ರಿಷಬ್ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನ; ಏನಿದು ಶೆಟ್ಟರ ಸಕ್ಸಸ್ ಗುಟ್ಟು?

ರಿಷಬ್ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನ; ಏನಿದು ಶೆಟ್ಟರ ಸಕ್ಸಸ್ ಗುಟ್ಟು?

Published : Dec 04, 2024, 02:44 PM IST

ಸದ್ಯ ರಿಷಬ್ ಶೆಟ್ರು ಮುಟ್ಟಿದ್ದೆಲ್ಲಾ ಚಿನ್ನವಾಗ್ತಾ ಇದೆ. ಕಾಂತಾರ ಸಿನಿಮಾ ವಿಶ್ವದಾದ್ಯಂತ ಜಯಭೇರಿ ಬಾರಿಸ್ತು. ರಾಷ್ಟ್ರಪ್ರಶಸ್ತಿಯನ್ನೂ ಬಾಚಿಕೊಳ್ತು. ರಿಷಬ್​ಗೆ ಡಿವೈನ್ ಸ್ಟಾರ್ ಅನ್ನೋ ಪಟ್ಟವನ್ನೂ ತಂದುಕೊಟ್ತು. ಕಾಂತಾರದ ಪರ್ಫಾರ್ಮೆನ್ಸ್ ನೋಡಿಯೇ ಶಿವಾಜಿ ಮಹಾರಾಜ್..

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚಿಗಷ್ಟೇ ಜೈ ಹನುಮಾನ್ ಸಿನಿಮಾದಲ್ಲಿ ಆಂಜನೇಯನ ಅವತಾರದಲ್ಲಿ ನಟಿಸೋ ನ್ಯೂಸ್ ಕೊಟ್ಟಿದ್ದ ರಿಷಬ್, ಈಗ ಛತ್ರಪತಿ ಶಿವಾಜಿ ಮಹಾರಾಜನಾಗ್ತಿರೋ ಬಡ ಖಭರ್ ಕೊಟ್ಟಿದ್ದಾರೆ. ಮುಂದಿನ ಮೂರು ವರ್ಷ ರಿಷಬ್ ನಟನೆಯಲ್ಲಿ ಬರಲಿರೋ ಸಿನಿಮಾಗಳು ಹೇಗಿವೆ ಅಂದ್ರೆ ರಿಷಬ್ ವಿಶ್ವದಾದ್ಯಂತ ವಿಜಯಯಾತ್ರೆ ಮಾಡೋದು ಫಿಕ್ಸ್

ಯೆಸ್ ಡಿವೈನ್ ಸ್ಟಾರ್ ಶೆಟ್ಟಿ ಫ್ಯಾನ್ಸ್​ಗೆ ಸರ್​ಪ್ರೈಸ್ ಮೇಲೆ ಸರ್​ಪ್ರೈಸ್ ಕೊಡ್ತಾ ಇದ್ದಾರೆ. ಇತ್ತೀಚಿಗಷ್ಟೇ ಜೈ ಹನುಮಾನ್ ಮೂವಿಯಲ್ಲಿನ ರಿಷಬ್ ಆಂಜನೇಯನ ಅವತಾರದ ಝಲಕ್ ರಿವೀಲ್ ಆಗಿತ್ತು. ರಿಷಬ್​ನ ಈ ಅವತಾರದಲ್ಲಿ ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ರು,. ಇದೀಗ ಒನ್ಸ್ ಅಗೈನ್ ಥ್ರಿಲ್ ಆಗೋ ಟೈಂ. ಯಾಕಂದ್ರೆ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಆಗ್ತಾ ಇದ್ದಾರೆ.

ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂದೀಪ್ ಸಿಂಗ್ ಜೊತೆ ಕೈ ಜೋಡಿಸಿರೋ ರಿಷಬ್, ಶಿವಾಜಿ ಮಹಾರಾಜರ ಬಯೋಪಿಕ್ ನಲ್ಲಿ ನಟಿಸೋಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಮಾತುಕತೆಗಳು ಫೈನಲ್ ಆಗಿದ್ದು ರಿಷಬ್ , ಶಿವಾಜಿ ಪಾತ್ರ ಮಾಡೋಕೆ ಯೆಸ್ ಅಂದಿದ್ದಾರೆ. ಸದ್ಯ ಸಂದೀಪ್ ಸಿಂಗ್ ರಿಷಬ್ ಶಿವಾಜಿ ಅವತಾರದಲ್ಲಿರೋ ಫಸ್ಟ್ ಲುಕ್ ಪೋಸ್ಟರ್​ನ ರಿವೀಲ್ ಮಾಡಿದ್ದು ಈ ಸಿನಿಮಾ ಜನವರಿ 21 , 2027ಕ್ಕೆ ಬರುತ್ತೆ ಅನ್ನೋ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.

ಸದ್ಯ ರಿಷಬ್ ಶೆಟ್ರು ಮುಟ್ಟಿದ್ದೆಲ್ಲಾ ಚಿನ್ನವಾಗ್ತಾ ಇದೆ. ಕಾಂತಾರ ಸಿನಿಮಾ ವಿಶ್ವದಾದ್ಯಂತ ಜಯಭೇರಿ ಬಾರಿಸ್ತು. ರಾಷ್ಟ್ರಪ್ರಶಸ್ತಿಯನ್ನೂ ಬಾಚಿಕೊಳ್ತು. ರಿಷಬ್​ಗೆ ಡಿವೈನ್ ಸ್ಟಾರ್ ಅನ್ನೋ ಪಟ್ಟವನ್ನೂ ತಂದುಕೊಟ್ತು. ಕಾಂತಾರದ ಪರ್ಫಾರ್ಮೆನ್ಸ್ ನೋಡಿಯೇ ಶಿವಾಜಿ ಮಹಾರಾಜ್ ಪಾತ್ರಕ್ಕೆ ರಿಷಬ್ ಸೂಕ್ತ ಅಂತ ಅವರನ್ನ ಅರಸಿಕೊಂಡು ಈ ಚಿತ್ರ ಬಂದಿದೆ.

ಹೌದು ಮುಂದಿನ ಮೂರು ವರ್ಷ ಬರಲಿರೋ ಮೂರು ಸಿನಿಮಾಗಳು ಹೇಗಿವೆ ಅಂದ್ರೆ ರಿಷಬ್ ಇಡೀ ವಿಶ್ವವನ್ನೇ ಮೆಚ್ಚಿಸೋಕೆ ಸಿದ್ದವಾದಂತಿದೆ. ಮೊದಲನೇಯದ್ದಾಗಿ ಕಾಂತಾರ ಸಿನಿಮಾದ ಪ್ರೀಕ್ವೆಲ್ ಶೂಟ್ ನಡೀತಾ ಇದ್ದು, ಇದ್ರಲ್ಲಿ ಕದಂಬರ ಕಾಲದ ಕರಾವಳಿ ಕಥನ ಹೇಳೋಕೆ ರಿಷಬ್ ಸಜ್ಜಾಗಿದ್ದಾರೆ. ಖುದ್ದು ರಿಷಬ್ ಡೈರೆಕ್ಟ್ ಮಾಡ್ತಿರೋ ಈ ಸಿನಿಮಾದ ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದ್ದು 2025ರ ಅಕ್ಟೋಬರ್ 2ಕ್ಕೆ  ಕಾಂತಾರ ಚಾಪ್ಟರ್-1 ರಿಲೀಸ್ ಆಗಲಿದೆ.

ಇನ್ನೂ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ , ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್​​ನ ಭಾಗವಾಗಿ ಜೈ ಹನುಮಾನ್ ಸಿನಿಮಾ ಮೂಡಿಬರಲಿದ್ದು, ಅದ್ರಲ್ಲಿ ರಿಷಬ್ ರಾಮಭಕ್ತ ಹನುಮನಾಗಿ ನಟಸ್ತಾ ಇದ್ದಾರೆ. ತನ್ನ ಫಸ್ಟ್ ಲುಕ್ ನಿಂದಲೇ ಹುಚ್ಚೆಬ್ಬಿಸೋ ಈ ಸಿನಿಮಾ 2026ರಲ್ಲಿ ತೆರೆಗೆ ಬರಲಿದೆ.

ಇವರಡರ ಬಳಿಕ ಬರಲಿರೋದೇ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ. ಹಿಂದವಿ ಸಾಮ್ರಾಜ್ಯದ ವೀರ ಸಾಮ್ರಾಟನಾಗಿ ರಿಷಬ್ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಅಲ್ಲಿಗೆ ಬರಲಿರೋ ಮೂರು ವರ್ಷ ಮೂರು ಅದ್ಭುತ ಚಿತ್ರಗಳ ಮೂಲಕ, ಪಾತ್ರಗಳ ಮೂಲಕ.. ಹರ ಹರ ಮಹಾದೇವ್ ಅಂತ ಹೇಳ್ತಾ ವಿಶ್ವವನ್ನೇ ಗೆಲ್ಲೋಕೆ ಸಜ್ಜಾಗಿದ್ದಾರೆ ಡಿವೈನ್ ಸ್ಟಾರ್..!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more