ಅಪ್ಪು ಉಸಿರು ಚೆಲ್ಲಿದ ಕ್ಷಣದಿಂದ ಇಂದು ನಡೆಯುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದವರೆಗೆ ಹೆಜ್ಜೆ ಹೆಜ್ಜೆಗೂ ದೊಡ್ಮನೆ ಜೊತೆ ಬೊಮ್ಮಾಯಿ ಸರ್ಕಾರ ನಿಂತಿದೆ.
ಇಂದು ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗ್ತಿದೆ. ಇದು ಅಭಿಮಾನದ ಅರಸನಿಗೆ ಬೊಮ್ಮಾಯಿ ಸರ್ಕಾರದ ಅಪ್ಪುಗೆಯ ಅಭಿಮಾನ. ಕಳೆದ ವರ್ಷ ಘೋಷಣೆ ಮಾಡಿದಂತೆ ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗ್ತಿದೆ. ಈ ಮೂಲಕ ಯುವರತ್ನನಿಗೆ ರಾಜ್ಯ ಸರ್ಕಾರ ರಾಜ್ಯದ ಅತೀ ದೊಡ್ಡ ಗೌರವವನ್ನು ಸಲ್ಲಿಸ್ತಾ ಇದೆ.
ಅಪ್ಪುಗೆ ಕರ್ನಾಟಕ ರತ್ನ; ಬೆಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಅದ್ದೂರಿ ಸ್ವಾಗತ