ಬಿಲ್ಲ ರಂಗ ಬಾಷ (Billa Ranga Bhasha) ಸಿನಿಮಾ ಸುದೀಪ್ ಅವರ ಹೋಮ್ ಬ್ಯಾನರ್‌ನಲ್ಲೇ ಮೂಡಿ ಬರಲಿದೆ. ವಿಕ್ರಾಂತ್ ರೋಣನಿಗೆ ಬಂಡವಾಳ ಹೂಡಿರೋ ನಿರ್ಮಾಪಕ ಜಾಕ್ ಮಂಜು ಕೂಡ ಬಿಲ್ಲ ರಂಗ ಬಾಷ ಚಿತ್ರ ನಿರ್ಮಾಣದಲ್ಲಿ ಪಾರ್ಟ್ನರ್ ಆಗಲಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ವಿಕ್ರಾಂತ್ ರೋಣ (Vikrant Rona) ಸಿನಿಮಾ ಮೂಲಕ ಜಗತ್ತಿನಾಧ್ಯಂತ ಕನ್ನಡದ ಕಂಪು ಹರಿಸುತ್ತಿದ್ದಾರೆ. ವಿಕ್ರಾಂತ್ ರೋಣನಿಗಾಗಿ ಇಡೀ ದೇಶದ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಮಸ್ತ್ ವಿಶ್ಯೂವಲ್ ಟ್ರೀಟ್, ಥ್ರಿಲ್ ಆಗಿರೋ ಸ್ಟೋರಿ ಲೈನ್, ಪ್ಯಾನ್ ಇಂಡಿಯಾ ಸ್ಟಾರ್ ಸುದೀಪ್ ಪಾತ್ರ, ಸಿನಿಮಾದ ಬ್ಯಾಕ್ಗ್ರೌಂಡ್ ಮ್ಯೂಸಿಕ್, ತ್ರಿಡಿ ಎಫೆಕ್ಟ್ನಲ್ಲಿ ಸಿನಿಮಾ ನೋಡೋದಕ್ಕೆ ಕಾಯುವಂತೆ ಮಾಡಿವೆ. ಕನ್ನಡ ಚಿತ್ರರಂಗದಿಂದ ತೆರೆಗಪ್ಪಳಿಸುತ್ತಿರೋ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಆಗಿದ್ದು, ಈ ಸಿನಿಮಾದ ಪ್ರಚಾರಕ್ಕೆ ಹೋದಾಗ ಕಿಚ್ಚ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಅದೇ ಬಿಲ್ಲ ರಂಗ ಬಾಷ...
ಬಿಲ್ಲ ರಂಗ ಬಾಷ (Billa Ranga Bhasha) ಸಿನಿಮಾ ಸುದೀಪ್ ಅವರ ಹೋಮ್ ಬ್ಯಾನರ್‌ನಲ್ಲೇ ಮೂಡಿ ಬರಲಿದೆ. ವಿಕ್ರಾಂತ್ ರೋಣನಿಗೆ ಬಂಡವಾಳ ಹೂಡಿರೋ ನಿರ್ಮಾಪಕ ಜಾಕ್ ಮಂಜು ಕೂಡ ಬಿಲ್ಲ ರಂಗ ಬಾಷ ಚಿತ್ರ ನಿರ್ಮಾಣದಲ್ಲಿ ಪಾರ್ಟ್ನರ್ ಆಗಲಿದ್ದಾರೆ. ಬಿಲ್ಲ ರಂಗಹ ಬಾಷನ ಮುಂದೆ ವಿಕ್ರಾಂತ್ ರೋಣ ಒಂದು ಟ್ರೈಲರ್ ಅಷ್ಟೆ ಎಂದಿರೋ ಸುದೀಪ್ ಮಾತು ಕೇಳಿ ಅಭಿಮಾನಿಗಳಿಗೆ ಹೆಮ್ಮೆಯಾಗಿದ್ದು, ವಿಕ್ರಾಂತ್ ರೋಣನ ಜೊತೆ ಕಿಚ್ಚನ ಬಿಲ್ಲ ರಂಗ ಬಾಷಾನನ್ನ ಕನವರಿಸುವಂತೆ ಮಾಡಿದೆ.