
ನಿರ್ಮಾಪಕ ಕೆ ಮಂಜು ಅವರು ಪುತ್ರ ಶ್ರೇಯಸ್ ನಟನೆಯ ʼವಿಷ್ಣುಪ್ರಿಯಾʼ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಐವತ್ತಕ್ಕೂ ಹೆಚ್ಚು ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಕೆ ಮಂಜು ಅವರು ಈಗ ತಮ್ಮ ಮಗ ಶ್ರೇಯಸ್‌ಗೋಸ್ಕರ ಅವರು ʼವಿಷ್ಣುಪ್ರಿಯಾʼ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೋಸ್ಕರ ಅವರು ಪ್ರಿಯಾ ವಾರಿಯರ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮಲಯಾಳಂ ನಿರ್ದೇಶಕ ವಿಕೆ ಪ್ರಕಾಶ್ ಅವರನ್ನು ಈ ಸಿನಿಮಾಕ್ಕೆ ಕರೆತಂದಿದ್ದಾರೆ. ಈ ಸಿನಿಮಾ ಶೂಟಿಂಗ್, ಕಥೆ, ಚಿತ್ರರಂಗದಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಅವರು ಮಾತನಾಡಿದ್ದಾರೆ.