ದರ್ಶನ್ ಮಧ್ಯಂತರ ಬೇಲ್ ವಿರುದ್ದ ಅಪೀಲ್ ಸಲ್ಲಿಸಲು ಇಷ್ಟೊಂದು ವಿಳಂಬ ಮಾಡಿದ್ದೇಕೆ?

Dec 6, 2024, 12:28 PM IST

ನಟ ದರ್ಶನ್ (Actor Drashan) ಮಧ್ಯಂತರ ಬೇಲ್ ಮುಕ್ತಾಯಕ್ಕೆ ಇನ್ನೊಂದೇ ವಾರ ಬಾಕಿ ಇದೆ. ಈಗ ರಾಜ್ಯಸರ್ಕಾರ ಸುಪ್ರಿಂ ಕೋರ್ಟ್​ನಲ್ಲಿ ಈ ಬೇಲ್ ನ ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸಿದೆ. ಅಷ್ಟಕ್ಕೂ ಇಷ್ಟು ತಡವಾಗಿ ಸುಪ್ರೀಂಗೆ ಅಪೀಲ್ ಹೋಗಿದ್ದೇಕೆ..? ಈ ವಿಚಾರದಲ್ಲಿ ದಾಸನಿಗೆ ಸರ್ಕಾರದ ಅಭಯಹಸ್ತ ಸಿಕ್ಕಿದೆಯಾ..? ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ರಾಜ್ಯ ಸರ್ಕಾರ ಕೊನೆಗೂ ದರ್ಶನ್ ಮಧ್ಯಂತರ ಬೇಲ್ ಆದೇಶದ ವಿರುದ್ದ ಸುಪ್ರಿಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ  ದರ್ಶನ್‌ ಸೇರಿದಂತೆ 17 ಮಂದಿ ಬಂಧನವಾಗಿತ್ತು. ಅನಾರೋಗ್ಯ ಕಾರಣ ನೀಡಿ ದರ್ಶನ್ ಅಕ್ಟೋಬರ್‌ 30 ರಂದು ಜೈಲಿನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಹೊರಬಂದಿದ್ರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ. 

ಈಗ ದರ್ಶನ್​ಗೆ ಕರ್ನಾಟಕ ಹೈಕೋರ್ಟ್‌ ನೀಡಿರುವ ಮಧ್ಯಂತರ ಜಾಮೀನನ್ನ ರದ್ದು ಮಾಡಬೇಕು ಎಂದು ಸರ್ಕಾರದ ಪರ ವಕೀಲರಿಂದ ಬುಧವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಶುಕ್ರವಾರ ಅಥವಾ ಮುಂದಿನ ಸೋಮವಾರ ಸುಪ್ರಿಂನಲ್ಲಿ ಈ ಕೇಸ್ ವಿಚಾರಣೆ ನಡೆಯಲಿದೆ.

ಅಸಲಿಗೆ ದರ್ಶನ್​ಗೆ ಹೈಕೋರ್ಟ್ 6 ವಾರಗಳ ಮಧ್ಯಂತರ ಬೇಲ್ ಕೊಟ್ಟಾಗಲೇ ಪ್ರಾಸಿಕ್ಯೂಶನ್ ಮತ್ತು ತನಿಖಾಧಿರಿಗಳು ಈ ಆದೇಶದ ವಿರುದ್ದ ಅಪೀಲ್ ಹೋಗುವಂತೆ ಗೃಹಇಲಾಖೆಗೆ ಮನವಿ ಸಲ್ಲಿಸಿದ್ರು. ಆದ್ರೆ ಗೃಹಇಲಾಖೆ ಮಾತ್ರ ಈ ವಿಚಾರದಲ್ಲಿ ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳಲೇ ಇಲ್ಲ. ಇನ್ನೇನು ದರ್ಶನ್ ಮಧ್ಯಂತರ ಬೇಲ್ ಅವಧಿ  ಮುಕ್ತಾಯಕ್ಕೆ ಒಂದು ವಾರವಷ್ಟೇ ಬಾಕಿ ಇರುವ ಹೊತ್ತಲ್ಲಿ ಅಪೀಲ್ ಸಲ್ಲಿಸಿರೋದು ಅನುಮಾನ ಮೂಡಿಸಿದೆ.

ದರ್ಶನ್​ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಫ್ಟ್ ಕಾರ್ನರ್ ಪ್ರದರ್ಶಿಸ್ತಾ ಇದೆಯಾ ಅನ್ನೋ ಅನುಮಾನ ಜನರನ್ನ ಕಾಡ್ತಾ ಇರೋದು ಸುಳ್ಳಲ್ಲ. ಯಾಕಂದ್ರೆ ಬೆನ್ನು ನೋವುಗೆ ಸರ್ಜರಿ ಮಾಡಿಸಬೇಕು ಅಂತ ನೆಪ ಹೇಳಿ ಮಧ್ಯಂತರ ಬೇಲ್ ಪಡೆದುಕೊಂಡು ದರ್ಶನ್ ಇದೂವರೆಗೂ ಸರ್ಜರಿ ಮಾಡಿಸಿಕೊಂಡಿಲ್ಲ. ಐದು ವಾರಗಳ ಕಾಲ ಆಸ್ಪತ್ರೆಯಲ್ಲಿ ಕಳೆದು ಕಾಲಹರಣ ಮಾಡಿದ್ದಾರೆ.

ದರ್ಶನ್ ಜಾಗದಲ್ಲಿ ಬೇರೆ ಕೊಲೆ ಆರೋಪಿ ಇದ್ದಿದ್ರೆ ಇದೇ ಸೌಕರ್ಯ ಸಿಕ್ತಾ ಇತ್ತಾ,.? ಇಲ್ಲಿ ಧನಿಕರಿಗೊಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯ ಅಂತ ಜನ ಮಾತನಾಡಿಕೊಳ್ಳುವಂತೆ ಆಗಿದೆ. ದರ್ಶನ್ ವಿರುದ್ದ ಕಠಿಣ ಕ್ರಮ ಅಂತ ಗೃಹಸಚಿವ ಪರಮೇಶ್ವರ್ ಆಗಾಗ ಹೇಳ್ತಾ ಬಂದಿದ್ದಾರಾದ್ರೂ ಅವರ ಇಲಾಖೆ ಮಾತ್ರ ಬೇಲ್ ಸಲ್ಲಿಸೋಕೆ ಮಾಡಿದ ವಿಳಂಬವನ್ನ ನೋಡಿದ್ರೇನೇ, ಅವರ ಉದ್ದೇಶ ಏನು ಅನ್ನೋದು ಅರ್ಥ ಆಗುತ್ತೆ.

ಒಟ್ಟಾರೆ ಸದ್ಯಕ್ಕಂತೂ ದರ್ಶನ್ ಮಧ್ಯಂತರ ಬೇಲ್ ಅರ್ಜಿ ವಿರುದ್ದ ಸುಪ್ರಿಂ ಕೋರ್ಟ್​ಗೆ ಅಪೀಲ್ ಸಲ್ಲಿಸಲಾಗಿದೆ. ಸದ್ಯದಲ್ಲೇ ಈ ವಿಚಾರಣೆ ಆರಂಭ ವಾಗಲಿದೆ. ಇನ್ನೊಂದು ಕಡೆಗೆ ಹೈಕೋರ್ಟ್​ನಲ್ಲಿ ದರ್ಶನ್ ಜನರಲ್ ಬೇಲ್ ಅರ್ಜಿ ವಿಚಾರಣೆ ಕೂಡ ನಡೀತಾ ಇದ್ದು, ಮುಂದಿನ ದಿನಗಳಲ್ಲಿ ನ್ಯಾಯದೇವತೆಯ ತೀರ್ಪು ಏನಾಗಿರುತ್ತೆ ಅನ್ನೋದನ್ನ ಕಾದುನೋಡಬೇಕಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..