ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

ಜೂ.ಎನ್​ಟಿಆರ್, ನೀಲ್​ಗೆ ಹುಟ್ಟೂರು ಪರಿಚಯಿಸಿದ ರಿಷಬ್: ಕುಂದಾಪುರದ ಕೆರಾಡಿಯ ಕುವರ ಶೆಟ್ಟಿ ಅಂತ ನಿಮ್ಗೆಲ್ಲಾ ಗೊತ್ತೇ!

Published : Sep 03, 2024, 11:04 AM IST

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್​ಗೆ ಒಂದ್​ ರೀತಿ ಎಕ್ಸ್ಟ್ರಾ ಕೇರ್​. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು. 
 

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ತನ್ನೂರು ಅಂದ್ರೆ ಭಾರಿ ಪ್ರೀತಿ. ಅದರಲ್ಲೇನಿದೆ. ಎಲ್ಲರಲ್ಲೂ ತಮ್ಮ ಊರಿನ ಮೇಲೆ ಅಭಿಮಾನ ಪ್ರೀತಿ ಕಾಳಜಿ ಇದ್ದಿದ್ದೇ ಅಲ್ವಾ ಅನ್ನ ಬೇಡಿ. ರಿಷಬ್​ಗೆ ಒಂದ್​ ರೀತಿ ಎಕ್ಸ್ಟ್ರಾ ಕೇರ್​. ಹೀಗಾಗೆ ರಿಷಬ್ ತನ್ನೂರಿನ ಕಥೆಗಳನ್ನೇ ಸಿನಿಮಾ ಮಾಡೋದು. ತನ್ನೂರಲ್ಲೇ ಸಿನಿಮಾ ಶೂಟಿಂಗ್ ಮಾಡೋದು. ಇದೀಗ ರಿಷಬ್​ ತನ್ನ ಸ್ನೇಹಿತ ತೆಲುಗು ಸ್ಟಾರ್​ ಜ್ಯೂನಿಯರ್​ ಎನ್​ಟಿಆರ್​​ಗೆ ಕೆರಾಡಿಯ ಊರು ಕೇರಿ, ದೇವಸ್ಥಾನದ ಪರಿಚಯ ಮಾಡಿಸಿದ್ದಾರೆ. ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯ ಕುವರ ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಕೆರಾಡಿಯಲ್ಲಿ ಎಂತೆಂಥಾ ಅದ್ಭುತಗಳಿವೆ ಅನ್ನೋ ವಿಚಾರ ಏನಾದ್ರು ನಿಮಗೆ ಗೊತ್ತಾ.? 

ಆ ಒಂದು ದೊಡ್ಡ ಅದ್ಭುತವನ್ನ, ಪವಾಡದ ಜಾಗವನ್ನ ರಿಷಬ್​ ಶೆಟ್ಟಿ ಈಗ ತನ್ನ ಗೆಳೆಯ ಜ್ಯೂನಿಯರ್ ಎನ್​ಟಿಆರ್​ ಹಾಗು ನಿರ್ದೇಶಕ ರಿಷಬ್ ಶೆಟ್ಟಿಗೆ ಪರಿಚಯಿಸಿದ್ದಾರೆ. ಈ ವೀಡಿಯೋ ನೋಡಿದ್ರೆ ನಿಜಕ್ಕೂ ಥ್ರಿಲ್ ಆಗುತ್ತೆ. ರಿಷಬ್ ಶೆಟ್ಟಿಯ ಕೆರಾಡಿ ಗ್ರಾಮದಲ್ಲಿ ಇಂತಹ ಅದ್ಭುತ ದೇವವಸ್ಥಾನ ಒಂದಿದೆಯಾ ಅಂತನ್ನಿಸುತ್ತೆ. ಹೌದು, ಕುಂದಾಪುರದ ಅದ್ಭುತ ತಾಣಗಳಲ್ಲಿ ಕೆರಾಡಿ ಊರು ಕೂಡ ಒಂದು. ಇಲ್ಲಿ ಮೂಡಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೆ ದೊಡ್ಡ ಇತಿಹಾಸ ಇದೆ. ಈ ದೇವಸ್ಥಾನಕ್ಕೆ ಜ್ಯೂನಿಯರ್ ಎನ್​ಟಿಆರ್​ ಹಾಗು ಪ್ರಶಾಂತ್ ನೀಲ್​ರನ್ನ ಕರೆದುಕೊಂಡು ಹೋಗಿದ್ದಾರ ರಿಷಬ್.

ಜ್ಯೂನಿಯರ್ ಎನ್​ಟಿಆರ್ ಕುಟುಂಬ, ರಿಷಬ್ ಫ್ಯಾಮಿಲಿ, ಹಾಗು ಪ್ರಾಶಾಂತ್ ನೀಲ್ ದಂಪತಿ ಕರಾವಳಿಯ ಕಾನನದೊಳಗಿರೋ ಈ ದೇವಸ್ಥಾನಕ್ಕೆ ಬೆಟ್ಟ ಹತ್ತಿ ಹೋಗಿ ಬಂದಿದ್ದಾರೆ. ರಿಷಬ್ ಜ್ಯೂಎನ್​ಟಿಆರ್​ ಪ್ರಶಾಂತ್ ನೀಲ್​​​​ ಬೆಟ್ಟದ ತಪ್ಪಲಿನಲ್ಲಿ ಓಡಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಮ್ಮನ ಆಸೆ ಈಡೇರಿಸಲು ಜೂನಿಯರ್ ಎನ್​ಟಿಆರ್  ಉಡುಪಿಯ ಕೃಷ್ಣ ಮಠಕ್ಕೆ ಬಂದಿದ್ರು. ಅವರನ್ನ ಏರ್​​​ಪೋರ್ಟ್​ನಲ್ಲಿ ರಿಸೀವ್ ಮಾಡಿದಾಗಿನಿಂದ ಹಿಡಿದು ತನ್ನೂರನ್ನ ಪರಿಚಯಿಸೋ ವರೆಗೂ ನಟ ರಿಷಬ್ ಶೆಟ್ಟಿ ಎಲ್ಲಾ ಜವಾಬ್ಧಾರಿ ವಹಿಸಿಕೊಂಡು ಜೊತೆ ನಿಂತಿದ್ದು ವಿಶೇಷ. ಒಟ್ನಲ್ಲಿ ರಿಷಬ್ ಜ್ಯೂನಿಯರ್​ ಸ್ನೇಹಕ್ಕೆ ಈ ವೀಡಿಯೋ ಕೂಡ ಒಂದು ಸಾಕ್ಷಿ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more