Dec 21, 2024, 6:53 PM IST
ತುಮಕೂರು ಜಿಲ್ಲೆ, ತಿಪಟೂರ್‌ನಿಂದ 10 ಕೀಮಿ ದೂರದಲ್ಲಿರುವ ಹೊನ್ನವಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿಯನ್ನು ತೆರವುಗೊಳಿಸಲಾಗಿದೆ. ಹೀಗಾಗಿ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅನುಮತಿ ಇಲ್ಲದೇ ಹೊನ್ನವಳ್ಳಿಯಲ್ಲಿ ಗುರುವಾರ ರಾತ್ರಿ ಪ್ರತಿಷ್ಠಾಪಿಸಿದ್ದ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಪೊಲೀಸರು ಶುಕ್ರವಾರ ಬೆಳಗಿನ ಜಾವ ತೆರವುಗೊಳಿಸಿದ್ದಾರೆ.
ಪುತ್ಥಳಿ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಡಿ. 18ರಂದು 'ಕನ್ನಡ ರಕ್ಷಣಾ ವೇದಿಕೆ'ಯ 'ಅಪ್ಪು ಸೇನೆ' ವತಿಯಿಂದ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅನುಮತಿ ಸಿಗದೆ ಗುರುವಾರ ಮಧ್ಯರಾತ್ರಿ ಪುತ್ಥಳಿ ಅನಾವರಣಗೊಳಿಸಿದ್ದರು. ಬೆಳಗಿನ ಜಾವ ಪೂಜೆ ಮಾಡಲು ತೆರಳುವಷ್ಟರಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪುತ್ಥಳಿ ತೆರವುಗೊಳಿಸಿದ್ದರು ಬಳಿಕ ಹೊನ್ನವಳ್ಳಿ ಗ್ರಾಮ ಪಛಾಯಿತಿಗೆ ಆ ಪುತ್ಥಳಿಯನ್ನು ಪೊಲೀಸರುಹಸ್ತಾಂತರ ಮಾಡಿದ್ದಾರೆ.
ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಇದೀಗ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..