ಸಿನಿಮಾದಲ್ಲಿ ಮಾತ್ರ ಅಲ್ಲ ಜಾಹೀರಾತಿನಲ್ಲೂ  ರಶ್ಮಿಕಾ ಮಂದಣ್ಣ ನಂ 1..!

ಸಿನಿಮಾದಲ್ಲಿ ಮಾತ್ರ ಅಲ್ಲ ಜಾಹೀರಾತಿನಲ್ಲೂ ರಶ್ಮಿಕಾ ಮಂದಣ್ಣ ನಂ 1..!

Published : May 16, 2022, 04:36 PM ISTUpdated : May 16, 2022, 05:38 PM IST

ಟಾಲಿವುಡ್ನಲ್ಲಿ ಶ್ರೀವಲ್ಲಿ ಅಂತಲೇ ಫೇಮಸ್ ಆಗಿರೋ ರಶ್ಮಿಕಾ ಮಂದಣ್ಣ (Rashmika Mandanna) ಜಾಹಿರಾತು ಲೋಕದ ಫಸ್ಟ್ ಆ್ಯಂಡ್ ಬೆಸ್ಟ್ ಸೆಲೆಕ್ಷನ್ ಆಗಿದ್ದಾರೆ. ಯಾವ್ದೆ ಹೊಸ ಹೊಸ ಪ್ರಾಡೆಕ್ಟ್ ಬಂದ್ರು, ಅದರ ಪ್ರಮೋಟ್ ಮಾಡೋದಕ್ಕೆ ಕಂಪನಿಗಳು ಲಿಲ್ಲಿಯನ್ನ ಅರಸಿ ಬರುತ್ತಿವೆ.

ಬಣ್ಣದ ಜಗತ್ತಿನಲ್ಲಿ ಈಗ ಕಿರಿಕ್ ಹುಡ್ಗಿ ರಶ್ಮಿಕಾರದ್ದು (Rashmika Mandanna) ಟೈಂ. ಈಗೀಗ ಕನ್ನಡ ಸಿನಿಮಾಗಳ ಕಡೆ ತಿರುಗಿಯೂ ನೋಡದ ಈ ಸುಂದರಿ ಟಾಲಿವುಡ್, ಬಾಲಿವುಡ್ನಲ್ಲಿ ಬ್ಯುಸಿ ಆಗ್ಬಿಟ್ಟಿದ್ದಾರೆ. ಪುಷ್ಪ ಸಿನಿಮಾದಿಂದ ಪ್ಯಾನ್ ಇಂಡಿಯಾ ಹೀರೋಯಿನ್ ಆದ್ಮೇಲಂತೂ ಶ್ರೀವಲ್ಲಿಯ ಫೇಮನ್ನ ತಡೆಯೋಕೆ ಆಗ್ತಿಲ್ಲ. ಹೀಗಾಗಿ ರಶ್ಮಿಕಾರ ಇದೇ ರೈಟ್ ಟೈಂ ಅನ್ನ ಭಾರತದ ಪ್ರತಿಷ್ಠಿತ ಜಾಹೀರಾತು ಕಂಪನಿಗಳು ಬಳಸಿಕೊಳ್ಳುತ್ತಿದ್ದು, ತಮ್ಮ ಪ್ರಾಡೆಕ್ಟ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಡಿಯರ್ ರಶ್ಮಿಕಾರನ್ನೇ ಮೊದಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ನ್ಯಾಷನಲ್ ಕ್ರಶ್ ಒಟ್ಟು 14 ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. 

ಟಾಲಿವುಡ್ನಲ್ಲಿ ಶ್ರೀವಲ್ಲಿ ಅಂತಲೇ ಫೇಮಸ್ ಆಗಿರೋ ರಶ್ಮಿಕಾ ಮಂದಣ್ಣ (Rashmika Mandanna) ಜಾಹಿರಾತು ಲೋಕದ ಫಸ್ಟ್ ಆ್ಯಂಡ್ ಬೆಸ್ಟ್ ಸೆಲೆಕ್ಷನ್ ಆಗಿದ್ದಾರೆ. ಯಾವ್ದೆ ಹೊಸ ಹೊಸ ಪ್ರಾಡೆಕ್ಟ್ ಬಂದ್ರು, ಅದರ ಪ್ರಮೋಟ್ ಮಾಡೋದಕ್ಕೆ ಕಂಪನಿಗಳು ಲಿಲ್ಲಿಯನ್ನ ಅರಸಿ ಬರುತ್ತಿವೆ. ಈ ಹಿಂದೆ ಕತ್ರಿನಾ ಕೈಫ್, ಪೂಜಾ ಹೆಗ್ಡೆ ಹೆಚ್ಚು ಜಾಹಿರಾತುಗಳಲ್ಲಿ ಮಿಂಚುತ್ತಿದ್ರು. ಆದ್ರೆ ಅವರನ್ನ ಹಿಂದಿಕ್ಕಿರೋ ರಶ್ಮಿಕಾ ಈಗ 14ಕ್ಕು ಹೆಚ್ಚು ಜಾಹೀರಾತುಗಳಲ್ಲಿ ನಟಿಸೋ ಮೂಲಕ ಪ್ರಾಡೆಕ್ಟ್ ಪ್ರಮೋಟರ್ನಲ್ಲೂ ನಂ-1 ಸ್ಥಾನ ಪಡೆದಿದ್ದಾರೆ. 

 ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಒಂದ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕು ಅಂದ್ರೆ ನಾಲ್ಕು ಕೋಟಿ ಚಾರ್ಜ್ ಮಾಡ್ತಿದ್ದಾರೆ. ಅದೇ ಜಾಹೀರಾತಿನಲ್ಲಿ ರಶ್ಮಿಕಾ ಬೇಡಿಕೆ ಸ್ವಲ್ಪ ಕಡಿಮೆ. ಯಾಕಂದ್ರೆ ಸಿನಿಮಾ ವಿಚಾರದಲ್ಲಿ ಪೂಜಾ ಹೆಗ್ಡೆ ಜೊತೆ ರಶ್ಮಿಕಾ ಹೇಗೆ ಕದನಕ್ಕಿಳಿದಿದ್ರೋ. ಅದೇ ರೀತಿ ಪುಟ್ಟ ಬೊಮ್ಮ ಪೂಜಾ ಹೆಗ್ಡೆ ಜೊತೆ ಜಾಹೀರಾತಿನಲ್ಲೂ ರಶ್ಮಿಕಾ ಪೈಪೋಟಿ ನಡೆಸಿದ್ರು. ಈ ಪೈಪೋಟಿಯಲ್ಲಿ ರಶ್ಮಿಕಾ 14 ಜಾಹೀರಾತುಗಳಿಗೆ ಪ್ರಮೋಟರ್ ಆಗೋ ಮೂಲಕ ಪೂಜಾರನ್ನ ಹಿಂದಿಕ್ಕಿದ್ದಾರೆ. ಹಾಗಾದ್ರೆ ರಶ್ಮಿಕಾ ಜಾಹೀರಾತಿಗೆ ಎಷ್ಟು ಕೋಟಿ ಸಂಭಾವನೆ ಚಾರ್ಚ್ ಮಾಡ್ತಾರೆ ಅಂತ ಕೇಳಿದ್ರೆ, ಒಂದು ವರೆಯಿಂದ ಎರಡು ಕೋಟಿ ಅಂತ ಹೇಳಲಾಗ್ತಿದೆ. 
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more