ಮುಂದೆ ಹೋಯ್ತಾ UI ರಿಲೀಸ್ ಡೇಟ್?: ರಿಯಲ್ ಸ್ಟಾರ್ ಉಪೇಂದ್ರ ಸೈಲೆನ್ಸ್ ಸೀಕ್ರೆಟ್?

ಮುಂದೆ ಹೋಯ್ತಾ UI ರಿಲೀಸ್ ಡೇಟ್?: ರಿಯಲ್ ಸ್ಟಾರ್ ಉಪೇಂದ್ರ ಸೈಲೆನ್ಸ್ ಸೀಕ್ರೆಟ್?

Published : Oct 07, 2024, 12:22 PM ISTUpdated : Oct 07, 2024, 12:21 PM IST

ರಿಯಲ್ ಸ್ಟಾರ್ ಉಪೇಂದ್ರ ನಟನೆ ನಿರ್ದೇಶನದ ಬಹುನಿರೀಕ್ಷೆಯ UI ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ತೆರೆಗೆ ಬರೋದು ಫಿಕ್ಸ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಅದೆಷ್ಟು ಕ್ರೇಜ್ ಇರುತ್ತೆ ಅನ್ನೋದು ಗೊತ್ತೇ ಇದೆ.

ರಿಯಲ್ ಸ್ಟಾರ್ ಉಪೇಂದ್ರ ನಟನೆ ನಿರ್ದೇಶನದ ಬಹುನಿರೀಕ್ಷೆಯ UI ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ತೆರೆಗೆ ಬರೋದು ಫಿಕ್ಸ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಅದೆಷ್ಟು ಕ್ರೇಜ್ ಇರುತ್ತೆ ಅನ್ನೋದು ಗೊತ್ತೇ ಇದೆ. ಆದ್ರೆ ಈ ಕ್ರೇಜ್​ಗೆ ತಕ್ಕಂತೆ ಸಿನಿಮಾದ ಪಬ್ಲಿಸಿಟಿ ಶುರುವಾಗಿಲ್ಲವೇಕೆ..? ಉಪ್ಪಿ ಯಾಕಿಷ್ಟು ಸೈಲೆಂಟ್ ಆಗಿದ್ದಾರೆ ಅನ್ನೋ ಪ್ರಶ್ನೆ ಫ್ಯಾನ್ಸ್​ನ ಕಾಡ್ತಾ ಇದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆ-ನಿರ್ದೇಶನದ ಮೋಸ್ಟ್ ಅವೇಟೆಡ್ ಮೂವಿ UI  ಅಕ್ಟೋಬರ್ ನಲ್ಲಿ ರಿಲೀಸ್ ಅನ್ನೋದನ್ನ ಈಗಾಗ್ಲೇ ಅನೌನ್ಸ್ ಮಾಡಿದೆ. ಅಕ್ಟೋಬರ್ 31ರಂದು ಸಿನಿಮಾ ತೆರೆಗೆ ಬರೋದು ಕೂಡ ಬಹುತೇಕ ಫಿಕ್ಸ್ ಆಗಿದೆ. ಅಲ್ಲಿಗೆ ಸಿನಿಮಾ ರಿಲೀಸ್​ಗೆ ಬಾಕಿ ಇರೋದು ಇನ್ನು 3 ವಾರಗಳು ಮಾತ್ರ.  ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಅದೆಂಥಾ ಕ್ರೇಜ್ ಸೃಷ್ಟಿಯಾಗುತ್ತೆ ಅನ್ನೋದು ಗೊತ್ತೇ ಇದೆ. UI ಬಗ್ಗೆಯೂ ಅಷ್ಟೇ ದೊಡ್ಡ ನಿರೀಕ್ಷೆ ಇದೆ. 

UI ಅನ್ನೋ ವಿಭಿನ್ನ ಟೈಟಲ್, ಚಿತ್ರವಿಚಿತ್ರ ಪೋಸ್ಟರ್ಸ್, ಉಪ್ಪಿಯ ಡಿಫರೆಂಟ್ ಗೆಟಪ್ಸ್ ನೋಡಿದವರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. 8 ವರ್ಷಗಳ ಬಳಿಕ ರಿಯಲ್ ಉಪ್ಪಿ ಮತ್ತೆ ಡೈರೆಕ್ಷನ್ ಮಾಡಿದ್ದು,. ಈ ಸಾರಿ ಉಪ್ಪಿ ಅದೆಂಥಾ ಕಥೆ ಹೇಳ್ತಾರೆ ಅಂತ ಪ್ಯಾನ್ ಇಂಡಿಯಾದುದ್ದಕ್ಕೂ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಟ್ರೋಲ್ ಆಗುತ್ತೆ ಹಾಡು.. ಮತ್ತು ಟೀಸರ್..  ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಮೂಡುವಂತೆ ಮಾಡಿವೆ. ಅದ್ರಲ್ಲೂ ವಿಭಿನ್ನ ಟೀಸರ್ ಮೂಲಕ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟಿದ್ದಾರೆ ಉಪ್ಪಿ. ಆದ್ರೆ ಇಷ್ಟೆಲ್ಲಾ ನಿರೀಕ್ಷೆ ಮೂಡಿಸಿದ್ರೂ UI ಟೀಮ್ ಇನ್ನೂ ಪಬ್ಲಿಸಿಟಿ ಯಾಕೆ ಶುರುಮಾಡಿಲ್ಲ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. UI ಪ್ಯಾನ್ ಇಂಡಿಯಾ ತೆರೆಗೆ ಬರಲಿರೋ ಸಿನಿಮಾ. ಪ್ಯಾನ್ ಇಂಡಿಯಾ ರೀಚ್ ಆಗಬೇಕು ಅಂದ್ರೆ ದೇಶದ ನಾನಾ ನಗರಗಳಿಗೆ ಹೋಗಿ ಪಬ್ಲಿಸಿಟಿ ಮಾಡಬೇಕು. ಆದ್ರೆ ಉಪ್ಪಿ ಯಾಕಿಷ್ಟು ಸೈಲೆಂಟ್ ಆಗಿದ್ದಾರೆ ಅನ್ನೋದು ಫ್ಯಾನ್ಸ್ ಪ್ರಶ್ನೆ. 

ಹೌದು ಉಪ್ಪಿ ಇಷ್ಟು ದಿನ ತಮ್ಮ ಸಿನಿಮಾದಲ್ಲಿ ಕಂಟೆಂಟ್ ಮೇಲೆ ಜಾಸ್ತಿ ಕೆಲಸ ಮಾಡ್ತಾ ಇದ್ರು. ಆದ್ರೆ ಈ ಸಾರಿ ಮಾತ್ರ ಹೊಸ ಟ್ರೆಂಡ್​ಗೆ ತಕ್ಕಂತೆ ವಿಷ್ಯುವಲ್ ಟ್ರೀಟ್ ಕಟ್ಟಿಕೊಡೋಕೆ ಸಜ್ಜಾಗಿದ್ದಾರೆ. ಸಿನಿಮಾದಲ್ಲಿ ದೊಡ್ಡ ಮಟ್ಟದ ಸಿಜಿ-ವಿಎಫ್​ಎಕ್ಸ್ ವರ್ಕ್ ಇದ್ದು ಅದಕ್ಕಾಗಿ ಸಿಕ್ಕಾಪಟ್ಟೆ ಸಮಯ ವ್ಯಯಿಸಲಾಗಿದೆ. ಈಗಲೂ ರಿಯಲ್ ಸ್ಟಾರ್ ಚಿತ್ರದ ಫೈನಲ್ ಔಟ್​ಪುಟ್ ಹೀಗೆ ಇರಬೇಕು ಅಂತ ಪಟ್ಟು ಹಿಡಿದಿದ್ದಾರೆ. ವಿಎಫ್​ಎಕ್ಸ್​ ವರ್ಕ್ ಪೈನಲ್ ಆಗದೇ ಪಬ್ಲಿಸಿಟಿ ಸ್ಟಾರ್ಟ್ ಮಾಡೋದು ಬೇಡ ಅಂತ ಫಿಕ್ಸ್ ಆಗಿದ್ದಾರೆ. ಅದಕ್ಕಾಗೇ UI ವಿಚಾರದಲ್ಲಿ ಇಷ್ಟೊಂದು ಸೈಲೆಂಟ್ ಆಗಿರೋದು. ಈ ಹಿಂದೆ ಅಕ್ಟೋಬರ್ ನಲ್ಲಿ ರಿಲೀಸ್ ಅಂತ ಇಡೀ ತಂಡ ಹೇಳಿದ್ರೂ, ಉಪ್ಪಿ ಮಾತ್ರ ‘ರಿಲೀಸ್ ನಿಜ ಆದ್ರೆ ಸಿನಿಮಾ ರಿಲೀಸ್ ಅಂತ ಹೇಳಿಲ್ಲವಲ್ಲ’ ಅಂತಂದು ಫ್ಯಾನ್ಸ್ ತಲೆಗೆ ಹುಳ ಬಿಟ್ಟಿದ್ರು. ಸದ್ಯದ ಬೆಳವಣಿಗೆ ನೋಡ್ತಿದ್ರೆ UI ಮುಂದಕ್ಕೆ ಹೋದ್ರೂ ಅಚ್ಚರಿಪಡಬೇಕಿಲ್ಲ. ಆದ್ರೆ ಸಿನಿಮಾ ತೆರೆಮೇಲೆ ಬಂದಾಗ ಉಪ್ಪಿ ಅದ್ಭುತ  ಅನುಭವವೊಂದನ್ನ ಕಟ್ಟಿಕೊಡೋದ್ರಲ್ಲಿ ಡೌಟೇ ಇಲ್ಲ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more