ಪ್ರೇಮ್​​-ಧ್ರುವ ಸರ್ಜಾ KD ಸಾಂಗ್ ಔಟ್, ಭಾರೀ ಕಿಕ್ ಕೊಡ್ತಿದೆ 'ಶಿವ ಶಿವಾ' ಹವಾ!

Dec 25, 2024, 3:16 PM IST

ಕೆಡಿ ಇವ್ನು ಇನೋಸೆಂಟಾ ವೈಲೆಂಟಾ.. ಟೀಸರ್ ನೋಡಿದವರು ಕೆಡಿ ಪಕ್ಕಾ ವೈಲೆಂಟು. ಬೆಂಕಿ ಬಿರುಗಾಳಿ ಅಂತೆಲ್ಲಾ ಹೇಳಿದ್ರು. ಆದ್ರೆ ಕೆಡಿ ಆಟ ಬಲ್ಲವರು ಯಾರ್ಯಾರು..? ಅದು ಜೋಗಿ ಪ್ರೇಮ್ ಮಾತ್ರ. ಈಗ ಈ ಮಾಸ್​ ಕೆಡಿ ವೈಲೆಂಟ್ ಅಲ್ಲ ಸಿಕ್ಕಾಪಟ್ಟೆ ಇನೋಸೆಂಟ್ ಕೂಡ ಹೌದು. ಹೀಗಂತ ಕ್ರಿಸ್​ಮಸ್​​ಗೆ ಅಂತ ಬಂದಿರೋ ಸಾಂಗ್ ಕೂಗಿ ಹೇಳಿತ್ತಿದೆ. ಹಾಗಾದ್ರೆ ಇಂದು ರಿಲೀಸ್ ಆಗಿರೋ ಕೆಡಿ ಸಾಂಗ್ ಹೇಗಿದೆ. ನೋಡೋಣ ಬನ್ನಿ ಆ ಝಕಲ್​ ಅನ್ನ... 

ಕೆಡಿ.. ಬ್ಯಾಂಡ್ ಬಾಜಾ ಶುರುವಾಗಿದೆ. ಜೆಸ್ಟ್ ಟೀಸರ್​ ಕೊಟ್ಟು, ಸಿನಿಮಾದ ಸ್ಟಾರ್ ಕಾಸ್ಟ್ ಲೀಸ್ಟ್ ಬಿಟ್ಟು ಇಂಡಿಯನ್ ಸಿನಿ ಜಗತ್ತೇ ಕೆಡಿ ಮೇಲೆ ಕಣ್ ಇಡೋ ಹಾಗೆ ಮಾಡಿದ್ದ ಪ್ರೇಮ್ ಈಗ ಬ್ಯಾಂಡ್ ಬಾಜ ಶುರು ಮಾಡಿದೆ. ಕೆಡಿ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಪ್ರೇಮ್​ ಟೀಂ ಗುರುವೇ ನಿನ್ನಾಟ ಬಲ್ಲವರು ಯಾರ್​ ಯಾರೋ ಅಂತ ಕೆಡಿ ಆಟಕ್ಕೆ ರೆಡ್​ ಕಾರ್ಪೆಟ್ ಹಾಕಿದ್ದಾರೆ.

ಕೆಡಿ ಸಾಂಗ್​​ ಹಿಟ್​ ಲೀಸ್ಟ್​​ಗೆ ಹಿಟ್​ ಆಗಿದೆ. ಕ್ರಿಸ್​ಮಸ್​ ಟೈಂನಲ್ಲಿ ಎಲ್ಲೆಲ್ಲೂ ಇದೇ ಈ ಹಾಡಿನದ್ದೇ ಟ್ರೆಂಡ್ ಶುರುವಾಗಿದೆ. ಅರ್ಜುನ್ ಜನ್ಯ ಮ್ಯೂಸಿಕ್ ಪ್ರೇಮ್​​ ಕೊಟ್ಟ ಲಿರಿಕ್ಸ್​ ಕಿಕ್ಕೇರಿಸಿದೆ. ಜೋಗಿ ಪ್ರೇಮ್ ಸಿನಿಮಾ ಅಂದ್ರೆ ಇವರ ಹಾಡುಗಳಿಗೆ ಕಾಯೋ ದೊಡ್ಡ ಸಂಗೀತ ಬಳಗ ಇದೆ. ಪ್ರೇಮ್​ ಏನೆ ಮಾಡ್ಲಿ ಸಾಂಗ್ ಮಾತ್ರ ಸೂಪರ್ ಆಗಿ ಇಟ್ಟಿರ್ತಾರೆ ಅನ್ನೋದು ಎಂದೂ ಸುಳ್ಳಾಗಿಲ್ಲ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..