ಉಪ್ಪಿ ವರ್ಮಾ ಜೋಡಿಯ I AM R..! ವಿಭಿನ್ನ ಅವತಾರದಲ್ಲಿ ರಿಯಲ್ ಸ್ಟಾರ್

ಉಪ್ಪಿ ವರ್ಮಾ ಜೋಡಿಯ I AM R..! ವಿಭಿನ್ನ ಅವತಾರದಲ್ಲಿ ರಿಯಲ್ ಸ್ಟಾರ್

Published : Apr 25, 2022, 01:53 PM ISTUpdated : Apr 25, 2022, 02:10 PM IST

ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರೋ RGV ಹಾಗೂ ಉಪೇಂದ್ರ ಈಗ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಟೈಟಲ್ ರಿಲೀಸ್ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಟೈಟಲ್ ಲಾಂಚ್ ಮಾಡಿದ್ಧಾರೆ..

ರಿಯಲ್ ಸ್ಟಾರ್ ಉಪೇಂದ್ರ (Upendra) ಓಂ ಸಿನಿಮಾ ಮೂಲಕ ಕ್ರೌರ್ಯವನ್ನ ಪ್ರೇಮ ಗೆಲ್ಲಬಹುದು ಎಂದು ಓಂಕಾರ ಬರೆದ್ರು. ಆರ್‌ಜಿವಿ (RGV) ಶಿವ (Shiva) ಸಿನಿಮಾ ಮೂಲಕ ಲೇಖನಿ ಹಿಡಿಯೋ ಕೈಯಲ್ಲಿ ಕತ್ತಿ ಹಿಡಿಸಿ ಶಿವ ತಾಂಡವ ಆಡಿದ್ರು. ಉಪ್ಪಿಯ ಎ ಸಿನಿಮಾ ಪ್ರೇಕ್ಷಕರನ್ನ ತಲೆಗೆ ಹುಳ ಬಿಟ್ಟಿತು.

ವರ್ಮಾರ ಸತ್ಯ ಸಿನಿಮಾ  ಅಂಡರ್‌ವರ್ಲ್ಡ್ ಕಥೆ ಹೇಳ್ತು. ಉಪ್ಪಿ ಸಿನಿಮಾಗಳು ವೇದಾಂತ ಹೇಳಿದ್ರೆ, ಆರ್‌ಜಿವಿ ಸಿನಿಮಾಗಳ ರಕ್ತಚರಿತ್ರೆ ಬರೆದ್ವು. ಹೀಗೆ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರೋ ಈ ಲೆಜೆಂಡರಿ ಸ್ಟಾರ್ ಡೈರೆಕ್ಟರ್ ಈಗ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಟೈಟಲ್ ರಿಲೀಸ್ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಟೈಟಲ್ ಲಾಂಚ್ ಮಾಡಿದ್ಧಾರೆ.

 ರಿಯಲ್ ಸ್ಟಾರ್ ಉಪ್ಪಿ ಸಿನಿಮಾಗಳ ಶೀರ್ಷಿಕೆ ವಿಶೇಷ ಮತ್ತು ವಿಭಿನ್ನವಾಗಿರುತ್ತೆ. ಆ ಟೈಟಲ್ನಲ್ಲೇ ಸಿನಿಮಾ ಮೇಲೆ ದೊಡ್ಡ ಕುತೂಹಲ ಹುಟ್ಟಿಸ್ತಾರೆ ರಿಯಲ್ ಸ್ಟಾರ್. ಇನ್ನು ರಾಮ್ ಗೋಪಾಲ್ ವರ್ಮಾ ಏನು ಕಡಿಮೆ ಅಲ್ಲ. ರಕ್ತಸಿಕ್ತ ಕತೆಯನ್ನ ಹಾಗೆ ತೆರೆದಿಡೋ ವರ್ಮಾ ಕೂಡ ವಿಭಿನ್ನ ಸಿನಿಮಾಗಳಿಗೆ ಹೆಸರುವಾಸಿ. ಈಗ ಈ ಇಬ್ಬರ ಲೆಜೆಂಡರಿ ಕಾಂಬಿನೇಷನ್ನಲ್ಲಿ ಬರುತ್ತಿರೋ ಹೊಸ ಸಿನಿಮಾಗೆ ಐ ಯಾಮ್ ಆರ್ ಎಂದು ಟೈಟಲ್ ಇಡಲಾಗಿದೆ. ಉಪ್ಪಿ ಅಂದು A ಸಿನಿಮಾ ಮಾಡಿ ಐ ಯಾಮ್ ಗಾಡ್ ಗಾಡ್ ಈಸ್ ಗ್ರೇಟ್ ಎಂದಿದ್ರು. ಇಂದು ಐ ಯಾಮ್ ಆರ್.... ಆರ್ ಈಸ್ ವಾಟ್ ಅಂತ ಪ್ರಶ್ನೆ ಮಾಡಿ ತಲೆಗೆ ಹುಳ ಬಿಟ್ಟಿದ್ದಾರೆ. ಕಿಚ್ಚ ಸುದೀಪ್ ಪ್ರಕಾರ ಐ ಯಾಮ್ ಆರ್ ಅಂದ್ರೆ ಏನು ಅಂತ ಅವರ ಮಾತುಗಳಿಂದಲೇ ಕೇಳಿ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೆಂಚುರಿ ಸ್ಟಾರ ಶಿವರಾಜ್ ಕುಮಾರ್ ಜೊತೆ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡಿ ಕನ್ನಡಿಗರಿಗೆ ತುಂಬಾ ಹತ್ತಿರ ಆಗಿದ್ದಾರೆ. ರಿಯಲ್ ಸಿನಿಮಾಗಳ ರಿಯಲಿಸ್ಟಿಕ್ ಆಗೆ ಕಟ್ಟಿಕೊಡೋ ವರ್ಮಾ ಈಗ ಉಪ್ಪಿಯ ಐ ಯಾಮ್ ಆರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ರಿಯಲ್ ಸ್ಟಾರ್‌ಗಳನ್ನು ಪಕ್ಕಾ ಮಾಸ್ ಲುಕ್‌ನಲ್ಲಿ ತೋರಿಸುತ್ತಿದ್ದಾರೆ. ಮಾಸ್ ಅವತಾರದ ಐ ಯಾಮ್ ಆರ್ ಸಿನಿಮಾದ ಫಸ್ಟ್ ಲುಕ್ ಈ ಸಿನಿಮಾದಲ್ಲಿ ಏನಿರಬಹುದು ಅನ್ನೋ ಕುತೂಹಲ ಮೂಡಿಸಿದೆ.
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more