Kabza Movie: ಉಪ್ಪಿ-ಕಿಚ್ಚನ 'ಕಬ್ಜ' ಚಿತ್ರಕ್ಕೆ ಹೀರೋಯಿನ್ ಯಾರು ಗೊತ್ತಾ?

Kabza Movie: ಉಪ್ಪಿ-ಕಿಚ್ಚನ 'ಕಬ್ಜ' ಚಿತ್ರಕ್ಕೆ ಹೀರೋಯಿನ್ ಯಾರು ಗೊತ್ತಾ?

Suvarna News   | Asianet News
Published : Mar 07, 2022, 11:50 AM IST

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸೋದಕ್ಕೆ ಸ್ಯಾಂಡಲ್‌ವುಡ್‌ನಿಂದ ಬರುತ್ತಿರೋ ಮತ್ತೊಂದು ಸಿನಿಮಾ 'ಕಬ್ಜ'. ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್‌ನ ಕಬ್ಜ ಸಿನಿಮಾ ಪೋಸ್ಟರ್‌ನಿಂದಲೇ ನಿರೀಕ್ಷೆ ಹುಟ್ಟು ಹಾಕಿದೆ. 
 

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸೋದಕ್ಕೆ ಸ್ಯಾಂಡಲ್‌ವುಡ್‌ನಿಂದ ಬರುತ್ತಿರೋ ಮತ್ತೊಂದು ಸಿನಿಮಾ 'ಕಬ್ಜ' (Kabza). ರಿಯಲ್ ಸ್ಟಾರ್ ಉಪೇಂದ್ರ (Upendra), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಕಾಂಬಿನೇಷನ್‌ನ ಕಬ್ಜ ಸಿನಿಮಾ ಪೋಸ್ಟರ್‌ನಿಂದಲೇ ನಿರೀಕ್ಷೆ ಹುಟ್ಟು ಹಾಕಿದೆ. ಉಪ್ಪಿ ಕಿಚ್ಚನ ಲುಕ್‌ಗಳು ಟಾಕ್ ಸೃಷ್ಟಿಸಿವೆ. ಕಬ್ಜ ಶೂಟಿಂಗ್ ಕೂಡ ನಡೆಯುತ್ತಿದೆ. ಆದರೆ ಈ ಸಿನಿಮಾದಲ್ಲಿ ನಾಯಕಿ ಯಾರು ಅಂತ  ಘೋಷಣೆಯಾಗಿಲ್ಲ. ಈಗ ಕಬ್ಜ ಹೀರೋಹಿನ್ ಸೀಕ್ರೇಟ್ ರಿವೀಲ್ ಮಾಡೋ ಸಮಯ ಬಂದಿದೆ. ಕಬ್ಜ ಡೈರೆಕ್ಟರ್ ಆರ್ ಚಂದ್ರು (R Chandru) ನಾಯಕಿ ಹೆಸರನ್ನ ರಿವೀಲ್ ಮಾಡೋದಕ್ಕೆ ಸಮಯ ನಿಗದಿ ಮಾಡಿದ್ದಾರೆ.  ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಅಭಿನಯಿಸಲಿದ್ದಾರೆ. 

Upendra: ಏಪ್ರಿಲ್ 1ಕ್ಕೆ ಬೆಳ್ಳಿತೆರೆ ಮೇಲೆ ಬರಲಿದ್ದಾರೆ ಹೋಮ್‌ ಮಿನಿಸ್ಟರ್‌!

ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿರೋ ಹೀರೋಯಿನ್‌ಗಳನ್ನೇ ನಾಯಕಿಯರನ್ನಾಗಿ ಮಾಡೋದು ನಿರ್ದೇಶನ ಆರ್ ಚಂದ್ರು ಪ್ಲಾನ್ ಆಗಿತ್ತು. ಹೀಗಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಹಾಗು ನಯನತಾರಾಗೆ 'ಕಬ್ಜ' ಸಿನಿಮಾದ ನಾಯಕಿಯರಾಗೋ ಆಫರ್‌ ಅನ್ನು ಮುಂದಿಡಲಾಗಿತ್ತು. ಆದ್ರೆ ತಮನ್ನಾ ಹಾಗು ನಯನತಾರ, ಈ ಆಫರ್‌ ಅನ್ನು ಒಪ್ಪಿಲ್ಲ ಅಂತ ಹೇಳಲಾಗ್ತಿದೆ.  ಕಬ್ಜ ಸಿನಿಮಾ ನಾಯಕಿಯರ ವಿಷಯವನ್ನ ನಿರ್ದೇಶಕ ಆರ್ ಚಂದ್ರು ಇಷ್ಟು ದಿನ ಗುಟ್ಟಾಗೆ ಇಟ್ಟಿದ್ದಾರೆ. ಈ ಸಿನಿಮಾದ ಇಬ್ಬರು ನಾಯಕಿಯರಲ್ಲಿ ಮೊದಲ ಹೆಸರನ್ನ ಮಾರ್ಚ್ 07ಕ್ಕೆ ರಿವೀಲ್ ಮಾಡಲಿದ್ದಾರೆ. ಕಬ್ಜ ಕೋಟೆಗೆ ಬರೋ ನಾಯಕಿಯರಲ್ಲಿ ಈಗ ಶ್ರೇಯಾ ಶರಣ್ ಹಾಗು ರಾಕುಲ್ ಪ್ರೀತ್ ಸಿಂಗ್ ಹೆಸರು ಕೇಳಿಬರುತ್ತಿದೆ. ಅಷ್ಟೆ ಅಲ್ಲ ಕನ್ನಡದಲ್ಲಿ ಒಂದೇ ಒಂದು ಸಿನಿಮಾ ಮಾಡಿರೋ ಆಶಾ ಭಟ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಹೀಗಾಗಿ ಕಬ್ಜ ಹೀರೋಯಿನ್ ಯಾರಾಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more