ರಿವ್ಯೂ ರಿಪೋರ್ಟ್.
ಬರೊಬ್ಬರಿ ಎರಡೂವರೇ ವರ್ಷಗಳ ನಂತರ ಬಂದಿರೋ ಕಿಚ್ಚ ಸುದೀಪ್ ನಟನೆಯ ಸಿನಿಮಾ ಇದು. ಅಭಿಮಾನಿಗಳು ನಿರೀಕ್ಷೆ ಮಾಡ್ತಾ ಇದ್ದಂಥಾ ಪಕ್ಕಾ ಮಾಸ್ ಸಿನಿಮಾ ಮೂಲಕವೇ ಕಿಚ್ಚ ಕಂಬ್ಯಾಕ್ ಮಾಡಿದ್ದಾರೆ. ಮ್ಯಾಕ್ಸ್ ಸಿನಿಮಾದಲ್ಲಿರೋದು ಒಂದೇ ರಾತ್ರಿಯಲ್ಲಿ ನಡೆಯೋ ಥ್ರಿಲ್ಲರ್ ಸ್ಟೋರಿ.
ಈ ಥ್ರಿಲ್ಲಿಂಗ್ ಸಬ್ಜೆಕ್ಟ್ನ ಅಷ್ಟೇ ರೋಚಕವಾಗಿ ತೆರೆ ಮೇಲೆ ತಂದಿದ್ದಾರೆ. ಅದ್ಭುತ ತಂತ್ರಜ್ಞರು-ಕಲಾವಿದರುಗಳಿರೋ ಈ ಸಿನಿಮಾ ಖಂಡಿತ ಸಿನಿಪ್ರಿಯರಿಗೆ ನಿರಾಸೆ ಮಾಡಲ್ಲ. ಅದ್ರಲ್ಲೂ ಥ್ರಿಲ್ಲರ್ ಜಾನರ್ ಸಬ್ಜೆಕ್ಟ್ನ ಇಷ್ಟಪಡೋ ಪ್ರೇಕ್ಷಕರಿಗಂತೂ ಇದು 100 ಪರ್ಸೆಂಟ್ ಪೈಸಾ ವಸೂಲ್ ಮೂವಿ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...