ನಟ ರಜನಿಕಾಂತ್, ಉಪೇಂದ್ರ, ನಾಗಾರ್ಜುನ, ರಚಿತಾ ರಾಮ್, ಶ್ರುತಿ ಹಾಸನ್ ನಟನೆಯ ಕೂಲಿ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ದಾಖಲೆ ಬರೆದಿತ್ತು. ಈಗ ಚೆನ್ನೈನಲ್ಲಿ ಕೂಡ ಒಳ್ಳೆಯ ದಾಖಲೆ ಬರೆದಿದೆ.
ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಶನ್ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಕೊನೆಗೂ ಸಿನಿಮಾ ರಿಲೀಸ್ ಆಗಿದ್ದು, ರಜನಿಕಾಂತ್ ಆಕ್ಷನ್ ಸಾಹಸವನ್ನು ಎಲ್ಲರೂ ಮೆಚ್ಚಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಅಲ್ಲೂ ಈ ಸಿನಿಮಾ ದಾಖಲೆ ಬರೆದಿದ್ದು, ಸಿನಿಮಾ ರಿಲೀಸ್ ಬಳಿಕ ಕೂಡ ಕಮಾಲ್ ಮಾಡಿದೆ.