Jun 19, 2022, 3:06 PM IST
ಐಶ್ವರ್ಯ 1989 ರಲ್ಲಿ ಒಲಿಯಾಂಪೂಕಲ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದ್ರು, 2 ವರ್ಷದಲ್ಲಿ ತೆಲುಗು, ತಮಿಳು, ಮಲೆಯಾಳಂ ಹಾಗು ಕನ್ನಡ ಸೇರಿ ಒಟ್ಟು 6 ಸಿನಿಮಾದಲ್ಲಿ ಬಣ್ಣ ಹಚ್ಚಿ ದಕ್ಷಿಣ ಭಾರತದಾದ್ಯಂತ ಮನೆ ಮಾತಾದ್ರು. ಕನ್ನಡದಲ್ಲಿ ಟೈಗರ್ ಪ್ರಭಾಕರ್ ಹಾಗು ಜೂಲಿ ಲಕ್ಷ್ಮಿ ನಟಿಸಿದ್ದ ಹೊಸ ಕಾವ್ಯ ಅನ್ನೋ ಸಿನಿಮಾದಲ್ಲಿ ನಟಿಸಿ ಐಶ್ವರ್ಯ ಕನ್ನಡಿಗರಿಗೂ ಹತ್ತಿರವಾದ್ರು. ಆದ್ರೆ ಇದೇ ಐಶ್ವರ್ಯ ಇಂದು ಅಂತ್ಯಂತ ಕಷ್ಟದ ದಿನಗಳನ್ನ ಕಳೆಯುತ್ತಿದ್ದಾರಂತೆ. ಸೋಪ್ ಮಾರಿಕೊಂಡು ಜೀವನ ಮಾಡುತ್ತಿದ್ದಾರಂತೆ.
ಕನ್ನಡಿಗರ ಫೇವರಿಟ್ ಹೀರೋಯಿನ್ ಜೂಲಿ ಲಕ್ಷ್ಮಿ ಅವರ ಮೊದಲ ಗಂಡನ ಮಗಳು ಈ ಐಶ್ವರ್ಯಾ. ನಟಿ ಲಕ್ಷ್ಮಿ ತಮ್ಮ ಕೆರಿಯರ್‌ನ ಉತ್ತುಂಗದಲ್ಲಿದ್ದಾಗ ಭಾಸ್ಕರ್ ಎಂಬವವರನ್ನು ವಿವಾಹವಾಗಿದ್ರು. ಈ ದಂಪತಿಗಳಿಗೆ 1971 ರಲ್ಲಿ ಹೆಣ್ಣು ಮಗು ಐಶ್ವರ್ಯ ಜನಿಸಿದ್ರು. ಆದ್ರೆ ಮಗಳು ಹುಟ್ಟಿದ ಮೂರೇ ವರ್ಷಕ್ಕೆ ಭಾಸ್ಕರ್ ಹಾಗೂ ಜೂಲಿ ಲಕ್ಷ್ಮಿ ಡೈವೋರ್ಸ್ ಪಡೆದು ದೂರವಾದ್ರು. ಮಗಳು ಐಶ್ವರ್ಯರನ್ನ ಜೂಲಿ ಲಕ್ಷ್ಮಿ ಬೆಳೆಸಿದ್ರು. ಅಪ್ಪನ ಬೆಂಬಲ ಇಲ್ಲದೇ ಅಮ್ಮ ಲಕ್ಷ್ಮಿ ನೆರಳಲ್ಲೇ ಬೆಳೆದ ಐಶ್ವರ್ಯ 1989ರಲ್ಲಿ ಚಿತ್ರರಂಗಕ್ಕೆ ಬಂದ್ರು. ಕೊನೆಗೆ 1994ರಲ್ಲಿ ಅಮ್ಮನ ವಿರೋಧದ ನಡುವೆ ತನ್ವೀರ್ ಅಹಮದ್ ಅನ್ನೋ ಹುಡುಗನ್ನ ಪ್ರೀತಿಸಿ ಮದುವೆ ಆದ ಐಶ್ವರ್ಯ, ಪತಿ ತನ್ವೀರ್ ಅಹಮದ್‌ರಿಂದ ಮದುವೆ ಆಗಿ ಆರೇ ತಿಂಗಳಿಗೆ ವಿಚ್ಛೆಧನ ಪಡೆದು ದೂರಾದರು.
ಐಶ್ವರ್ಯಗೆ ಅತ್ತ ಅಮ್ಮನೂ ದೂರ ಮಾಡಿದ್ರು. ಇತ್ತ ಪ್ರೀತಿಸಿ ಮದುವೆ ಆದ ಹುಡುಗ ತನ್ವೀರ್ ಅಹಮದ್ ಕೂಡ ಕೈ ಬಿಟ್ರು. ಕೊನೆ ಪತಿಯಿಂದ ದೂರಾಗಿ ಆರೇ ತಿಂಗಳಿಗೆ ಹೆಣ್ಣುಮಗುವಿಗೆ ಜನ್ಮ ಕೊಟ್ಟ ಐಶ್ವರ್ಯ ಒಂಟಿಯಾಗಿ ಜೀವನ ನಡೆಸುತ್ತಾ ಸಿನಿಮಾ ರಂಗದಲ್ಲೂ ಬ್ಯುಸಿ ಆದ್ರು. ತಮಿಳು, ತೆಲುಗು, ಮಲೆಯಾಳಂ ಜೊತೆ ಹಿಂದಿ ಸಿನಿಮಾಗಳು ಸೇರಿ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿ ಆಗ್ತಿದ್ರು. 1990ರಿಂದ 2014ರ ವರೆಗೂ ಐಶ್ವರ್ಯ ಬದುಕು ಸುಂದರವಾಗೆ ಇತ್ತು. ಆದ್ರೆ ಈಗ ಐಶ್ವರ್ಯಾಗೆ ಸಿನಿಮಾ ಆಫರ್‌ಗಳು ಕಡಿಮೆ ಆಗಿವೆ. ಹೀಗಾಗಿ ಜೀವನಕ್ಕೆ ಅಂತ ಐಶ್ವರ್ಯ ಸೋಪ್ ಮಾರಿಕೊಂಡಿದ್ದು, ಯಾವ್ ಕೆಲಸ ಕೊಟ್ರೂ ಮಾಡುತ್ತೇನೆ ಅನ್ನುತ್ತಾರೆ. ಸಂಬಳ ಕೊಟ್ಟರೆ ಟಾಯ್ಲೆಟ್ ಕೂಡ ತೊಳೆಯುತ್ತೇನೆ ಅನ್ನುತ್ತಿದ್ದಾರೆ.