ವಿಜಯ್ ಫ್ಯಾಮಿಲಿಗೆ  ಶ್ರೀವಲ್ಲಿ ತೋರಿಸಿದ ರಶ್ಮಿಕಾ, ಗುಸುಗುಸು ಸುದ್ದಿಗೆ ಮತ್ತೊಂದು ಮುದ್ರೆ?

ವಿಜಯ್ ಫ್ಯಾಮಿಲಿಗೆ ಶ್ರೀವಲ್ಲಿ ತೋರಿಸಿದ ರಶ್ಮಿಕಾ, ಗುಸುಗುಸು ಸುದ್ದಿಗೆ ಮತ್ತೊಂದು ಮುದ್ರೆ?

Published : Dec 08, 2024, 12:00 PM ISTUpdated : Dec 08, 2024, 12:31 PM IST

ಈಗ ಎಲ್ಲಿ ನೋಡಿದ್ರೂ ಪುಷ್ಪನದ್ದೇ ಜಪ. ಗುರುವಾರ ತೆರೆಗೆ ಬಂದ ಪುಷ್ಪ-2 ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಅಕ್ಷರಶಃ ವೈಲ್ಡ್ ಫೈರ್​ನಂತೆ ಧಗಧಗಿಸಿದೆ. ಎರಡೇ ದಿನಕ್ಕೆ 400 ಕೋಟಿ ಕ್ಕಬ್ ಸೇರಿ ಸಿನಿಇಂಡಸ್ಟ್ರಿಯ ಹಳೆಯ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ...

ಪುಷ್ಪ-2 ಸಿನಿಮಾ ನೋಡಿದವರೆಲ್ಲಾ ರಶ್ಮಿಕಾ (Rashmika Mandanna) ಪರ್ಫಾರ್ಮೆನ್ಸ್​ನ ಕೊಂಡಾಡ್ತಾ ಇದ್ದಾರೆ. ಗ್ಲಾಮರ್ ಗಮ್ಮತ್ತಿನ ಜೊತೆಗೆ ಅಭಿನಯದಲ್ಲೂ ಮೋಡಿ ಮಾಡಿರೋ ಶ್ರೀವಲ್ಲಿಗೆ ಶಹಬ್ಬಾಷ್ ಅಂತಿದ್ದಾರೆ. ಈ ನಡುವೆ ರಶ್ಮಿಕಾ ದೇವರಕೊಂಡ ಫ್ಯಾಮಿಲಿಯನ್ನ ಕರೆದುಕೊಂಡು ಹೋಗಿ ಸಿನಿಮಾ ತೋರಿಸಿದ್ದಾರೆ. ಪುಷ್ಪನ ಜೊತೆ ರಶ್ಮಿಕಾ ಹಸಿ ಬಿಸಿ ಸೀನ್ಸ್ ನೋಡಿ ದೇವರಕೊಂಡ ಫ್ಯಾಮಿಲಿ ಏನಂದ್ರು..? ಆ ಕುರಿತ ಮಸ್ತ್ ಮಸಾಲ ಸ್ಟೋರಿ ಇಲ್ಲಿದೆ ನೋಡಿ.

ಹೌದು, ಈಗ ಎಲ್ಲಿ ನೋಡಿದ್ರೂ ಪುಷ್ಪನದ್ದೇ ಜಪ. ಗುರುವಾರ ತೆರೆಗೆ ಬಂದ ಪುಷ್ಪ-2 ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಅಕ್ಷರಶಃ ವೈಲ್ಡ್ ಫೈರ್​ನಂತೆ ಧಗಧಗಿಸಿದೆ. ಎರಡೇ ದಿನಕ್ಕೆ 400 ಕೋಟಿ ಕ್ಕಬ್ ಸೇರಿ ಸಿನಿಇಂಡಸ್ಟ್ರಿಯ ಹಳೆಯ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ.

ಪುಷ್ಪ-2ನಲ್ಲಿ ಪುಷ್ಪರಾಜ್ ಅಲ್ಲು ಅರ್ಜುನ್ ಪರ್ಫಾರ್ಮೆನ್ಸ್ ಬಗ್ಗೆ ಎಷ್ಟು ಮೆಚ್ಚುಗೆ ಕೇಳಿ ಬರ್ತಾ ಇದೆಯೋ ಶ್ರೀವಲ್ಲಿ ರಶ್ಮಿಕಾ ನಟನೆಗೂ ಅಷ್ಟೇ ಮೆಚ್ಚುಗೆ ಸಿಕ್ತಾ ಇದೆ. ಪುಷ್ಪನ ಮುದ್ದು ಮಡದಿಯಾಗಿ  ಮಿಂಚಿರೋ ರಶ್ಮಿಕಾ ಒಂದು ದೃಶ್ಯದಲ್ಲಿ ಎಲ್ಲರನ್ನೂ ಸೈಡ್​ಗೆ ಸರಿಸುವಂತೆ ಪರ್ಫಾರ್ಮ್ ಮಾಡಿದ್ದಾರೆ.

ತನ್ನ ಪಾತ್ರಕ್ಕೆ ಸಿಕ್ತಾ ಇರೋ ಪ್ರಶಂಸೆಯಿಂದ ರಶ್ಮಿಕಾ ಫುಲ್ ಖುಷ್ ಆಗಿದ್ದಾರೆ. ತನ್ನ ಅಕೌಂಟ್​ಗೆ ಮತ್ತೊಂದು ಹಿಟ್ ಸೇರಿಸಿಕೊಂಡಿರೋ ಈ ಬ್ಯೂಟಿ ಮತ್ತಷ್ಟು ಸಂಭಾವನೆ ಹೆಚ್ಚಿಸೋ ಲೆಕ್ಕಾಚಾರಲ್ಲಿದ್ದಾರೆ. 

ಹೌದು ಫ್ಯಾನ್ ಶೋನಲ್ಲಿ ಭಾಗಿಯಾದ ಮೇಲೆ ಸಂಜೆ ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆಗೆ ರಶ್ಮಿಕಾ ಮತ್ತೊಮ್ಮೆ ಸಿನಿಮಾ  ನೋಡಿದ್ದಾರೆ. ಹೈದರಾಬಾದ್​ನ ಎಎಂಬಿ ಸಿನಿಮಾಸ್​ನಲ್ಲಿ  ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಹಾಗೂ ವಿಜಯ್ ಸಹೋದರ ಆನಂದ್  ಜೊತೆ ಕಾಣಿಸಿಕೊಂಡಿದ್ದಾರೆ.

ಎಲ್ಲರೂ ಮೆಚ್ತಾ ಇರೋ ತನ್ನ ಸಿನಿಮಾವನ್ನ  ಭಾವಿ ಪತಿಯ ಫ್ಯಾಮಿಲಿಯೂ ನೋಡಿ ಮೆಚ್ಚಲಿ ಅಂತ ಈ ಮನಮೆಚ್ಚಿದ ಸೊಸೆ ಬಯಸಿದಂತಿದೆ. ಆದ್ರೆ ಪುಷ್ಪ ಸಿನಿಮಾದಲ್ಲಿ ಹಸಿ ಬಿಸಿ ರೊಮ್ಯಾನ್ಸ್ ಸೀನ್ಸ್ ಇವೆ. ಪೀಲಿಂಗ್ಸ್ ಸಾಂಗ್​ನಲ್ಲೂ ಶ್ರೀವಲ್ಲಿ ಮೈಚಳಿ ಬಿಟ್ಟು ಪುಷ್ಪನ ಜೊತೆ ಸಲ್ಲಾಪ ಆಡಿದ್ದಾಳೆ. ಇದನ್ನೆಲ್ಲಾ ನೋಡಿ ದೇವರಕೊಂಡ ಫ್ಯಾಮಿಲಿ ಏನಂದ್ರು ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ.!

ಕಳೆದ 6 ವರ್ಷಗಳಿಂದಲೂ ರೌಡಿ ಬಾಯ್ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ  ಡೇಟಿಂಗ್ ಮಾಡ್ತಾ ಇರೋ ವಿಷ್ಯ ಎಲ್ಲರಿಗೂ ಗೊತ್ತೇ ಇದೆ.  ಇದೇ ಪುಷ್ಪ-2 ರಿಲೀಸ್ ಇವೆಂಟ್​​ನಲ್ಲಿ ರಶ್ಮಿಕಾ ತನ್ನ ಪ್ರೀತಿಯ ವಿಚಾರ ಎಲ್ಲರಿಗೂ ಗೊತ್ತಿದೆ ಅಂತ ಖುಲ್ಲಂ ಖುಲ್ಲಂ ಹೇಳಿದ್ರು. ಈ ಇವೆಂಟ್​ಗೂ ಮುನ್ನ ಇಬ್ಬರೂ ರೆಸ್ಟೊರೆಂಟ್​​ವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ರು. 

ಸೋ ವಿಜಯ್ & ರಶ್ಮಿಕಾ ಸದ್ಯದಲ್ಲೇ ತಮ್ಮ  ರಿಲೇಷನ್ ಶಿಪ್​ಗೆ ಅಧಿಕೃತ ಮುದ್ರೆ ಒತ್ತೋದಕ್ಕೆ ತೀರ್ಮಾನಿಸಿದಂತಿದೆ. ಈ ನಡುವೆ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ಕಾಣಿಸಿಕೊಂಡಿರೋದನ್ನ ಕಂಡು ಈ ಗುಸು ಗುಸುಗೆ ಮತ್ತಷ್ಟು ಜೀವ ಬಂದಿದೆ. ಹೆಚ್ಚಿನ ಮಾಹಿಇಗೆ ವಿಡಿಯೋ ನೋಡಿ.. 

 

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more