Oct 22, 2022, 12:39 AM IST
ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ. ಪುನೀತ ಪರ್ವ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ ಕಮಲ್ ಹಾಸನ್ ವಿಡಿಯೋ ಮೂಲಕ ಶುಭಾಶಯ ತಿಳಿಸಿದರು. ಅಪ್ಪು ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ ಕಮಲ್, ತಂದೆಯ ಯಶಸ್ಸನ್ನು ಯಾವುದನ್ನು ಹೊತ್ತು ಮೆರೆದಿಲ್ಲ. ಅವರ ಯಶಸ್ಸನ್ನೆ ಅವರು ಹೊತ್ತು ಮೆರೆದಿಲ್ಲ. ನನ್ನನ್ನು ಅವರ ಫ್ಯಾಮಿಲಿ ಎಂದು ಹೇಳಿದ್ದಕ್ಕೆ ಧನ್ಯವಾದಗಳು. ಅಣ್ಣಾವ್ರ ಮಗ ಇನ್ನು ಯಂಗ್ ಅಪ್ಪು ಇನ್ನಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.