Oct 12, 2024, 12:04 PM IST
ಸ್ಯಾಂಡಲ್‌ವುಡ್‌ನ ಮೋಸ್ಟ್ ಅವೇಟೆಡ್ ಮೂವಿ ಮಾರ್ಟಿನ್ ಇವತ್ತು ವರ್ಡ್ ವೈಡ್ ತೆರೆಗೆ ಬಂದಿದೆ. ಮೂರು ವರ್ಷಗಳ ಬಳಿಕ ಬಂದಿರೋ ಆಕ್ಷನ್ ಪ್ರಿನ್ಸ್ ಧ್ರುವ ಸಿನಿಮಾವನ್ನ ಫ್ಯಾನ್ಸ್ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ವಿಶ್ವದಾದ್ಯಂತ ಚಿತ್ರಕ್ಕೆ ಭರ್ಜರಿ ಓಪನಿಂಗ್ ಕೂಡ ಸಿಕ್ಕಿದೆ. ಹಾಗಾದ್ರೆ ಈ ಬಹುನಿರೀಕ್ಷೆಯ ಸಿನಿಮಾ ಹೇಗೆ ಮೂಡಿಬಂದಿದೆ..? ಮಾರ್ಟಿನ್ ಅಡ್ಡದಲ್ಲಿ ಏನೆಲ್ಲಾ ಇದೆ. ಮಾರ್ಟಿನ್ ಟೈಟಲ್ ಕೇಳಿ ಇಲ್ಲಿ ನಾಯಕನ ಹೆಸರು ಮಾರ್ಟಿನ್ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಇಲ್ಲಿ ಕಥಾನಾಯಕ ಕಸ್ಟಮ್ಸ್ ಆಫೀಸರ್ ಅರ್ಜುನ್. ಥೇಟ್ ಇವನಂತೆ ಇರೋ ಡೆಡ್ಲಿ ಗ್ಯಾಂಗ್ಸ್ಟರ್ ಮಾರ್ಟಿನ್.
ಈ ಪ್ರಾಮಾಣಿಕ ಆಫೀಸರ್ ಅರ್ಜುನ್ ಮತ್ತು ಗ್ಯಾಂಗ್ಸ್ಟರ್ ಮಾರ್ಟಿನ್ ನಡುವೆ, ಒಂದು ದೊಡ್ಡ ಮೊತ್ತದ ಸರಕಿನ ವಿಚಾರಕ್ಕೆ ವಾರ್ ಸ್ಟಾರ್ಟ್ ಆಗುತ್ತೆ. ಮಾರ್ಟಿನ್ - ಅರ್ಜುನ್ ನಡುವಿನ ಈ ಸಮರ ದೇಶ ವಿದೇಶಗಳವರೆಗೂ ಸಾಗುತ್ತೆ. ಈ ಇಬ್ಬರ ಕದನದಲ್ಲಿ ನೂರಾರು ಕಾರು ಉಡೀಸ್ ಆಗುತ್ವೆ, ಗನ್ಗಳು ಅಬ್ಬರಿಸುತ್ವೆ, ಬಾಂಬುಗಳು ಸಿಡಿಯುತ್ವೆ.. ಕೊನೆಗೂ ಈ ಕದನದಲ್ಲಿ ಗೆಲ್ಲೋರ್ಯಾರು ಅನ್ನೋದೇ ಸಿನಿಮಾದ ಕಹಾನಿ. ಅರ್ಜುನ್ ಮತ್ತು ಮಾರ್ಟಿನ್ ದ್ವಿಪಾತ್ರಗಳಲ್ಲಿ ಧ್ರುವ ಸರ್ಜಾ ಕಮಾಲ್ ಮಾಡಿದ್ದಾರೆ. ವಿಭಿನ್ನ ಮ್ಯಾನರಿಸಂ, ಗೆಟಪ್ , ಡೈಲಾಗ್ ಡೆಲಿವರಿ ಮೂಲಕ ಫ್ಯಾನ್ಸ್ಗೆ ಡಬಲ್ ಧಮಾಕಾ ಕೊಟ್ಟಿದ್ದಾರೆ.
ಌಕ್ಷನ್ ದೃಶ್ಯಗಳಲ್ಲಂತೂ ಧ್ರುವ ಅಕ್ಷರಶಃ ಬೆಂಕಿಯುಂಡೆ. ಇನ್ನೂ ವೈಭವಿ ಶಾಂಡಿಲ್ಯ ತೆರೆ ಮೇಲೆ ಮುದ್ದಾಗಿ ಕಾಣ್ತಾರೆ.. ಅನ್ವೇಷಿ ಜೈನ್ ಗ್ಲಾಮರ್ನಿಂದ ಮತ್ತೇರಿಸ್ತಾರೆ. ಅಚ್ಯುತ್ ಕುಮಾರ್, ಚಿಕ್ಕಣ್ಣ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ನವಾಬ್ ಶಾ, ರೋಹಿತ್ ಪಾಠಕ್ ಚಿತ್ರಕ್ಕೆ ತೂಕ ತಂದುಕೊಟ್ಟಿದ್ದಾರೆ. ಮಾರ್ಟಿನ್ ಸಿನಿಮಾದ ಮೇಕಿಂಗ್ ಯಾವ ಹಾಲಿವುಡ್ ಸಿನಿಮಾಗೂ ಕಮ್ಕಿಯಿಲ್ಲ. ಸತ್ಯ ಹೆಗಡೆ ಸಿನಿಮಾಟೋಗ್ರಫಿ ಸಿನಿಮಾದ ಬಿಗ್ ಹೈಲೈಟ್. ಚೇಸಿಂಗ್ & ಌಕ್ಷನ್ ಸಿಕ್ವೆನ್ಸ್ ಗಳಂತೂ ಪ್ರೇಕ್ಷಕರನ್ನ ಸೀಟಿನ ತುದಿಗೆ ತಂದು ಕೂರಿಸುತ್ವೆ. ರಾಮ್ ಲಕ್ಷಣ್ ಮತ್ತು ರವಿವರ್ಮ ಕಂಪೋಸ್ ಮಾಡಿರೋ ಸ್ಟಂಟ್ಸ್ ಸಿನಿಮಾದ ಬಿಗ್ಗೆಸ್ಟ್ ಪ್ಲಸ್ ಪಾಯಿಂಟ್ಸ್.
ಮಾರ್ಟಿನ್ ಸಿನಿಮಾಗೆ ನೀರಿನಂತೆ ಹಣ ಖರ್ಚು ಮಾಡಲಾಗಿದೆ. ಅರ್ಜುನ್ ಸರ್ಜಾ ಕಥೆಯೂ ಅಷ್ಟೇ ಅದ್ಭುತವಾಗಿದೆ. ಆದ್ರೆ ನಿರೂಪಣೆಯಲ್ಲಿ ಮಾತ್ರ ನಿರ್ದೇಶಕ ಅರ್ಜುನ್ ಕೊಂಚ ಎಡವಿದ್ದಾರೆ. ಹಲವು ಕಡೆ ಲಾಜಿಕ್ ಮಿಸ್ ಹೊಡೆಯುತ್ತೆ. ಚಿತ್ರಕಥೆ ನೋಡುಗರ ತಾಳ್ಮೆ ಪರೀಕ್ಷೆ ಮಾಡುತ್ತೆ. ಮೇಕಿಂಗ್ ವಿಚಾರದಲ್ಲಿ ಮಾರ್ಟಿನ್ ಖಂಡಿತ ಕನ್ನಡದ ಬಿಗ್ಗೆಸ್ಟ್ ಸಿನಿಮಾ. ಕನ್ನಡ ತಂತ್ರಜ್ಞರು ಖಂಡಿತ ಹಾಲಿವುಡ್ಗೆ ಸವಾಲು ಹಾಕುವಂಥಾ ಸಿನಿಮಾ ಮಾಡಿದ್ದಾರೆ. ಧ್ರುವ ಸರ್ಜಾ ಅಂತೂ ಎರಡು ಪಾತ್ರಗಳನ್ನ ನಿಭಾಯಿಸ್ತಾ ಇಡೀ ಸಿನಿಮಾವನ್ನ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಇದೊಂಥರಾ ಧ್ರುವ ಒನ್ ಮ್ಯಾನ್ ಶೋ ಅಂದ್ರೆ ತಪ್ಪಾಗಲ್ಲ. ಌಕ್ಷನ್ ಪ್ರಿಯರಿಗೆ ಇದು ಖಂಡಿತ ಖುಷಿ ಕೊಡುವಂಥಾ ಮೆಗಾಸಿನಿಮಾ.