ಏಕಾಂತದ ಬಗ್ಗೆ ರಜನಿಕಾಂತ್ ಉಪ್ಪಿಗೆ ಹೇಳಿದ್ದೇನು? ವಿದ್ಯಾರ್ಥಿಗಳಿಗೆ ಜೀವನ ಪಾಠ ಹೇಳಿದ ನಟ

Dec 6, 2024, 11:36 PM IST

ರಿಯಲ್ ಸ್ಟಾರ್ ಉಪೇಂದ್ರ ನಟನೆ ನಿರ್ದೇಶನ UI ರಿಲೀಸ್​ಗೆ ಸಜ್ಜಾಗಿದೆ. ಉಪೇಂದ್ರ ಸದ್ಯ ಚಿತ್ರದ ಪ್ರಚಾರದಲ್ಲಿ ಬ್ಯುಸಿ. ಇತ್ತೀಚಿಗೆ ಉಪೇಂದ್ರ ಹುಬ್ಬಳ್ಳಿ ಧಾರವಾಡಕ್ಕೆ ತೆರಳಿ UI ಪಬ್ಲಿಸಿಟಿ ಮಾಡಿದ್ದಾರೆ. ಜೊತೆಗೆ ಜಿಲ್ಲಾಡಳಿತ ಆಯೋಜಿಸಿದ್ದ ಮಾದಕವಸ್ತು ವಿರೋಧಿ ಅಭಿಯಾನದಲ್ಲಿ ಭಾಗಿಯಾಗಿ, ವಿಧ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. 
 
ತಪ್ಪು ಅಂತ ಹೇಳೊದನ್ನೇ ನಮ್ಮ ಮನಸು ಮಾಡ್ಲಿಕ್ಕೆ ಮುಂದಾಗುತ್ತೆ. ನಾವು ಮಾನಸಿಕವಾಗಿ ಸ್ಟ್ರಾಂಗ್ ಆಗಬೇಕು ಅಂದ್ರೆ ನಮ್ಮ ಜೊತೆಗೆ ನಾವು ಮಾತನಾಡಿಕೊಳ್ಳಬೇಕು ಅಂತ ಹೇಳಿದ್ದಾರೆ. ಇತ್ತೀಚಿಗೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಉಪ್ಪಿಗೆ ಈ ಮಾತು ಹೇಳಿದ್ರಂತೆ.

ಗಂಡನಿಂದ ದೂರ ಎಂಬ ಸುದ್ದಿ ಬೆನ್ನಲ್ಲೇ ಐಶ್ವರ್ಯಾ ಜತೆಗಿನ ಹಳೆಯ ಸಂಬಂಧದ ಬಗ್ಗೆ ಮಾತನಾಡಿದ ವಿವೇಕ್ ಓಬೆರಾಯ್
 
ವಿಧ್ಯಾರ್ಥಿಗಳಿಗೆ ಒಂಚೂರು ಪಾಠ ಹೇಳಿ, ಸೆಲ್ಫಿಗಳಿಗೆ ಪೋಸ್ ಕೊಟ್ಟ ಉಪ್ಪಿ ಇದೇ ಡಿಸೆಂಬರ್ 20ಕ್ಕೆ ಬರಲಿರೋ ತಮ್ಮ ಸಿನಿಮಾವನ್ನ ನೋಡಿ ಎಂಜಾಯ್ ಮಾಡಿ ಅಂತಲೂ ಹೇಳಿದ್ರು. ಅಸಲಿಗೆ UI ಸಿನಿಮಾ ಟ್ರೈಲರ್ ಇತ್ತೀಚಿಗೆ ರಿಲೀಸ್ ಆಗಿ ಟ್ರೆಂಡಿಂಗ್​ ನಲ್ಲಿದೆ. ಈ ಟ್ರೈಲರ್ ಕಂ ವಾರ್ನರ್ ನೋಡಿದವರು ಇದೊಂದು ಸಂಥಿಂಗ್ ಡಿಫ್ರೆಂಟ್ ಸಿನಿಮಾ ಅಂತ ಊಹೆ ಮಾಡ್ತಾ ಇದ್ದಾರೆ.
 
ಉಪೇಂದ್ರ ನಿರ್ದೇಶನ ಮಾಡ್ತಾರೆ ಅಂದ್ರೆ ಸಹಜವಾಗೇ ದೊಡ್ಡ ನಿರೀಕ್ಷೆ ಸೃಷ್ಟಿಯಾಗುತ್ತೆ. ಉಪ್ಪಿ 9 ವರ್ಷಗಳ ನಂತರ ಡೈರೆಕ್ಟ್ ಮಾಡಿರೋ ಯುಐ ಮೂವಿ ಬಗ್ಗೆಯೂ ದೊಡ್ಡ ಹೈಪ್ ಸೃಷ್ಟಿಯಾಗಿದೆ, ಉಪ್ಪಿ ರಾಜ್ಯಾದ್ಯಂತ ಸುತ್ತಾ ಪ್ರಚಾರ ಮಾಡಿ UI ಕುರಿತ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚು ಮಾಡ್ತಾ ಇದ್ದಾರೆ.