ಬಾಕ್ಸಾಫೀಸ್‌ನಲ್ಲಿ ದೈವ-ದೆವ್ವದ ಸಮರ: ರಿಷಭ್ - ರಶ್ಮಿಕಾ ಮುಖಾಮುಖಿ!

ಬಾಕ್ಸಾಫೀಸ್‌ನಲ್ಲಿ ದೈವ-ದೆವ್ವದ ಸಮರ: ರಿಷಭ್ - ರಶ್ಮಿಕಾ ಮುಖಾಮುಖಿ!

Published : Oct 17, 2025, 04:25 PM IST

ಉತ್ತರ ಭಾರತದಲ್ಲಿ 'ಕಾಂತಾರ ಚಾಪ್ಟರ್-1' ಭರ್ಜರಿ ಯಶಸ್ಸು ಕಾಣುತ್ತಿದ್ದು, ಅದರ ಓಟಕ್ಕೆ ಬ್ರೇಕ್ ಹಾಕಲು   ರಶ್ಮಿಕಾ ಮಂದಣ್ಣ ನಟನೆಯ 'ಥಾಮಾ' ಸಿನಿಮಾ ದೀಪಾವಳಿಗೆ ಬಿಡುಗಡೆಯಾಗುತ್ತಿದೆ. ದೈವದ ಕಥೆಯ 'ಕಾಂತಾರ' ಮತ್ತು ದೆವ್ವದ ಕಥೆಯ 'ಥಾಮಾ' ನಡುವಿನ ಈ ಬಾಕ್ಸಾಫೀಸ್ ಪೈಪೋಟಿ ಕುತೂಹಲ ಕೆರಳಿಸಿದೆ.

ಕಾಂತಾರ ಚಾಪ್ಟರ್-1 ಇನ್ನೂ ಬಾಕ್ಸಾಫೀಸ್​ನಲ್ಲಿ ಅಬ್ಬರಿಸ್ತಾ ಇದೆ. ಅದ್ರಲ್ಲೂ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಸಿನಿಮಾ ಕಲೆಕ್ಷನ್ ಎರಡನೇ ವಾರ ಕಳೆದರೂ ಕಡಿಮೆ ಆಗಿಲ್ಲ. ಇದೂವರೆಗೂ ಕಾಂತಾರ ಚಾಪ್ಟರ್-1 ಹಿಂದಿ ವರ್ಷನ್ 160ಕ್ಕೂ ಕೋಟಿಗೂ ಅಧಿಕ ಗಳಿಕೆ ಮಾಡಿದೆ.

ಸದ್ಯಕ್ಕೆ ಬಾಲಿವುಡ್​ನಲ್ಲಿ ಕಾಂತಾರ ಓಟದೆದ್ರು ಕಾಂಪಿಟ್ ಮಾಡುವಂಥಾ ಯಾವ ದೊಡ್ಡ ಚಿತ್ರವೂ ಇಲ್ಲ. ಆಧ್ರೆ ಇದೇ 21ನೇ ತಾರೀಖು ದೀಪಾವಳಿ ದಿನ ಮಲ್ಟಿಸ್ಟಾರರ್ ಮೂವಿ ಥಾಮಾ ರಿಲೀಸ್ ಆಗ್ತಾ ಇದೆ. ಈ ಸಿನಿಮಾ ಬಗ್ಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದ್ದು ಇದು ಬಂದ್ರೆ ಕಾಂತಾರ ಓಟಕ್ಕೆ ಬ್ರೇಕ್ ಬೀಳಬಹುದು ಅಂತಿದ್ದಾರೆ ಬಿ ಟೌನ್ ಬಾಕ್ಸಾಫೀಸ್ ಪಂಡಿತರು.

ಥಾಮಾ ಸಿನಿಮಾ ರಶ್ಮಿಕಾ ನಾಯಕಿಯಾಗಿ ಮಿಂಚಿರುವ ಸಿನಿಮಾ. ಈ ಚಿತ್ರದಲ್ಲಿ ಬೇತಾಳವಾಗಿ ಮಿಂಚಿರುವ ರಶ್ಮಿಕಾ ಹಿಂದೆಂದಿಗಿಂತೂ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಥಾಮಾ ಹಾರರ್ ಕಾಮಿಡಿ ಚಿತ್ರವಾಗಿದ್ದು ಚಿತ್ರದ ಟೀಸರ್, ಸಾಂಗ್ಸ್ ಸೂಪರ್ ಹಿಟ್ ಆಗಿವೆ. ಅಸಲಿಗೆ ರಶ್ಮಿಕಾನ ಸಿನಿದುನಿಯಾಗೆ ಇಂಟ್ರಡ್ಯೂಸ್ ಮಾಡಿಸಿದ್ದೇ ರಿಷಬ್ ಶೆಟ್ಟಿ. ಶೆಟ್ಟರ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಪಾತ್ರದಲ್ಲಿ ನಟಿಸಿ ಸಿನಿದುನಿಯಾಗೆ ಬಂದಾಕೆ ರಶ್ಮಿಕಾ. ಒಂದು ಹಂತದಲ್ಲಿ ರಶ್ಮಿಕಾ ದೊಡ್ಡ ಲೆವೆಲ್​ಗೆ ಬೆಳೆದ ವೇಳೆ ತನ್ನನ್ನ ಪರಿಚಯಿಸಿದ ನಿರ್ಮಾಣ ಸಂಸ್ಥೆ ಬಗ್ಗೆ ಹೇಳೊದಕ್ಕೆ ಹಿಂದೇಟು ಹಾಕಿದ್ರು. ಇದಕ್ಕೆ ರಿಷಬ್ ಕೂಡ ಟಾಂಗ್ ಕೊಟ್ಟಿದ್ರು. ಸೋ ಇಬ್ಬರ ನಡುವೆ ಆಗಾಗ ಮುಸುಕಿನ ಗುದ್ದಾಟ ನಡೆದಿದೆ.

ಇದೀಗ ನೇರವಾಗೇ ಇಬ್ಬರ ನಡುವೆ ಬಾಕ್ಸಾಫೀಸ್ ಫೈಟ್ ನಡೆಯೋ ಟೈಂ ಬಂದಿದೆ. ಕಾಂತಾರ ದೈವದ ಕುರಿತ ಚಿತ್ರವಾದ್ರೆ ರಶ್ಮಿಕಾರ ಥಾಮಾ ದೆವ್ವದ ಸಿನಿಮಾ. ಸೋ ದೈವ - ದೆವ್ವದ ಕಥೆಗಳ ನಡುವೆ ಫೈಟ್ ನಡೆಯಲಿದೆ. ಥಾಮಾ ಮ್ಯಾಡಕ್ ಹಾರರ್ ಯುನಿವರ್ಸ್​​ನ ಹೊಸ ಹಾರರ್ ಕಾಮಿಡಿ ಸಿನಿಮಾ. ಚಿತ್ರದ ಬಗ್ಗೆ ಒಳ್ಳೆ ಟಾಕ್ ಇದೆ. ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡೊ ಸಾಧ್ಯತೆಯೂ ಇದೆ. ಆದ್ರೆ ಕಾಂತಾರ ಚಾಪ್ಟರ್ -1 ಈಗಾಗ್ಲೇ ಗೆದ್ದಾಗಿದೆ. ಈಗಾಗ್ಲೇ ಚಿತ್ರ ತೆರೆಕಂಡು ಎರಡು ವಾರ ಆಗಿರೋದ್ರಿಂದ ದೀಪಾವಳಿ ಟೈಂನಲ್ಲಿ ಕಾಂತಾರ ಓಟ ಡಲ್ ಆಗಬಹುದು. ಆದ್ರೆ ಥಾಮಾ ಕಾಂತಾರ ಚಾಪ್ಟರ್-1 ಗಳಿಕೆಯ ಹತ್ತಿರ ಬರೋದು ಕಷ್ಟ ಇದೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more