Jan 3, 2025, 11:25 AM IST
2016ರ ಡಿಸೆಂಬರ್ 30ಕ್ಕೆ ಸ್ಯಾಂಡಲ್ವುಡ್ನಲ್ಲಿ ಕಿರಿಕ್ ಪಾರ್ಟಿ () ಅನ್ನೋ ಹೊಸತನದ ಸಿನಿಮಾ ಬಂದು ಹೊಸ ಅಲೆ ಎಬ್ಬಿಸಿತ್ತು. ಈ ಸಿನಿಮಾದಲ್ಲಿ ನಟಿಸಿದವರು ಈಗ ಪ್ಯಾನ್ ಇಂಡಿಯಾ ತಾರೆಯರಾಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಇವರ ನಡುವೆ ನಡೆದ ಕಿರಿಕ್ ಮಾತ್ರ ಕೊನೆಯಾಗಿಲ್ಲ. ಕಿರಿಕ್ ಪಾರ್ಟಿಗೆ 8 ವರ್ಷ ತುಂಬಿದ ಬೆನ್ನಲ್ಲೇ ಈ ಕಿರಿಕ್ ಎಪಿಸೋಡ್ ಆಚೆ ಬಂದಿದೆ.
ಇತ್ತೀಚಿಗೆ ಸ್ಯಾಂಡಲ್ವುಡ್ನಲ್ಲಿ ಒಂದು ಹೊಸ ಕಿರಿಕ್ ಶುರುವಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಮೇಲೆ ನ್ಯಾಷನಲ್ ಕ್ರಶ್ ರಶ್ಮಿಕಾ ಫ್ಯಾನ್ಸ್ (Rashmika Mandanna) ಗರಂ ಆಗಿದ್ದಾರೆ. ಅರೇ ಅದ್ಯಾಕಪ್ಪಾ ಶೆಟ್ಟರ ಮೇಲೆ ರಶ್ಮಿಕಾ ಫ್ಯಾನ್ಸ್ ಕೋಪ ಅಂತೀರಾ.. ಅದಕ್ಕೆ ಕಾರಣನೇ ರಿಷಬ್ ಹಾಕಿದ ಈ ಪೋಸ್ಟ್.
ಡಿಸೆಂಬರ್ 30ನೇ ತಾರೀಖು ರಿಷಬ್ ಒಂದು ಪೋಸ್ಟ್ ಹಾಕಿದ್ದಾರೆ. ತಮ್ಮ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾಗೆ 8 ವರ್ಷ ತುಂಬಿದ ಹಿನ್ನೆಲೆ ಚಿತ್ರದ ಪೋಸ್ಟರ್ ಶೇರ್ ಮಾಡಿ ರಕ್ಷಿತ್ (Rakshit Shetty) ಅಂಡ್ ಟೀಂನ ನೆನೆಪಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಷ್ಟು ದೊಡ್ಡ ಗೆಲುವು ತಂದುಕೊಟ್ಟ ಪ್ರೇಕ್ಷಕರಿಗೂ ಧನ್ಯವಾದ ಹೇಳಿದ್ದಾರೆ.
ಆದ್ರೆ ಈ ಪೋಸ್ಟ್ನಲ್ಲಿ ರಶ್ಮಿಕಾ ಹೆಸರಿಲ್ಲ. ಪೋಸ್ಟರ್ನಲ್ಲೂ ರಶ್ಮಿಕಾ ಇಲ್ಲ. ಬೇಕಂತಲೇ ರಿಷಬ್ ಈ ರೀತಿ ಮಾಡಿದ್ದಾರೆ ಅನ್ನೋದು ರಶ್ಮಿಕಾ ಫ್ಯಾನ್ಸ್ ಆರೋಪ. ಅಸಲಿಗೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಮೊದಲ ನಾಯಕಿ, ಸಂಯುಕ್ತಾ ದ್ವಿತೀಯ ನಾಯಕಿ. ಈ ಪೋಸ್ಟರ್ನಲ್ಲಿ ಸಂಯುಕ್ತಾ ಇದ್ದಾಳೆ. ಅದ್ರೆ ರಶ್ಮಿಕಾ ಮಾಯ.
ಕಿರಿಕ್ ಪಾರ್ಟಿ ರಶ್ಮಿಕಾಳ ಮೊದಲ ಸಿನಿಮಾ. ರಕ್ಷಿತ್ ಌಂಡ್ ರಿಷಬ್ ಈಕೆಯನ್ನ ಬಣ್ಣದ ಲೋಕಕ್ಕೆ ಪರಿಚಯಿಸಿದ್ರು. ಮೊದಲ ಚಿತ್ರವೇ ಸೂಪರ್ ಹಿಟ್ ಆಯ್ತು. ಇಲ್ಲಿಂದ ಟಾಲಿವುಡ್ಗೆ.. ಅಲ್ಲಿಂದ ಬಾಲಿವುಡ್ಗೆ ಹಾರಿದ ರಶ್ಮಿಕಾ ನ್ಯಾಷನಲ್ ಕ್ರಶ್ ಆದ್ಳು. ಸದ್ಯ ಸಲ್ಮಾನ್ ಖಾನ್ ಜೊತೆ ನಟಿಸ್ತಾ ಇರೋ ರಶ್ಮಿಕಾ ಇಡೀ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಅತಿಹೆಚ್ಚು ಸಂಭಾವನೆ ಪಡೆಯೋ ನಟಿಮಣಿ ಎನ್ನಿಸಿಕೊಂಡಿದ್ದಾಳೆ.
ಇತ್ತ 777 ಚಾರ್ಲಿ ಮೂಲಕ ರಕ್ಷಿತ್, ಕಾಂತಾರ ಮೂಲಕ ರಿಷಬ್ ಕೂಡ ಪ್ಯಾನ್ ಇಂಡಿಯಾ ತಮ್ಮದೇ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ. ಆದ್ರೆ ಇಷ್ಟು ಎತ್ತರಕ್ಕೆ ಬೆಳೆದರೂ ಈ ಮೂವರ ನಡುವಿನ ಕಿರಿಕ್ ಮಾತ್ರ ಕೊನೆಯಾಗೋದಿಲ್ಲ ಅನ್ನೋದನ್ನ ರಿಷಬ್ ಸೂಚ್ಯವಗಿ ಹೇಳಿದ್ದಾರೆ.
ಅಸಲಿಗೆ ಕಿರಿಕ್ ಪಾರ್ಟಿ ಸಿನಿಮಾದ ಬಳಿಕ ರಕ್ಷಿತ್ ಌಂಡ್ ರಶ್ಮಿಕಾ ಪ್ರೀತಿಯಲ್ಲಿ ಬಿದ್ದಿದ್ರು. ಇಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಆದ್ರೆ ಮುದ್ರೆ ರಶ್ಮಿಕಾ ಈ ಸಂಬಂಧವನ್ನ ಮುರಿದುಕೊಂಡ್ರು. ರಕ್ಷಿತ್ ಮನಸ್ಸನ್ನ ಒಡೆದು ಮುಂದಕ್ಕೆ ನಡೆದ್ರು.
ಇನ್ನೂ ಟಾಲಿವುಡ್, ಬಾಲಿವುಡ್ನಲ್ಲಿ ನೀಡಿದ ಸಂದರ್ಶನಗಳಲ್ಲಿ ರಶ್ಮಿಕಾ ಅಪ್ಪಿ ತಪ್ಪಿಯೂ ತನ್ನನ್ನ ಪರಿಚಯಿಸಿದ ರಕ್ಷಿತ್, ರಿಷಬ್ ಹೆಸರನ್ನ ಹೇಳೋದಿಲ್ಲ. ಆದ್ರೆ ಇದೆಲ್ಲದರ ಹೊರತಾಗಿಯೂ ರಕ್ಷಿತ್ ಶೆಟ್ಟಿ ಎಲ್ಲೂ ರಶ್ಮಿಕಾ ಬಗ್ಗೆ ಇರೋ ಅಸಮಾಧಾನ ಹೇಳಿಕೊಂಡಿಲ್ಲ.
ಆದ್ರೆ ರಕ್ಷಿತ್ ಮರೆತ್ರೂ ರಿಷಬ್ ಮಾತ್ರ ರಶ್ಮಿಕಾ ಮೇಲಿನ ಕೋಪ ಮರೆತಿಲ್ಲ. ಚಾನ್ಸ್ ಸಿಕ್ಕಾಗೆಲ್ಲಾ ನ್ಯಾಷನಲ್ ಕ್ರಶ್ ಗೆ ಪಂಚ್ ಕೊಡ್ತಾನೇ ಇರ್ತಾರೆ. ಸದ್ಯ ಕಿರಿಕ್ ಪಾರ್ಟಿ ಌನಿವರ್ಸರಿ ನೆಪದಲ್ಲಿ ಮತ್ತೊಮ್ಮೆ ಕೊಟ್ಟಿದ್ದಾರೆ. ಕಿರಿಕ್ ಗ್ಯಾಂಗ್ನಿಂದ ರಶ್ಮಿಕಾನ ಆಚೆ ಇಟ್ಟು ನಿನಗೆ ನಮ್ಮ ಪ್ರಪಂಚದಲ್ಲಿ ಮತ್ತೆ ಜಾಗ ಇಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..