ಧನಂಜಯ್-ಧನ್ಯತಾ ಕಲ್ಯಾಣ, ಆಹ್ವಾನ ಪತ್ರಿಕೆ ಹಂಚೋದ್ರಲ್ಲಿ ಡಾಲಿ ಬ್ಯುಸಿ!

Dec 16, 2024, 4:57 PM IST

ಡಾಲಿ ಧನಂಜಯ್ ಮದುವೆಗೆ ಇನ್ನೇರಡೇ ತಿಂಗಳು ಬಾಕಿ ಇದೆ. ಸದ್ಯ ಡಾಲಿ-ಧನ್ಯತಾರ ಮದುವೆ ಕಾರ್ಡ್ ರೆಡಿಯಾಗಿದ್ದು ಇಬ್ಬರು ಸೇರಿ ಗಣ್ಯರಿಗೆಲ್ಲಾ ಕರೆಯೋಲೆ ಹಂಚ್ತಾ ಇದ್ದಾರೆ. ಇನ್ನೂ ಈ ಜೋಡಿಯ ಮದುವೆ ಕರೆಯೋಲೆ ಕೂಡ ಸಖತ್ ಸಿಂಪಲ್ ಌಂಡ್ ಬ್ಯೂಟಿಫುಲ್ ಆಗಿದೆ.

ಡಾಲಿ ಧನಂಜಯ್ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡು, ಫೆಬ್ರುವರಿ 16ಕ್ಕೆ ಮದುವೆ ಅನ್ನೋ ನ್ಯೂಸ್ ಕೊಟ್ಟಿದ್ದ ಡಾಲಿ ಈಗ ಆಹ್ವಾನ ಪತ್ರಿಕೆ ಹಂಚೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಮೊದಲ ಆಮಂತ್ರಣ ಪತ್ರಿಕೆಯನ್ನ ರಾಜ್ಯದ ಸಿಎಂಗೆ ಕೊಟ್ಟಿದ್ದಾರೆ ಧನಂಜಯ್. ಇನ್ನೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೂ ಭೇಟಿ ಮಾಡಿ ಮದುವೆ ಆಹ್ವಾನ ಕೊಟ್ಟಿದ್ದಾರೆ. ಭಾವಿ ಪತ್ನಿಯ ಜೊತೆಗೂಡಿ ರಾಜಕೀಯ, ಸಿನಿಲೋಕದ ಗಣ್ಯರನ್ನ ಭೇಟಿ ಮಾಡಿ ಇನ್ವಿಟೇಶನ್ ಹಂಚ್ತಾ ಇದ್ದಾರೆ.

ಡಾಲಿ  ಆಮಂತ್ರಣ ಪತ್ರಿಕೆ ಕೂಡ ತುಂಬಾ ವಿಶೇಷವಾಗಿದೆ. ಯಾವುದೇ ಆಡಂಬರವಿಲ್ಲದ ಕೈ ಬರಹದಲ್ಲಿ ಬರೆದಿರೋ ಆತ್ಮೀಯ ಆಮಂತ್ರಣ ಪತ್ರಿಕೆ ಇದು. ಡಾಲಿ ಏನೇ ಮಾಡಿದ್ರೂ ಕ್ರಿಯೇಟಿವ್ ಆಗಿ ಮಾಡ್ತಾರೆ. ಮದುವೆ ಕಾರ್ಡ್​​ಅನ್ನೂ ಅಷ್ಟೇ ಸ್ಪೆಷಲ್ ಆಗಿ ಮಾಡಿದ್ದಾರೆ.

ಫೆಬ್ರವರಿ 16 ರಂದು ಡಾಲಿ ಧನಂಜಯ್  ಮದುವೆ ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಗ್ರೌಂಡ್‌ ನಲ್ಲಿ ನಡೆಯಲಿದೆ. ಶನಿವಾರ ಆರತಕ್ಷತೆ,  ಭಾನುವಾರ ವಿವಾಹ ನೆರವೇರಲಿದೆ. ಇಂದಿನಿಂದ ಪತ್ರಿಕೆ ಹಂಚಲು ಶುರು ಮಾಡಿದ್ದು ಡಾಲಿ ಮದುವೆಗೆ ಕೇವಲ ಸಿನಿಮಾ ಗಣ್ಯರು ಮಾತ್ರವಲ್ಲದೇ ರಾಜಕೀಯ ಗಣ್ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ... ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..