Nov 17, 2022, 12:59 PM IST
ದಕ್ಷಿಣ ಕನ್ನಡ (ನ. 17): ಕಾಂತಾರದ ಬ್ಯೂಟಿ ಸಪ್ತಮಿ ಗೌಡ (Sapthami Gowda) ಇಮೇಜ್ ಈಗ ಉತ್ತುಂಗಕ್ಕೇರಿದೆ. ಕಾಂತಾರದ (Kantara) ಲೀಲಾ ಅನ್ನೋ ಒಂದೇ ಒಂದು ರೋಲ್ ಸಪ್ತಮಿ ಗೌಡರನ್ನ ಪ್ಯಾನ್ ಇಂಡಿಯಾ ಹೀರೋಯಿನ್ ಮಾಡಿದೆ. ಸಪ್ತಮಿ ಗೌಡ ಎಲ್ಲೇ ಹೋದ್ರು ಲೀಲಾ ಲೀಲಾ ಅನ್ನೋ ಅಭಿಮಾನಿಗಳ ಕಿರುಚಾಟ ಕೇಳಿಸುತ್ತೇ ಹೊರತು ಮತ್ತಿನೇನು ಅಲ್ಲ. ಇದಕ್ಕೆಲ್ಲಾ ಕಾರಣ ಕಾಂತಾರ ಸಿನಿಮಾ. ಈ ಮೂವಿ ಈಗ ಬೆಳ್ಳಿತೆರೆಯಲ್ಲಿ ಹಾಫ್ ಸೆಂಚ್ಯೂರಿ ಬಾರಿಸಿದೆ. ಈ ದೊಡ್ಡ ಗೆಲುವು ಸಿಕ್ಕಿದ್ದಕ್ಕೆ ಸಿಂಗಾರ ಸಿರಿ ಕರಾವಳಿಯ ದೈವಗಳ ದರ್ಶನ ಮಾಡಿ ಪೂಜೆ ಸಲ್ಲಿಸಿದ್ದಾರೆ.
ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೇವಸ್ಥಾನ, ಹಾಗು ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳಕ್ಕೆ ಸಪ್ತಮಿ ಗೌಡ ಕುಟುಂಬ ಸಮೇತ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ತುಳು ನಾಡಿನ ದೈವಗಳ ಆಶೀರ್ವಾದದಿಂದ ತಮ್ಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ದೈವಗಳ ಮೇಲೆ ನನಗೂ ನಂಬಿಕೆ ಇದೆ. ಈ ಕಾರಣದಿಂದಾಗಿಯೇ ನನ್ನನ್ನು ಕಾಂತಾರ ಸಿನಿಮಾದ ಮೂಲಕ ನಾಡಿಗೆ ಪರಿಚಯವಾದೆ. ಇದಕ್ಕೆಲ್ಲ ದೈವಗಳ ಆಶೀರ್ವಾದವೇ ಕಾರಣ ಅಂತ ಸಪ್ತಮಿ ಹೇಳಿದ್ದಾರೆ.
ಇದನ್ನೂ ನೋಡಿ: Uttarakanda Movie: 'ಉತ್ತರಕಾಂಡ'ದಲ್ಲಿ ಕಾಂತಾರ ಚೆಲುವೆ: ಡಾಲಿ, ರಮ್ಯಾಗೆ ಸಪ್ತಮಿ ಸಾಥ್