PVR ನಲ್ಲೂ ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ: ಪುನೀತ್ ರಾಜ್‌ಕುಮಾರ್

Mar 7, 2020, 5:09 PM IST

ಕೆ.ಆರ್.ಪುರಂ ಬಳಿಕ ಒರಾಯ‌ನ್ ಅಪ್ ಟೌನ್ ಮಾಲ್‌ನಲ್ಲಿ  100 ನೇ ಸ್ಕ್ರೀನ್‌ ಉದ್ಘಾಟನೆ ಮಾಡಿದ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್, ನನಗೆ ವೈಯಕ್ತಿಕವಾಗಿ ಸಿಂಗಲ್ ಥಿಯೇಟರ್‌ನಲ್ಲಿ ಸಿನಿಮಾ ನೋಡೋಕೆ ಖುಷಿ. ಅಲ್ಲಿ ಜನಗಳ ನಡುವೆ ಸಿನಿಮಾ ನೋಡುವ ಖುಷಿಯೇ ಬೇರೆ.  ಪಿವಿಆರ್ ನಲ್ಲಿ 'ಜೋಗಿ' ಸಿನಿಮಾನಾ ಅಪ್ಪಾಜಿ  ಮತ್ತು ರಜನಿಕಾಂತ್ ಸರ್ ಜೊತೆ ವೀಕ್ಷಿಸಿದ ನೆನಪಿದೆ ಎಂದರು. 

ಕೊರೋನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪವರ್‌ ಸ್ಟಾರ್!

ಇದೇ ವೇಳೆ ಪಿವಿಆರ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ ಎಂದು ಮನವಿ ಮಾಡಿದರು.