Jul 10, 2022, 11:51 AM IST
ನರೇಶ್ ನಾನು ಜೆಸ್ಟ್ ಫ್ರೆಂಡ್ ಅಂತ ಪವಿತ್ರಾ ಲೋಕೇಶ್ ಹೇಳಿಕೊಳ್ತಾರೆ. ಆದ್ರೆ ಒಂದೇ ಹೋಟೆಲ್ನಲ್ಲಿ ಒಂದೇ ರೂಮ್ನಲ್ಲಿ ಸಿಕ್ಕುಬಿದ್ದ ಮೇಲೆ ಇವರಿಬ್ಬರದ್ದು, ಜೆಸ್ಟ್ ಫ್ರೆಂಡ್ ಅಲ್ಲ ಬೆಸ್ಟ್ ಫ್ರೆಂಡ್ಸ್ ಅಂತ ಜನ ಮಾತಾಡ್ಕೊಳ್ತಿದ್ದಾರೆ. ಹಾಗಾದ್ರೆ ನರೇಶ್ಗೂ ಪವಿತ್ರಾ ಲೋಕೇಶ್ಗೂ ಎಷ್ಟು ವರ್ಷದ ಪರಿಚಯ ಅಂತ ಕೇಳಿದ್ರೆ ಇವ್ರಿಬ್ರದ್ದು ನಾಲ್ಕು ನಾಲ್ಕೈದು ವರ್ಷದ ಸ್ನೇಹ ಅಂತ ಟಾಲಿವುಡ್ ಮಂದಿ ಹೇಳ್ತಾರೆ. ಇಬ್ಬರು ಒಟ್ಟಿಗೆ ಆರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
HR ಟು ಆಕ್ಟರ್ ಪವಿತ್ರಾ ಲೋಕೇಶ್ ಬ್ಯಾಕ್ ಗ್ರೌಂಡ್ ಸಖತ್ ಇಂಟ್ರೆಸ್ಟಿಂಗ್
ನರೇಶ್ ಹಾಗೂ ಪವಿತ್ರಾ ಲೋಕೇಶ್ ಕಳೆದ ಎಂಟು ವರ್ಷಗಳಿಂದ ಒಟ್ಟು 6 ಸಿನಿಮಾಗಳಲ್ಲಿ ನಟಿಸಿದ್ದಾರೆ. 2014ರಲ್ಲಿ ನಾಗ ಶೌರ್ಯ ನಟಿಸಿದ್ಧ 'ಲಕ್ಷ್ಮಿ ರಾವೇ ನಾ ಇಂಟಿಕಿ' ಸಿನಿಮಾ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆಯಾಗಿ ಅಭಿನಯಿಸಿದ ಮೊದಲ ಚಿತ್ರ.
2017ರಲ್ಲಿ ದಿಲ್ ರಾಜು ನಿರ್ಮಿಸಿದ್ದ 'ಮಿಡಲ್ ಕ್ಲಾಸ್ ಅಬ್ಬಾಯಿ' ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆಯಾಗಿ ನಟಿಸಿದ 2ನೇ ಸಿನಿಮಾ. ಅದಾದ ಬಳಿಕ 'ಸಮ್ಮೋಹನಂ' ಅನ್ನೋ ಸಿನಿಮಾದಲ್ಲಿ ಮೂರನೇ ಭಾರಿ ಜೊತೆಯಾದ ಈ ಜೋಡಿ ಸಮ್ಮೋಹನಂ ಸಿನಿಮಾದ ಹೀರೋ ಸುಧೀರ್ ಬಾಬುಗೆ ಅಪ್ಪ ಅಮ್ಮನ ಪಾತ್ರ ಮಾಡಿದ್ರು. ಅಂದ್ರೆ ಇಬ್ಬರು ಗಂಡ ಹೆಂಡತಿ ರೋಲ್ ಮಾಡಿದ ಮೊದಲ ಸಿನಿಮಾ ಇದು.
ಮದುವೆನೇ ಆಗಿಲ್ಲ ಎಂದ ಪವಿತ್ರಾ ಲೋಕೇಶ್ಗೆ ಪತಿ ಸುಚೇಂದ್ರ ಪ್ರಸಾದ್ ಖಡಕ್ ವಾರ್ನಿಂಗ್?
ಆದಾದ ಬಳಿಕ 2018ರಲ್ಲಿ ಬಂದ ರೊಮ್ಯಾಂಟಿಕ್ ಸಿನಿಮಾ 'ಹ್ಯಾಪಿ ವೆಡ್ಡಿಂಗ್'ನಲ್ಲೂ ಪತಿ ಪತ್ನಿಯಾಗಿ ನರೇಶ್ ಪವಿತ್ರಾ ಲೋಕೇಶ್ ಕಾಣಿಸಿದ್ರು. ಹೀಗೆ ಗಂಡ ಹೆಂಡತಿ ಪಾತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲು ಶುರುಮಾಡಿದ ನರೇಶ್ ಪವಿತ್ರಾ ಐದನೇ ಭಾರಿ ಎಂಥ ಮಂಚಿವಾಡವುರಾ ಚಿತ್ರದಲ್ಲಿ ಆರನೇ ಭಾರಿ ಅಂಟೆ ಸುಂದರಾನಿಕಿ ಸಿನಿಮಾದಲ್ಲಿ ತೆರೆ ಹಂಚಿಕೊಂಡು ಒಟ್ಟು ಆರು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡ್ರು. ಕೊನೆಗೆ ನರೇಶ್ ಕುಟುಂಬದ ಆತ್ಮೀಯ ಸ್ನೇಹಿತೆಯಾಗಿಯೂ ಅವರ ಕುಟುಂಬದಲ್ಲಿ ಒಬ್ಬರಾಗಿದ್ದಾರಂತೆ ಪವಿತ್ರಾ ಲೋಕೇಶ್