ಕಿಚ್ಚ ಸುದೀಪ್ ಮ್ಯಾಕ್ಸ್ ಖದರ್​, ಗಲ್ಲಾಪೆಟ್ಟಿಗೆಯಲ್ಲಿ ಇವರದ್ದೇ ದರ್ಬಾರ್!

ಕಿಚ್ಚ ಸುದೀಪ್ ಮ್ಯಾಕ್ಸ್ ಖದರ್​, ಗಲ್ಲಾಪೆಟ್ಟಿಗೆಯಲ್ಲಿ ಇವರದ್ದೇ ದರ್ಬಾರ್!

Published : Jan 04, 2025, 12:06 PM IST

ಹೊಸ ವರ್ಷ ಕೂಡ ಚಂದನವನಕ್ಕೆ ಹೊಸ ಹುರುಪು ತಂದಿದೆ. ಕ್ರಿಸ್ಮಸ್ ಗೆ ಬಂದ 'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳು ಬಾಕ್ಸಾಫೀಸ್​ನಲ್ಲಿ ಗೆದ್ದಿವೆ. ಅದರಲ್ಲೂ ಕಿಚ್ಚನ ದರ್ಬಾರ್ ಜೋರಾಗಿಯೇ ಇದೆ. ಸಿನಿರಸಿಕರು, ನಿರ್ಮಾಪಕರು, ವಿತರಕರು ಎಲ್ಲರೂ ಖುಷಿಯಾಗಿದ್ದಾರೆ...

ಸ್ಯಾಂಡಲ್​ವುಡ್​​ನಲ್ಲಿ ಬಾಕ್ಸಾಫೀಸ್ ಸುಲ್ತಾನ್ ಯಾರು ಅನ್ನೋ ಚರ್ಚೆಯ ಹೀಟ್ ಹೆಚ್ಚಾಗಿದೆ. ಕಾಟೇರ ಸಿನಿಮಾದಲ್ಲಿ ದರ್ಶನ್ ಬಾಕ್ಸಾಫೀಸ್​ ದೋಚಿದ್ದಕ್ಕೆ ದರ್ಶನ್ನೇ ಬಾಕ್ಸಾಫೀಸ್​ ಸುಲ್ತಾನ್ ಅಂತ ಅವರ ಫ್ಯಾನ್ಸ್ ಬೀಗುತ್ತಾರೆ. ಆದ್ರೆ ಕಾಟೇರನನ್ನೂ ಮೀರಿಸೋ ಹೆಬ್ಬುಲಿ ಈಗ ಬಾಕ್ಸಾಫೀಸ್ ಸುಲ್ತಾನ್ ಆಗಿ ಘರ್ಜಿಸುತ್ತಿದೆ. ಹಾಗಾದ್ರೆ ಹೆಬ್ಬುಲಿ ಕಿಚ್ಚನ ಮ್ಯಾಕ್ಸ್​ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗಿದೆ..? 100 ಕೋಟಿ ಕ್ಲಬ್ ಸೇರಿದೆಯಾ ಮ್ಯಾಕ್ಸ್..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಆಗಿರೋ ಮ್ಯಾಕ್ಸ್ ಲೆಕ್ಕಾಚಾರ..

ನಟ ದರ್ಶನ್​ ಕಾಟೇರ ಸಿನಿಮಾ ಬಾಕ್ಸಾಫೀಸ್​ ದೋಚಿದ್ದು ಈಗ ಇತಿಹಾಸ. ಒಂದು ಕೊಲೆ ಕೇಸ್ ದರ್ಶನ್ ಗಿದ್ದ ನಟ ಅನ್ನೋ ಇಮೇಜ್​​ಗೆ ಮಸಿ ಬಳಿದಿದೆ. ತೆರೆ ಮೇಲೆ ಲಾಂಗ್ ಹಿಡಿದು ಕೊಚ್ಚುತ್ತಿದ್ದ ದರ್ಶನ್​​​ಗೆ ರಿಯಲ್​ ಲೈಫ್​​ನಲ್ಲಿ ಇದೆಲ್ಲಾ ಬೇಕಿತ್ತಾ ಅಂತ ಮನೆ ಮನೆಯೂ ಮಾತಾಡುತ್ತಿವೆ. ಆದ್ರೆ ಸ್ಯಾಂಡಲ್​ವುಡ್​​​ ಬಾಕ್ಸಾಫೀಸ್​​ಗೆ ಸುಲ್ತಾನ್ ನಟ ದರ್ಶನ್ ಬಿಟ್ರೆ ಮತ್ಯಾರು ಇಲ್ಲ ಅಂತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೀಗುತ್ತಿದ್ದ ಕೆಲವ್ರು ಈಗ ಆ ಕಪ್ಪು ಬಟ್ಟೆ ಬಿಚ್ಚಿದ್ದಾರೆ. ಯಾಕಂದ್ರೆ ಬಾಕ್ಸಾಫೀಸ್​ಗೆ ಹೆಬ್ಬುಲಿ ಅನ್ನೋ ಸುಲ್ತಾನ್ ಘರ್ಜಿಸುತ್ತಿದೆ.

ಕಿಚ್ಚ.. ಬಾದ್​ ಷಾ.. ಅಭಿನಯ ಚಕ್ರವರ್ತಿ.. ಇದು ಸುದೀಪ್ ಅಭಿಮಾನಿಗಳ ಪ್ರೀತಿಯ ಬಿರುದ್ದುಗಳು. ಅದಕ್ಕೆ ತಕ್ಕಂತೆ ನಟಿಸಿ ಮನೆ ಮನೆಯ ಪ್ರೇಕ್ಷಕರ ಮನಸ್ಸು ಗೆಲ್ಲೋ ಶಕ್ತಿ ಇರೋ ಕೆಲವೇ ಕನ್ನಡ ನಟರಲ್ಲಿ ಸುದೀಪ್ ಮೊದಲಿಗರು. ಸುದೀಪ್​​ ಈಗ ಬಾಕ್ಸಾಫೀಸ್​ ಸುಲ್ತಾನ್ ಆಗಿದ್ದಾರೆ. ಕಿಚ್ಚನ ಮ್ಯಾಕ್ಸ್ ಖದರ್​​ಗೆ ಗಲ್ಲಾ ಪೆಟ್ಟಿಗೆ ವಿಜೃಂಭಿಸುತ್ತಿದೆ. 

ಹೊಸ ವರ್ಷ ಕೂಡ ಚಂದನವನಕ್ಕೆ ಹೊಸ ಹುರುಪು ತಂದಿದೆ. ಕ್ರಿಸ್ಮಸ್ ಗೆ ಬಂದ 'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳು ಬಾಕ್ಸಾಫೀಸ್​ನಲ್ಲಿ ಗೆದ್ದಿವೆ. ಅದರಲ್ಲೂ ಕಿಚ್ಚನ ದರ್ಬಾರ್ ಜೋರಾಗಿಯೇ ಇದೆ. ಸಿನಿರಸಿಕರು, ನಿರ್ಮಾಪಕರು, ವಿತರಕರು ಎಲ್ಲರೂ ಖುಷಿಯಾಗಿದ್ದಾರೆ. ಅಭಿನಯ ಚಕ್ರವರ್ತಿಯ ಮ್ಯಾಕ್ಸ್ ರಿಲೀಸ್​ ಆಗಿ ಜೆಸ್ಟ್​ 8 ದಿನಕ್ಕೆ 100 ಕೋಟಿ ಕ್ಲಬ್ ಸೇರೋ ಸನಿಹಕ್ಕೆ ಬಂದಿದೆ. 

ಮ್ಯಾಕ್ಸ್​ ನ ಅರ್ಜುನ್ ಮಹಾಕ್ಷಯ್ ಕಿಚ್ಚ ಫಸ್ಟ್​ ಡೇ ಬಾಕ್ಸಾಫೀಸ್​ನಲ್ಲಿ 12.5 ಕೋಟಿ ಕಲೆಕ್ಷನ್ ಮಾಡಿದ್ರು. ಆ ಹಬ್ಬದ ರಜೆ ಇದ್ದಿದ್ರಿಂದ ಈ ಸಿನಿಮಾವನ್ನ ಪ್ರೇಕ್ಷಕ ಥಿಯೇಟರ್​ಗೆ ನುಗ್ಗಿ ನೋಡಿದ್ದಾರೆ. ಮ್ಯಾಕ್ಸ್​ಗೆ ಸಿಕ್ಕಾ ಒಳ್ಳೆಯ ರೆಸ್ಪಾನ್ಸ್​ ಈ ಸಿನಿಮಾವನ್ನ ಜೆಸ್ಟ್ 8 ದಿನದಲ್ಲಿ 70 ಕೋಟಿ ಗ್ರಾಸ್ ಕಲೆಕ್ಷನ್​​​ಗೆ ತಂದು ನಿಲ್ಲಿಸಿದೆ. ಸಧ್ಯಕ್ಕೆ ಮ್ಯಾಕ್ಸ್ ಗ ಇರೋ ಬೇಡಿಕೆ ನೋಡಿದ್ರೆ ಕೆಲವೇ ದಿನದಲ್ಲಿ ಈ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡೋ ಸಾಧ್ಯತೆ ಇದೆ. ಈ ಮೂಲಕ ವರ್ಷದ ಆರಂಭದಲ್ಲೇ ಸ್ಯಾಂಡಲ್​ವುಡ್​ ದೊಡ್ಡ ಹಿಸ್ಟರಿ ಸೃಷ್ಟಿಸಲಿದೆ. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more