Mar 20, 2022, 4:34 PM IST
ಚಿಕ್ಕಬಳ್ಳಾಪುರ (ಮಾ.20): ಎಸ್.ಎಸ್.ರಾಜಮೌಳಿ (SS Rajamouli) ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್’ (RRR)ಸಿನಿಮಾ ಮಾರ್ಚ್ 25ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ನಡುವೆ 'ಆರ್‌ಆರ್‌ಆರ್' ಚಿತ್ರದ ಭರ್ಜರಿ ಪ್ರಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ ಶನಿವಾರ ಭರ್ಜರಿಯಾಗಿ ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮ ನಡೆಯಿತು. ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ಚಾಲನೆ ನೀಡಿದರು. ಈ ಕಾರ್ಯಕ್ರಮ ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಅಗಲಗುರ್ಕಿ ಸಮೀಪ ಚಿಕ್ಕನಹಳ್ಳಿ ಕ್ರಾಸ್‌ನಲ್ಲಿ ಬರೋಬ್ಬರಿ 70 ಎಕರೆ ಪ್ರದೇಶದಲ್ಲಿ ಪ್ರಿ ರಿಲೀಸ್ ಇವೆಂಟ್ ನಡೆಯಿತು.
ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಕನ್ನಡದ ಹಿರಿಯ ನಟರಾದ ಡಾ.ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಲವು ದಿಗ್ಗಜರು ಪಾಲ್ಗೊಂಡು ಚಿತ್ರ ತಂಡಕ್ಕೆ ಶುಭ ಕೋರಿದರು. 'ಆರ್‌ಆರ್‌ಆರ್' ಸಿನಿಮಾವನ್ನು ಕನ್ನಡದಲ್ಲಿ ಮಾಡಿರುವುದು ನಮಗೆ ಸಂತಸ ತಂದಿದೆ. ತೆಲುಗು, ಕನ್ನಡ ಭಾಷೆಗಳು ಸಹೋದರರಿದ್ದಂತೆ, ತೆಲುಗು, ಕನ್ನಡ ಭಾಷೆ, ಸಂಸ್ಕೃತಿ, ಬದುಕು ಪರಸ್ಪರ ಬೆಸೆದುಕೊಂಡಿದೆ. ಆರ್‌ಆರ್‌ಆರ್ ಸಿನಿಮಾ ಇತಿಹಾಸದಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Chikkaballapura: RRR ಪ್ರಿ ಇವೆಂಟ್: ನಾನು ರಾಜಮೌಳಿ ದೊಡ್ಡ ಫ್ಯಾನ್ ಎಂದ ಶಿವಣ್ಣ
"ಆರ್‌ಆರ್‌ಆರ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಕೆಲ ಕ್ಷಣ ಭಾವುಕರಾದರು. ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಶೀಘ್ರದಲ್ಲೇ ಆಯೋಜಿಸಲು ತೀರ್ಮಾನಿಸಿದ್ದೇವೆ. ಆ ಕಾರ್ಯಕ್ರಮವನ್ನೂ ಅಪ್ಪುಗೆ ಗೌರವ ಬರುವ ರೀತಿಯಲ್ಲಿ ಇಷ್ಟೇ ದೊಡ್ಡದಾಗಿ ಆಯೋಜಿಸುತ್ತೇವೆ ಎಂದರು. ರಾಮ್‌ಚರಣ್, ತಾರಕ್, ಶಿವಣ್ಣ ಎಲ್ಲರೂ ಬ್ರಹ್ಮ, ವಿಷ್ಣು, ಮಹೇಶ್ವರನ ರೀತಿಯಲ್ಲಿ ನಿಂತಿದ್ದಾರೆ. ಈ ಕಾರ್ಯಕ್ರಮ ಕನ್ನಡ, ತೆಲುಗಿನ ಸಹೋದರತ್ವದ ಬೆಸುಗೆಗೆ ಕಾರಣವಾಗಿದೆ. ಈ ಸಿನಿಮಾವನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‌ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಚಂದ್ರಬೋಸ್ ಮತ್ತಿತರರಿಗೆ ಸಮರ್ಪಿಸಬೇಕೆಂದು ರಾಜಮೌಳಿಗೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies