Oct 29, 2022, 10:54 AM IST
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಪ್ರಥಮ ಪುಣ್ಯ ಸ್ಮರಣೆಗೆ ಭರ್ಜರಿ ತಯಾರಿ ನಡೆದಿದ್ದು, ಅಪ್ಪು ಸಮಾಧಿಯ ಬಳಿ ಜನಸಾಗರವೇ ಹರಿದು ಬರುತ್ತಿದೆ. ಸ್ಟುಡಿಯೋದಲ್ಲಿ ಬೃಹತ್ ಕಟೌಟ್'ಗಳನ್ನು ಹಾಕಲಾಗಿದ್ದು, ಬಣ್ಣ ಬಣ್ಣದ ಹೂ ಹಾಗೂ ವಿದ್ಯುತ್ ದೀಪಗಳಿಂದ ಅಪ್ಪು ಸಮಾಧಿಗೆ ಅಲಂಕಾರ ಮಾಡಲಾಗಿದೆ. ಪುನೀತ್ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲು ಹೆಚ್ಚಿನ ಅಭಿಮಾನಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಉತ್ತರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ನಾಲ್ವರು ಎಸಿಪಿ, 12 ಜನ ಇನ್ಸ್ ಪೆಕ್ಟರ್, 15 ಪಿಎಸ್ಐ ಹಾಗೂ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನೇಮಕ ಮಾಡಲಾಗಿದೆ.
ಹುಳುಕು ಹಲ್ಲಿನ ನೋವ್ಯಾಕೆ ? ಮಕ್ಕಳ ಹಲ್ಲಿನ ಆರೋಗ್ಯ ಕಾಪಾಡಲು ಹೀಗೆ ಮಾಡಿ