Jan 9, 2025, 6:45 PM IST
ಮಂಡ್ಯ ಸೊಗಡಿನ ರಾವಣಾಪುರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕುಮಾರ್ ಎಂ ಬಾವಗಳ್ಳಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಸ್ನೇಹಿತರೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನೇ ಸಿನಿಮಾ ಮಾಡಿದ್ದಾರೆ. ಮಂಡ್ಯ ಸೊಗಡಿನ ರಾವಣಾಪುರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕುಮಾರ್ ಎಂ ಬಾವಗಳ್ಳಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಸ್ನೇಹಿತರೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನೇ ಸಿನಿಮಾ ಮಾಡಿದ್ದಾರೆ. ರಾವಣಾಪುರ ಸಿನಿಮಾದಲ್ಲಿ ರತ್ನನ್ ಕಲ್ಯಾಣ್, ರಕ್ಷಾ, ದಿಲೀಪ್ ಕುಮಾರ್ ಎಂ, ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಎಲ್ ನಾಗಭೂಷಣ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆಯಾಗಿರುವ ಟ್ರೇಲರ್ ಸಾಕಷ್ಟು ಗಮನ ಸೆಳೆಯುತ್ತಿದ್ದು, ಇದು ಆಕ್ಷನ್ ಓರಿಯಂಟೆಡ್ ಸಿನಿಮಾ ಎನ್ನಬಹುದು. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು ಎನ್ನಲಾಗಿದ್ದು, ಈ ಕಾರಣಕ್ಕೆ ಈ ಘಟನೆ ಯಾವಾಗ ಮತ್ತು ಎಲ್ಲಿ ಆಗಿದ್ದು ಎಂಬ ಕುತೂಹಲ ಕೆರಳಿಸುವಂತಾಗಿದೆ.