ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಜೊತೆಗಿನ ಕಿರಿಕ್ ಕಥೆ ತೆರೆದಿಟ್ಟ ಕಿಚ್ಚ ಸುದೀಪ್!

Jan 7, 2025, 1:27 PM IST

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಂಗ SSLCನಿಂದ ಕಿಚ್ಚ ಹುಚ್ಚ ವರೆಗೂ 4 ಹಿಟ್ ಸಿನಿಮಾಗಳನ್ನ ಕೊಟ್ಟಿದೆ ಈ ಜೋಡಿ. ಇವತ್ತಿಗೂ ಸುದೀಪ್  ಮತ್ತು  ರಮ್ಯಾ ನಡುವೆ ಒಳ್ಳೆ ದೋಸ್ತಿ ಇದೆ. ಆದ್ರೆ ದಶಕಗಳ ಹಿಂದೆ ಇವರ ನಡುವೆ ಅದೆಂಥಾ ಕುಸ್ತಿ ನಡೆದಿತ್ತು ಗೊತ್ತಾ..?
 
ತೆರೆ ಮೇಲೆ ಮುದ್ದು ಮುದ್ದಾಗಿ ರೊಮ್ಯಾನ್ಸ್ ಮಾಡೋ ನಟ-ನಟಿಯರನ್ನ ಕಂಡು ಫ್ಯಾನ್ಸ್ ಆಹಾ ಎಂಥಾ ಜೋಡಿ ಅಂತ ಖುಷಿ ಪಡ್ತಾರೆ. ಆದ್ರೆ ನಿಜಕ್ಕೂ ಆ ಜೋಡಿ ನಡುವೆ ರೊಮ್ಯಾಂಟಿಕ್ ಮೂಡ್ ಇರುತ್ತಾ? ಕಿಚ್ಚ ಇತ್ತೀಚಿಗೆ ಹೇಳಿರೋ ಒಂದು ಫ್ಲ್ಯಾಶ್ ಬ್ಯಾಕ್ ಕಥೆ ಕೇಳಿದ್ರೆ ನೀವು ದಂಗಾಗೋದು ಫಿಕ್ಸ್. ಸರಿಗಮಪ ಶೋಗೆ ಅತಿಥಿಯಾಗಿ ಬಂದಿದ್ದ ಸುದೀಪ್ ಎದುರು ಸ್ಪರ್ಧಿಗಳಿಬ್ರು ಮನಸೇ ಮನಸೇ ಹಾಡನ್ನ ಹಾಡಿದ್ರು.

ಈ ಹಾಡು ಮುಗೀತಾ ಇದ್ದ ಹಾಗೇನೇ ಕಿಚ್ಚ, ಇದರ ಹಿಂದಿನ ಇನ್​ಟ್ರೆಸ್ಟಿಂಗ್ ಕಥೆಯನ್ನ ತೆರೆದಿಟ್ರು. ಅಸಲಿಗೆ ಇದು ರಂಗ sslc ಸಿನಿಮಾದ ರೊಮ್ಯಾಂಟಿಕ್ ಹಾಡು. ರಾಜೇಶ್ ಕೃಷ್ಣನ್ ಚಿತ್ರಾ ಸಿಹಿದನಿಯಲ್ಲಿರೋ ಈ ಹಾಡಿಗೆ ಸುದೀಪ್ ಌಂಡ್ ರಮ್ಯಾ ಹೆಜ್ಜೆ ಹಾಕಿದ್ದಾರೆ.

ಅಸಲಿಗೆ ಈ ಹಾಡಿನ ಶೂಟ್ ವೇಳೆ ರಮ್ಯಾಗೂ ಕಿಚ್ಚನಿಗೆ ದೊಡ್ಡ ಜಗಳ ಆಗಿತ್ತು. ಒಬ್ಬರ ಮುಖ ಒಬ್ಬರು ನೋಡ್ತಾ ಇರ್ಲಿಲ್ಲ. ಆದ್ರೆ ರೊಮ್ಯಾಂಟಿಕ್ ಸಾಂಗ್ ಶೂಟ್ ವೇಳೆ ಮುದ್ದು ಮಾಡಲೇಬೇಕು.. ಡೈರೆಕ್ಟರ್ ಌಕ್ಷನ್ ಅಂತ ಹೇಳ್ತಾನೇ ಮುದ್ದಾಟವಾಡ್ತಿದ್ದ ಇವರು ಕಟ್ ಅಂತಿದ್ದ ಹಾಗೇ ಕಿತ್ತಾಟವಾಡ್ತಾ ಇದ್ದರಂತೆ. 

ಹೌದು ರಮ್ಯಾ  ಮತ್ತು ಸುದೀಪ್ ಆರಂಭಿಕ ದಿನಗಳಲ್ಲಿ ಹಾವು ಮುಂಗಸಿ ತರಹ ಇದ್ರು. ರಂಗ sslc ರಮ್ಯಾಳ ಎರಡನೇ ಸಿನಿಮಾ. ಆದ್ರೆ ರಮ್ಯಾಗೆ ಸಿಕ್ಕಾಪಟ್ಟೆ ಜಂಬದ ಹುಡುಗಿ ಅನ್ನೋ ಬಿರುದು ಅಂಟಿಕೊಂಡಿತ್ತು. ಕಿಚ್ಚ ಕೂಡ ಆವಾಗ ಸಿಕ್ಕಾಪಟ್ಟೆ ಮುಂಗೋಪಿ. ಸೋ ಇಬ್ಬರನ್ನೂ ಕಾಸ್ಟ್ ಮಾಡಿಕೊಂಡು ರಂಗ ಎಸ್.ಎಸ್ಎಸ್ ಸಿ ಸಿನಿಮಾ ಮುಗಿಸೋವಷ್ಟರಲ್ಲಿ ನಿರ್ದೇಶಕ ಯೋಗರಾಜ್ ಭಟ್ ಪರದಾಡಿ ಹೋಗಿದ್ರು.
 
ಆದ್ರೆ ಕಿಚ್ಚ ಮತ್ತು ರಮ್ಯಾ ನಡುವಿನ ಈ ಕುಸ್ತಿ ಬಹುಬೇಗ ಮುಕ್ತಾಯ ಆಯ್ತು. ಮುಂದೆ ಇಬ್ಬರೂ ಒಳ್ಳೆ ದೋಸ್ತಿಗಳಾದ್ರು. ಸುದೀಪ್ ತಮ್ಮ ನಿರ್ದೇಶನದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾಗೆ ರಮ್ಯಾಳನ್ನೇ ನಾಯಕಿಯಾಗಿ ಹಾಕಿಕೊಂಡ್ರು. ಇಬ್ಬರು ಮುಂದೆ ಒಟ್ಟಾಗಿ 4 ಸಿನಿಮಾಗಳನ್ನ ಮಾಡಿದ್ರು. 

ಸುದೀಪ್ ಮತ್ತು ರಮ್ಯಾ ಅಂದ್ರೆ ಸ್ಯಾಂಡಲ್​ವುಡ್​ ನ ಯಶಸ್ವಿ ಜೋಡಿ ಅನ್ನಿಸಿಕೊಂಡಿದೆ. ಇವತ್ತಿಗೆ ರಮ್ಯಾ ಸಿನಿರಂಗದಿಂದ ದೂರ ಇದ್ರು ಕಿಚ್ಚನ ಜೊತೆಗೆ ಒಳ್ಳೆ ಬಾಂಧವ್ಯ ಇದೆ. ಆದ್ರೆ ರಂಗ sslc ಟೈಂನಲ್ಲಿ ಇವರನ್ನ ನೋಡಿದವರು ಮಾತ್ರ ಇವರ ಕಿತ್ತಾಟದ ಕಥೆಗಳನ್ನ ರಸವತ್ತಾಗಿ ಹೇಳ್ತಾರೆ.