ಯಶ್ ಟಾಕ್ಸಿಕ್ ಟೀಮ್​​ಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್, ಭಾರೀ ಹಣ ಸೇಫ್!

ಯಶ್ ಟಾಕ್ಸಿಕ್ ಟೀಮ್​​ಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್, ಭಾರೀ ಹಣ ಸೇಫ್!

Published : Dec 07, 2024, 11:51 AM IST

ಈ ಜಾಗದಲ್ಲಿ ಮೊದಲು ನೂರಾರು ಮರಗಳಿದ್ವು. ಅವುಗಳನ್ನೆಲ್ಲಾ ಚಿತ್ರತಂಡ ಕಡಿದು ಹಾಕಿ ಸೆಟ್ ನಿರ್ಮಿಸಿದೆ ಅನ್ನೋ ದೂರನ್ನ ವಕೀಲರೊಬ್ಬರು ನೀಡಿದ್ರು. ಈ ಕುರಿತು ಖುದ್ದು ಪರಿಶೀಲನೆಗೆ ಇಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಿತ್ರತಂಡದ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಖಡಕ್ ಆಗಿ ಸೂಚನೆ ಕೊಟ್ಟಿದ್ರು.

ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಟಾಕ್ಸಿಕ್ ಸಿನಿಮಾ ತಂಡದ ಮೇಲೆ ನೂರಾರು ಮರಕಡಿದ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತಾಗಿ ಎಫ್.ಐ.ಆರ್ ಕೂಡ ದಾಖಲಾಗಿ ಟಾಕ್ಸಿಕ್ ಟೀಮ್​ಗೆ ಟ್ರಬಲ್ ಎದುರಾಗಿತ್ತು. ಆದ್ರೀಗ ರಾಕಿಭಾಯ್ ಸಿನಿಮಾಗೆ ಹೈಕೋರ್ಟ್ ಕೊಟ್ಟ ಆದೇಶ ಕೊಂಚ ರಿಲೀಫ್ ತಂದಿದೆ. ರಾಕಿಯ ಟಾಕ್ಸಿಕ್ ಸಾಮ್ರಾಜ್ಯ ಸೇಫ್ ಆಗಿದೆ. 

ಯೆಸ್ ರಾಕಿಂಗ್ ಸ್ಟಾರ್ ನಟನೆ ಮತ್ತು ಸಹನಿರ್ಮಾಣದ ಟಾಕ್ಸಿಕ್ ಟೀಂ ಆರಂಭದಲ್ಲೇ ವಿವಾದದ ಸುಳಿಗೆ ಸಿಲುಕಿರೋದು ನಿಮಗೆ ಗೊತ್ತೇ ಇದೆ. ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿ ಆವರಣದಲ್ಲಿ ಟಾಕ್ಸಿಕ್ ತಂಡ ಬೃಹತ್ ಸೆಟ್​​ನ ನಿರ್ಮಿಸಿ, ಶೂಟಿಂಗ್ ಆರಂಭಿಸಿತ್ತು. ಇಲ್ಲಿಯೇ ಬರೊಬ್ಬರಿ 50 ದಿನಗಳ ಕಾಲ ಶೂಟಿಂಗ್ ಮಾಡಿದೆ.

ಆದ್ರೆ ಈ ಜಾಗದಲ್ಲಿ ಮೊದಲು ನೂರಾರು ಮರಗಳಿದ್ವು. ಅವುಗಳನ್ನೆಲ್ಲಾ ಚಿತ್ರತಂಡ ಕಡಿದು ಹಾಕಿ ಸೆಟ್ ನಿರ್ಮಿಸಿದೆ ಅನ್ನೋ ದೂರನ್ನ ವಕೀಲರೊಬ್ಬರು ನೀಡಿದ್ರು. ಈ ಕುರಿತು ಖುದ್ದು ಪರಿಶೀಲನೆಗೆ ಇಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಿತ್ರತಂಡದ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಖಡಕ್ ಆಗಿ ಸೂಚನೆ ಕೊಟ್ಟಿದ್ರು.

ಈ ವಿಚಾರದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಒಡೆತನದ ಮಾನ್​ಸ್ಟರ್ ಮೈಂಡ್ಸ್ ಸಂಸ್ಥೆ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಇದು ಯಶ್ ಅಂಡ್ ಟಾಕ್ಸಿಕ್ ಟೀಂಗೆ ಟೆನ್ಶನ್ ತಂದಿತ್ತು. ಈ ಸೆಟ್​​ಗೆ ಚಿತ್ರತಂಡ ಭರ್ತಿ 30 ಕೋಟಿ ಖರ್ಚು ಮಾಡಿದೆ. ಇದ್ರಲ್ಲಿ ಇನ್ನಷ್ಟು ಶೂಟಿಂಗ್ ಮಾಡೋದು ಕೂಡ ಬಾಕಿ ಇದೆ. ಅಷ್ಟರಲ್ಲಿ ಈ ವಿವಾದ ಶುರುವಾಗಿದ್ದರಿಂದ ಟೀಂಗೆ ಢವ ಢವ ಶುರುವಾಗಿತ್ತು.

ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಟಾಕ್ಸಿಕ್ ಟೀಂಗೆ ಈಗ ಕೊಂಚ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ ಎಫ್.ಐ.ಆರ್​ಗೆ ಮಧ್ಯಂತರ ತಡೆಯನ್ನ ನೀಡಿದೆ.  ‘ಟಾಕ್ಸಿಕ್’ ಸಿನಿಮಾದ ನಿರ್ಮಾಪಕರ ಪರವಾಗಿ ವಾದಿಸಿದ ವಕೀಲ ಬಿಪಿನ್ ಹೆಗ್ಡೆ, 400 ಎಕರೆ ಜಮೀನಿನಲ್ಲಿ 18 ಎಕರೆ ಜಾಗವನ್ನು ಹೆಚ್ ಎಂ ಟಿ ಸಂಸ್ಥೆ ಕೆನರಾ ಬ್ಯಾಂಕ್​ಗೆ ಮಾರಾಟ ಮಾಡಿದೆ. ಇಲ್ಲಿ, 30 ಕೋಟಿ ಹೂಡಿಕೆ ಮಾಡಿ ಸಿನಿಮಾ ಸೆಟ್ ಹಾಕಲಾಗಿದೆ. 

ಈಗ ಸೆಟ್ ನಿರ್ಮಿಸಲಾಗಿರುವ ಜಾಗ ಅರಣ್ಯ ಭೂಮಿಯಲ್ಲ ಅಂತ ಸ್ವತಃ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಅಲ್ಲದೆ ಶೂಟಿಂಗ್ ಸೆಟ್​ ಹಾಕಲು ಯಾವುದೇ ಮರಗಳನ್ನು ಕಡಿದಿಲ್ಲ ಅಂತ ವಾದಿಸಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು ಮಧ್ಯಂತರ ತಡೆ ಆದೇಶ ನೀಡಿದ್ದಾರೆ.

ಅಲ್ಲಿಗೆ ಸದ್ಯದ ಮಟ್ಟಿಗಂತೂ ಟಾಕ್ಸಿಕ್ ಟೀಂಗೆ ರಿಲೀಫ್ ಸಿಕ್ಕಿದೆ. ಸದ್ಯ ಮುಂಬೈನಲ್ಲಿ ಮಡ್ ಐಲ್ಯಾಂಡ್ ಶೂಟಿಂಗ್ ಮಾಡ್ತಿರೋ ರಾಕಿ ಭಾಯ್ ಈ ವಿಷ್ಯ ಕೇಳಿ ರಿಲ್ಯಾಕ್ಸ್ ಆಗಿದ್ದಾರೆ. ರಿಲ್ಯಾಕ್ಸ್ ಮೂಡ್​​ನಲ್ಲಿ ಶೂಟಿಂಗ್ ರಿಸ್ಟಾರ್ಟ್ ಮಾಡಿದ್ದಾರೆ.

24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?