ಕನ್ನಡದ ರಾಕ್ಷಸ ಚಿತ್ರದ ತೆಲುಗು ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್! ಏಕಕಾಲದಲ್ಲಿ ರಿಲೀಸ್

Jan 13, 2025, 7:59 PM IST

ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಸಿನಿಮಾ ದೇಶಾದ್ಯಂತ ತೆರೆಗೆ ಬಂದಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಭಾನುವಾರ ರಿಲೀಸ್ ಆಗಿರೋ ಈ ಸಿನಿಮಾಗೆ ಮೊದಲ ದಿನ ಜನಸಾಗರ ಹರಿದುಬಂದಿದೆ. ಬಾಬಿ ನಿರ್ದೇಶನದ ಡಾಕು ಮಹಾರಾಜ್ ಸಿನಿಮಾ ಔಟ್ ಅಂಡ್‌ ಆಕ್ಷನ್ ಚಿತ್ರವಾಗಿದ್ದು, ಈ ಬಾರಿಯ ಸಂಕ್ರಾತಿಗೆ ಭರ್ಜರಿ ಟ್ರೀಟ್ ಎನ್ನಲಾಗ್ತಾ ಇದೆ.

ನಟಿ, ನಿರ್ದೇಶಕಿ ಹಾಗೂ ಸಂಸದೆ ಕಂಗನಾ ರನೌತ್ ಕಳೆದ ಕೆಲವು ದಿನಗಳಿಂದ ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಪ್ರಚಾರದಲ್ಲಿದ್ದಾರೆ. ಸೆನ್ಸಾರ್  ಸಮಸ್ಯೆ ಮತ್ತು ಸಿಖ್ ಸಮುದಾಯದ ಆರೋಪಗಳ ನಂತರ, ಚಿತ್ರ  ಅಂತಿಮವಾಗಿ ಮುಂದಿನ ವಾರ ಬಿಡುಗಡೆ ಆಗ್ತಾ ಇದೆ. ಇತ್ತೀಚಿಗೆ  ಕಂಗನಾ ಅ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನ ಭೇಟಿ ಮಾಡಿ ತಮ್ಮ ಸಿನಿಮಾ ನೋಡುವಂತೆ ಕೇಳಿಕೊಂಡಿದ್ದಾರೆ. ಅಂದಹಾಗೆ ಇದು ಇಂದಿರಾ ಕಾಲದ ಎಮರ್ಜೆನ್ಸಿ ಕಥೆಯಾಗಿದ್ದು ಕಂಗನಾ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾತೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ರಾಕ್ಷಸ ಸಿನಿಮಾ ಈಗಾಗ್ಲೇ ತನ್ನ ಟೀಸರ್​ನಿಂದ ಎಲ್ಲರ ಗಮನ ಸೆಳೆದಿದೆ. ವಿಶೇಷ ಅಂದ್ರೆ ರಾಕ್ಷಸನ ಟೀಸರ್​ ನೋಡಿ ಈ ಸಿನಿಮಾಗೆ ತೆಲುಗಿನಲ್ಲೂ ಒಳ್ಳೆ ಬೇಡಿಕೆ ಬಂದಿದೆ. ಕಂಚಿ ಕಾಮಾಕ್ಷಿ ಕೋಲ್ಕತಾ ಕಾಳಿ ಕ್ರಿಯೇಷನ್ ದಾಖಲೆ ಮೊತ್ತಕ್ಕೆ ರಾಕ್ಷಸ ತೆಲಗು ರೈಟ್ಸ್​​​ನ ಪಡೆದುಕೊಂಡಿದೆ. ಅಲ್ಲಿಗೆ ಲೋಹಿತ್ ನಿರ್ದೇಶನದ, ಪ್ರಜ್ವಲ್ ನಟನೆಯ ರಾಕ್ಷಸ ಮೂವಿ ಕನ್ನಡದ ಜೊತೆಗೆ ತೆಲುಗಿನಲ್ಲೂ ಏಕಕಾಲದಲ್ಲಿ ತೆರೆಗೆ ಬರೋದು ಫಿಕ್ಸ್ ಆಗಿದೆ.