ಏನ್ ಮಾಡ್ತೀರಾ ನೋಡಿ, ಹರೀಶ್ ರಾಜ್‌ಗೆ 'ಮತ್ತೆ ಪ್ಯಾರ್ಗೆ ಆಗ್ಬಿಟ್ಟೈತೆ..!

Jan 15, 2025, 11:30 PM IST

ಸ್ಯಾಂಡಲ್​ವುಡ್​​ನ ಕಲಾಕರ್ ಅಂತಲೇ ಫೇಮಸ್ ಆಗಿರೋ ನಟ, ನಿರ್ದೇಶಕ ಹರೀಶ್ ರಾಜ್ (Harish Raj) ಸಾರಥ್ಯದಲ್ಲಿ 'ವೆಂಕಟೇಶಾಯ ನಮಃ'  ಸಿನಿಮಾ ಸಿದ್ಧವಾಗಿದೆ. ಇದೀಗ ಈ ಸಿನಿಮಾದ ಟೀಸರ್ ರಿಲೀಸ್ ಅಗಿದೆ. ಸಿನಿಮಾದಲ್ಲಿ ಹಿರಿಯ ನಟಿ ಉಮಾಶ್ರೀ, ಅಶೋಕ್​, ಉಮೇಶ್​​, ತಬಲಾ ನಾಣಿ ನಟಿಸಿದ್ದು, ಈ ಚಿತ್ರದಲ್ಲಿ  ಎಂಟು ಜನ  ಹೀರೋಯಿನ್ ಗಳಿದ್ದಾರೆ. ಚಿತಕ್ಕೆ ಪಿ. ಜನಾರ್ದನ ಬಂಡವಾಳ ಹೂಡಿದ್ದಾರೆ. 

ಚಂದನವನದ ಹೆಸರಾಂತ ನಟ ಹರೀಶ್ ರಾಜ್ ಅವರು ನಟಿಸಿ ನಿರ್ದೇಶನ ಮಾಡುತ್ತಿರುವ ಹೊಚ್ಚಹೊಸ ಸಿನಿಮಾ 'ವೆಂಕಟೇಶಾಯ ನಮಃ!'. 'ಗೋವಿಂದಾಯ ನಮಃ' ಸಿನಿಮಾದ ಪ್ರೇರಣೆಯಲ್ಲಿ ಸಿದ್ದವಾಗುತ್ತಿರುವ ಈ ಸಿನಿಮಾಗೆ 'ಮತ್ತೆ ಪ್ಯಾರ್ಗೆ ಆಗ್ಬಿಟ್ಟೈತೆ' ಎಂಬ ಅಡಿಬರಹವಿದ್ದು, ಸಿನಿಮಾದ ಸುದ್ದಿಗೋಷ್ಠಿ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಒಟ್ಟು ಎಂಟು ಜನ ನಾಯಕಿಯರಿರುವ ಈ ಸಿನಿಮಾದಲ್ಲಿ ಎಂ ಎಸ್ ಉಮೇಶ್, ಅಶೋಕ್, ಉಮಾಶ್ರೀ ಅವರನ್ನೊಳಗೊಂಡ ಪ್ರಬುದ್ಧ ನಟನಟಿಯರ ತಾರಾಗಣವಿದೆ.