ಹೊಸ ವರ್ಷಕ್ಕೆ ದಿನಕರ್ ‘ರಾಯಲ್’ ಚಾಲೆಂಜ್!ವಿರಾಟ್-ಸಂಜನಾ ಕೆಮೆಸ್ಟ್ರಿಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್!

ಹೊಸ ವರ್ಷಕ್ಕೆ ದಿನಕರ್ ‘ರಾಯಲ್’ ಚಾಲೆಂಜ್!ವಿರಾಟ್-ಸಂಜನಾ ಕೆಮೆಸ್ಟ್ರಿಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್!

Published : Dec 30, 2024, 03:48 PM IST

ದಿನಕರ್ ತೂಗುದೀಪ ನಿರ್ದೇಶನದ, ವಿರಾಟ್ ಮತ್ತು ಸಂಜನಾ ನಟಿಸಿರುವ 'ರಾಯಲ್' ಸಿನಿಮಾ ಜನವರಿ 24 ರಂದು ಬಿಡುಗಡೆಯಾಗಲಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಜನಪ್ರಿಯತೆ ಗಳಿಸಿವೆ.

ದಿನಕರ್ ತೂಗುದೀಪ ನಿರ್ದೇಶನದ ವಿರಾಟ್- ಸಂಜನಾ ನಟಿಸಿರೋ ರಾಯಲ್ ಸಿನಿಮಾ ಈಗಾಗ್ಲೇ ತನ್ನ ಸೂಪರ್ ಡೂಪರ್ ಹಾಡುಗಳಿಂದ ಸೌಂಡ್ ಮಾಡಿದೆ. ಇನ್ನೇನು ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿರೋ ರಾಯಲ್ ಟೀಂ ಒಂದು ಮೆಗಾ ಅಪ್​ಡೇಟ್ ಕೊಟ್ಟಿದೆ.    ಟಂಗ್ ಟಂಗ್ ಮತ್ತು ಆಟಂ ಬಾಂಬ್ ಸಾಂಗ್​ಗಳು ಅಕ್ಷರಶಃ ಕಿಚ್ಚು ಹಚ್ಚಿವೆ. ರಾಯಲ್ ಮೂವಿಗೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು ರಾಯಲ್ ಆಲ್ಬಂನಲ್ಲಿ ಒಂದಕ್ಕಿಂತ ಒಂದು ಮಸ್ತ್ ಸಾಂಗ್ಸ್ ಇವೆ. ಈಗ ರಿಲೀಸ್ ಆಗಿರೋ ವಿಡಿಯೋ ಸಾಂಗ್ಸ್ ಸಖತ್ ರಾಯಲ್ ಆಗಿ ಮೂಡಿಬಂದಿದ್ದು ವಿರಾಟ್ ಌಂಡ್ ಸಂಜು ಕೆಮೆಸ್ಟ್ರಿ ಅಂತೂ ಸಖತ್ ಕ್ಯೂಟ್ ಆಗಿ ಮೂಡಿಬಂದಿದೆ.

ಸೋ ಸಾಂಗ್ಸ್ ನೋಡಿ ಥ್ರಿಲ್ ಆದ ಫ್ಯಾನ್ಸ್ ರಾಯಲ್ ಥಿಯೇಟರ್ ಗೆ ಎಂಟ್ರಿ ಕೊಡೋದು ಯಾವಾಗ ಅಂತ ಕೇಳ್ತಾನೇ ಇದ್ರು. ಅದಕ್ಕೀಗ ರಾಯಲ್ ಟೀಂ ಉತ್ತರ ಕೊಟ್ಟಿದೆ. ಜನವರಿ 24ಕ್ಕೆ ಸಿನಿಮಾ ರಾಯಲ್ ಆಗಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆ. ಜೊತೆಜೊತೆಯಲಿ ನಂತರ ದಿನಕರ್ ಡೈರೆಕ್ಟ್ ಮಾಡಿರೋ ಪ್ರೇಮ್​ ಕಹಾನಿ ಇದು. ಸೋ ಸಹಜವಾಗೇ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಜಯಣ್ಣ ಆಂಡ್‌ ಭೋಗೇಂದ್ರ ಈ ಸಿನಿಮಾಗೆ ಬಂಡವಾಳ ಹೂಡಿದ್ದು ರಾಯಲ್ ಆಗೇ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ವಿರಾಟ್&ಸಂಜನಾ ಜೋಡಿ ಮೋಡಿ ಮಾಡೋ ಲಕ್ಷಣಗಳು ಕಾಣ್ತಿವೆ. ಸೋ  ಹೊಸ ವರ್ಷಕ್ಕೆ ಈ ಹೊಸತನದ ಸಿನಿಮಾ ನೋಡೋದಕ್ಕೆ ನೀವು ಕೂಡ ಸಜ್ಜಾಗಿ. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!