ರಶ್ಮಿಕಾ ಮಂದಣ್ಣ ಈಗ 'ಮಹಾರಾಣಿ', ಮಲೆಯಾಳಂ ಮಾರ್ಕೋ, ಕನ್ನಡದ ಕಾಡುಮಳೆ ಸೌಂಡ್!

ರಶ್ಮಿಕಾ ಮಂದಣ್ಣ ಈಗ 'ಮಹಾರಾಣಿ', ಮಲೆಯಾಳಂ ಮಾರ್ಕೋ, ಕನ್ನಡದ ಕಾಡುಮಳೆ ಸೌಂಡ್!

Published : Jan 22, 2025, 11:29 AM IST

ಬಾಲಿವುಡ್‌ ಮೂವಿ ಛಾವಾ ಚಿತ್ರದ ರಶ್ಮಿಕಾ ಮಂದಣ್ಣ ಪಾತ್ರದ ಲುಕ್ ರಿವೀಲ್ ಆಗಿದೆ. ಒಬ್ಬ ಮಹಾನ್ ರಾಜನ ಹಿಂದೆ ಸರಿಸಾಟಿಯಿಲ್ಲದ ಶಕ್ತಿಯುತ ಪತ್ನಿ ಇರ್ತಾಳೆ ಅನ್ನೋದನ್ನ ಹೇಳುತ್ತಲೇ ರಶ್ಮಿಕಾ ಪಾತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಛಾವಾ ಚಿತ್ರದ ಟ್ರೈಲರ್ ಇದೇ ತಿಂಗಳು..

ಬಾಲಿವುಡ್‌ ಮೂವಿ ಛಾವಾ ಚಿತ್ರದ ರಶ್ಮಿಕಾ ಮಂದಣ್ಣ ಪಾತ್ರದ ಲುಕ್ ರಿವೀಲ್ ಆಗಿದೆ. ಒಬ್ಬ ಮಹಾನ್ ರಾಜನ ಹಿಂದೆ ಸರಿಸಾಟಿಯಿಲ್ಲದ ಶಕ್ತಿಯುತ ಪತ್ನಿ ಇರ್ತಾಳೆ ಅನ್ನೋದನ್ನ ಹೇಳುತ್ತಲೇ ರಶ್ಮಿಕಾ ಪಾತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಛಾವಾ ಚಿತ್ರದ ಟ್ರೈಲರ್ ಇದೇ ತಿಂಗಳು ಜನವರಿ-22 ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ರಶ್ಮಿಕಾ ಪಾತ್ರದ 2 ಪೋಸ್ಟರ್ ರಿಲೀಸ್ ಆಗಿವೆ. ಈ ಮೂಲಕ ಕೊಡಗಿನ ಕುವರಿಯ ಹಿಸ್ಟಾರಿಕಲ್ ಸಿನಿಮಾದ  ರಾಣಿಯ ಗೆಟಪ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಾಲ್ ಛತ್ರಪತಿ ಸಂಭಾಜಿ ಪಾತ್ರ ಮಾಡಿದ್ರೆ, ರಶ್ಮಿಕಾ ಮಹಾರಾಣಿ ಯೇಸುಬಾಯಿ ಪಾತ್ರ ಮಾಡಿದ್ದಾರೆ.

ಶತಕೋಟಿ ಕ್ಲಬ್ ಸೇರಿ ಭಾರತದಾದ್ಯಂತ ಸದ್ದು ಮಾಡಿರೋ ಮಲಯಾಳಂ ಮೂವಿ ಮಾರ್ಕೋ ಇದೀಗ ಕನ್ನಡದಲ್ಲೂ ತೆರೆಗೆ ಬರೋದಕ್ಕೆ ಸಜ್ಜಾಗಿದೆ.  ಈ ವಿಚಾರವನ್ನ ಸ್ವತಃ ನಟ ಉನ್ನಿ ಮುಕುಂದನ್ ಸೋಷಿಯಲ್ ಮಿಡಿಯಾ ಪೋಸ್ಟ್ ಮೂಲಕ ಹೇಳಿದ್ದಾರೆ. ಕನ್ನಡದಲ್ಲೇ ಕ್ಯಾಪ್ಶನ್ ಕೂಡಾ ಬರೆದಿದ್ದಾರೆ. ಕನ್ನಡ ಸಿನಿಪ್ರಿಯರ ನಿರೀಕ್ಷೆಗೆ ತಕ್ಕಂತೆ ಕನ್ನಡದಲ್ಲಿ ಸದ್ಯದಲ್ಲೇ ಸಿನಿಮಾ ರಿಲೀಸ್ ಮಾಡ್ತೀವಿ ಅಂದಿದ್ದಾರೆ. ಉನ್ನಿ ಮುಕುಂದನ್ ಮತ್ತು ಯುಕ್ತಿ ತರೇಜಾ ನಟನೆಯ ಈ ಸಿನಿಮಾ ಸಿಕ್ಕಾಪಟ್ಟೆ ವೈಲೆಂಟ್ ಆಗಿದೆ ಅನ್ನೋ ಟೀಕೆ ನಡುವೆಯೂ ದೇಶಾದ್ಯಂತ ಭರ್ಜರಿ ಕಲೆಕ್ಷನ್ ಮಾಡ್ತಾ ಇದೆ. 

ತನ್ನ ಟೀಸರ್​ನಿಂದ ಗಮನ ಸೆಳೆದಿದ್ದ ಕಾಡುಮಳೆ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ರಿಲೀಸ್ ಹೊಸ್ತಿಲಲ್ಲಿ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದ್ದು ಸಖತ್ ಸೌಂಡ್ ಮಾಡ್ತಾ ಇದೆ. ದಟ್ಟ ಕಾಡಿನ ನಡುವೆ ಚಿತ್ರಿಸಿರೋ ಈ ಬ್ರೈನ್ ಸ್ಕ್ಯಾಮಿಂಗ್ ಕಹಾನಿ ಸಖತ್ ರೋಚಕವಾಗಿರುವಂತೆ ಕಾಣ್ತಾ ಇದೆ. ಹರ್ಷನ್ ಮತ್ತು ಸಂಗೀತಾ ಅಭಿನಯದ ಕಾಡುಮಳೆ ಚಿತ್ರಕ್ಕೆ ಯುವ ನಿರ್ದೇಶಕ ಸಮರ್ಥ ಆಕ್ಷನ್ ಕಟ್ ಹೇಳಿದ್ದಾರೆ. ಕಾಡುಮಳೆಯ ಕಂಟೆಂಟ್ ಮೆಚ್ಚಿಕೊಂಡಿರೋ ಕೆಆಎರ್​ಜಿ ಸ್ಟುಡಿಯೋಸ್ ಈ ಚಿತ್ರವನ್ನ ರಾಜ್ಯಾದ್ಯಂತ ಬಿಡುಗಡೆ ಮಾಡ್ತಾ ಇದೆ. 

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...
 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more