Nov 19, 2022, 11:39 AM IST
ಅಂಕೋಲಾ ದಹಿಂಕಾಲ ಉತ್ಸವದಲ್ಲಿ ಕಾಂತಾರಾ ಸ್ತಬ್ಧ ಚಿತ್ರ ಗಮನ ಸೆಳೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದ ದಹಿಂಕಾಲ ಉತ್ಸವದಲ್ಲಿ ಪಂಜುರ್ಲಿ ದೈವದ ಸ್ತಬ್ಧ ಚಿತ್ರ ಮಾಡಲಾಗಿತ್ತು. ಇದನ್ನು ನೋಡಿ ಅಂಕೋಲ ಜನರು ಫಿದಾ ಆಗಿದ್ದಾರೆ. ಕಾಂತಾರ ಚಿತ್ರದಲ್ಲಿನ ರಿಷಬ್ ಶೆಟ್ಟಿಯ ಕ್ಲೈಮ್ಯಾಕ್ಸ್ ಅ್ಯಕ್ಟಿಂಗ್ ದೃಶ್ಯದ ಸ್ತಬ್ಧ ಚಿತ್ರ ಮಾಡಲಾಗಿತ್ತು. ರಿಷಭ್ ಶೆಟ್ಟಿಯೇ ನೈಜವಾಗಿ ಬಂದು ನಿಂತಂತೆ ಭಾಸವಾಗುತ್ತಿದ್ದ ಸ್ತಬ್ಧ ಚಿತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಕಲಾವಿದ ದಿನೇಶ್ ಮೇತ್ರಿ ಕೈಯಲ್ಲಿ ಅರಳಿದ ಸ್ತಬ್ಧಚಿತ್ರ ಇದಾಗಿದೆ. ಲಕ್ಷಾಂತರ ಜನರ ಮಧ್ಯೆ ರಂಗೇರಿದ ಕಾಂತಾರ ಸ್ತಬ್ಧ ಚಿತ್ರ ಮೆರವಣಿಗೆಯ ವಿಡಿಯೋ ವೈರಲ್ ಆಗಿದೆ. ಕಾಂತಾರ ಸ್ತಬ್ಧ ಚಿತ್ರವನ್ನು ಜನರು ಮೊಬೈಲ್‌ನಲ್ಲಿ ಸೆರೆಹಿಡಿದುo ಸಂಭ್ರಮಿಸುತ್ತಿದ್ದಾರೆ.