ಸುಳ್ಳು ಸರ್ಜರಿ.. ಡ್ರಾಮಾ ಭರ್ಜರಿ.. ದರ್ಶನ್ ರಿವರ್ಸ್ ಸ್ಕ್ರೀನ್ ​ಪ್ಲೇ: ಹೈಕೋರ್ಟ್ ಎದುರು ಹೇಳಿದ ದಿನ ನಡೆಯಲಿಲ್ಲ ಸರ್ಜರಿ!

ಸುಳ್ಳು ಸರ್ಜರಿ.. ಡ್ರಾಮಾ ಭರ್ಜರಿ.. ದರ್ಶನ್ ರಿವರ್ಸ್ ಸ್ಕ್ರೀನ್ ​ಪ್ಲೇ: ಹೈಕೋರ್ಟ್ ಎದುರು ಹೇಳಿದ ದಿನ ನಡೆಯಲಿಲ್ಲ ಸರ್ಜರಿ!

Published : Dec 13, 2024, 12:36 PM IST

ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಡಿಸೆಂಬರ್ 11ರಂದು ದರ್ಶನ್​ ಸರ್ಜರಿಗೆ ಒಳಗಾಗ್ತಾರೆ ಅಂತ ಹೇಳಿದ್ರು. ಆದ್ರೆ ಡಿಸೆಂಬರ್ 11ರಂದು ಕೂಡ ಸರ್ಜರಿ ನಡೆದಿಲ್ಲ. 

ಹೈಕೋರ್ಟ್ ಎದುರು ಡಿಸೆಂಬರ್ 11ರಂದು ದರ್ಶನ್ ಸರ್ಜರಿ ಮಾಡಿಸಿಕೊಳ್ತಾರೆ ಅಂತ ವಕೀಲರು ಮಾಹಿತಿ ಕೊಟ್ಟಿದ್ರು. ಆದ್ರೆ ಆಸ್ಪತ್ರೆ ಮೂಲಗಳ ಪ್ರಕಾರ ಇನ್ನೂ ಸರ್ಜರಿ ನಡೆದಿಲ್ಲ. ಹಾಗಾದ್ರೆ ವೈದ್ಯರು ಯಾಕೆ ಸರ್ಜರಿ ಮಾಡಲಿಲ್ಲ..? ಈ ಬೆನ್ನು ನೋವಿನ ಎಪಿಸೋಡೇ ಒಂದು ನಾಟಕನಾ..? ಆ ಕುರಿತ ಎಕ್ಸ್​​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ. ಯೆಸ್ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಡಿಸೆಂಬರ್ 11ರಂದು ದರ್ಶನ್​ ಸರ್ಜರಿಗೆ ಒಳಗಾಗ್ತಾರೆ ಅಂತ ಹೇಳಿದ್ರು. ಆದ್ರೆ ಡಿಸೆಂಬರ್ 11ರಂದು ಕೂಡ ಸರ್ಜರಿ ನಡೆದಿಲ್ಲ. ದರ್ಶನ್ ಫಿಸಿಯೋಥೆರಪಿ ಮಾಡಿಸಿಕೊಂಡು , ಜೈಲ್ ಬೆಡ್​ ಮೇಲೆ ಆರಾಮಾಗೇ ಮಲಗಿದ್ದಾನೆ. 

ಅಸಲಿಗೆ ಹೈಕೋರ್ಟ್ ದರ್ಶನ್​ಗೆ ಮಧ್ಯಂತರ ಜಾಮೀನು ನೀಡಿದ್ದೇ ಬೆನ್ನು ನೋವಿನ ಸರ್ಜರಿಗಾಗಿ. ಬೇಲ್ ಸಿಕ್ರೆ ನಾಳೆನೇ ಸರ್ಜರಿ ಅಂದಿದ್ದ ದರ್ಶನ್, ಬೇಲ್ ಪಡೆದು 6 ವಾರ ಮಾಡಿದ್ದು ಅಕ್ಷರಶಃ ಕಾಲಹರಣ. ದರ್ಶನ್ ರಿಲೀಸ್ ಆಗಿದ್ದು ಅಕ್ಟೋಬರ್ 30ಕ್ಕೆ ಆದ್ರೆ ಡಿಸೆಂಬರ್ 12ರ ವರೆಗೂ ದರ್ಶನ್ ಸರ್ಜರಿ ಮಾಡಿಸಿಕೊಂಡಿಲ್ಲ. ವೈದ್ಯರು ದರ್ಶನ್ ಬಿಪಿಯಲ್ಲಿ ವೇರಿಯೇಷನ್ ಇರೋದ್ರಿಂದ ಸರ್ಜರಿ ಮಾಡ್ತಿಲ್ಲ ಅನ್ನೋ ಉತ್ತರ ಕೊಟ್ಟಿದ್ದಾರೆ. ಆದ್ರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪಬ್ಲಿಕ್ ಪ್ರ್ಯಾಸಿಕ್ಯೂಟರ್ ಈ ಸರ್ಜರಿ ವಿಚಾರವೇ ಒಂದು ಬಿಗ್ ಡ್ರಾಮಾ ಅಂತ ಹೈಕೋರ್ಟ್​​ನಲ್ಲಿ ವಾದ ಮಾಡಿದ್ರು. ಎಂತೆಂಥಾ ಸರ್ಜರಿಗಳನ್ನ ತ್ವರಿತವಾಗಿ ಮಾಡ್ತಾರೆ. 

ಆದ್ರೆ ಬೆನ್ನುನೋವಿಗೆ ಆಗಬೇಕಿರೋ ಚಿಕ್ಕ ಸರ್ಜರಿಗೆ ಬಿಪಿ ನೆಪ ಹೇಳಿ ವಿಳಂಬ ಮಾಡ್ತಿರೋದು ಪಕ್ಕಾ ಡ್ರಾಮಾ ಅಂತ ಆರೋಪ ಮಾಡಿದ್ರು. ಇನ್ನೂ ದರ್ಶನ್ ಮೆಡಿಕಲ್ ಬೇಲ್​ನ ರದ್ದು ಮಾಡಿ ಅಂತ ಸುಪ್ರೀಂ ಕೋರ್ಟ್​ನಲ್ಲೂ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ನಡುವೆ ಹೈಕೋರ್ಟ್​ಗೆ ತಿಳಿಸಿದ ದಿನಾಂಕದಂದೂ ಸರ್ಜರಿ ಮಾಡಿಸಿಲ್ಲ. ಅಸಲಿಗೆ ಸರ್ಜರಿಯನ್ನ ವಿಳಂಬ ಮಾಡಿಕೊಂಡು , ಮಧ್ಯಂತರ ಬೇಲ್ ಅವಧಿ ಮುಗಿಯೋವರೆಗೂ ಕಾಲಹರಣ ಮಾಡಿ, ಅಷ್ಟೊತ್ತಿಗೆ ರೆಗ್ಯೂಲರ್ ಬೇಲ್ ಪಡದುಕೊಳ್ಳಬಹುದು ಅಂತ ದರ್ಶನ್ ಲೆಕ್ಕಾಚಾರವಾಗಿತ್ತು. ಇಲ್ಲಿವರೆಗೂ ಅವರ ಲೆಕ್ಕಂದತೆಯೇ ನಡೆದಿದೆ. ಆದ್ರೆ ರೆಗ್ಯೂಲರ್ ಬೇಲ್ ವಿಚಾರದಲ್ಲಿ ಹೈಕೋರ್ಟ್ ಏನ್ ತೀರ್ಮಾನ ಕೊಡುತ್ತೆ ಅನ್ನೋದ್ರ ಮೇಲೆ ದರ್ಶನ್ ಭವಿಷ್ಯ ನಿಂತುಕೊಂಡಿದೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more