ಧ್ರುವ ಸರ್ಜಾ ಬರ್ತ್​ಡೇಗೆ ಡಬಲ್ ಗಿಫ್ಟ್: ಆಕ್ಷನ್ ಪ್ರಿನ್ಸ್ ಬಾಲಿವುಡ್ ಎಂಟ್ರಿ ಫಿಕ್ಸ್!

ಧ್ರುವ ಸರ್ಜಾ ಬರ್ತ್​ಡೇಗೆ ಡಬಲ್ ಗಿಫ್ಟ್: ಆಕ್ಷನ್ ಪ್ರಿನ್ಸ್ ಬಾಲಿವುಡ್ ಎಂಟ್ರಿ ಫಿಕ್ಸ್!

Published : Oct 07, 2024, 12:41 PM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಾರಿ ಬರ್ತ್​ಡೇ ಧ್ರುವ ಪಾಲಿಗೆ ಸಖತ್ ಸ್ಪೆಷಲ್. ಇನ್ನೈದೇ ದಿನದಲ್ಲಿ ಧ್ರುವ ನಟನೆಯ ಮೋಸ್ಟ್ ಅವೇಟೆಡ್ ಮೂವಿ ಮಾರ್ಟಿನ್ ತೆರೆಗೆ ಬರ್ತಾ ಇದೆ. KD ವರ್ಷಾಂತ್ಯಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಾರಿ ಬರ್ತ್​ಡೇ ಧ್ರುವ ಪಾಲಿಗೆ ಸಖತ್ ಸ್ಪೆಷಲ್. ಇನ್ನೈದೇ ದಿನದಲ್ಲಿ ಧ್ರುವ ನಟನೆಯ ಮೋಸ್ಟ್ ಅವೇಟೆಡ್ ಮೂವಿ ಮಾರ್ಟಿನ್ ತೆರೆಗೆ ಬರ್ತಾ ಇದೆ. KD ವರ್ಷಾಂತ್ಯಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಈ ನಡುವೆ ಧ್ರುವ ಸರ್ಜಾ ಫ್ಯಾನ್ಸ್​ಗೆ ಮತ್ತೊಂದು ಸರ್​ಪ್ರೈಸ್ ಗಿಫ್ಟ್ ಕೂಡ ಇದೆ. ಏನದು ಗಿಫ್ಟ್ ಅಂತೀರಾ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ಮಾರ್ಟಿನ್ ಸಿನಿಮಾದ ಪ್ರಮೋಷನ್ಸ್​​ನಲ್ಲಿ ಬ್ಯುಸಿಯಾಗಿರೋ ಧ್ರುವ ಶನಿವಾರ ಹುಬ್ಬಳ್ಳಿಯಲ್ಲಿ ಫ್ಯಾನ್ಸ್ ಮೀಟ್ ಮಾಡಿದ್ರೆ, ಭಾನುವಾರ ಡಾವಣಗೆರೆಯಲ್ಲಿ ಅಭಿಮಾನಿಗಳ ಜೊತೆಗೆ ಬರ್ತ್​ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಸಾರಿಯ ಬರ್ತ್​ಡೇ ಧ್ರುವ ಪಾಲಿಗೆ ಸಖತ್ ಸ್ಪೆಷಲ್. 

ಯಾಕಂದ್ರೆ ಧ್ರುವ ನಟನೆಯ ಬಹುಕೋಟಿ ವೆಚ್ಚದ,  ಬಹುನಿರೀಕ್ಷೆಯ ಸಿನಿಮಾ ಮಾರ್ಟಿನ್ ಇದೇ ಅಕ್ಟೋಬರ್ 11ಕ್ಕೆ ತೆರೆಗೆ ಬರ್ತಾ ಇದೆ. ಈ ಸಿನಿಮಾ ಬಗ್ಗೆ ಅದ್ಯಾಪರಿಯ ನಿರೀಕ್ಷೆ ಇದೆ ಅಂದ್ರೆ ವರ್ಲ್ಡ್ ವೈಡ್ ಈ ಸಿನಿಮಾಗೆ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಗೆ ಬರಲಿದೆ. ಮಾರ್ಟಿನ್ ಸಿನಿಮಾದ ಟ್ರೈಲರ್, ಸಾಂಗ್ಸ್ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಈ ಸಿನಿಮಾದ ಹೀರೋ ಇಂಟ್ರಡಕ್ಷನ್ ಸಾಂಗ್​ಗೇನೇ ಭರ್ತಿ 6 ಕೋಟಿ ಖರ್ಚು ಮಾಡಲಾಗಿದೆ. ಮಾರ್ಟಿನ್ ಸಿನಿಮಾದ ಮೇಕಿಂಗ್ ಬಗ್ಗೆ ಸಖತ್ ಪಾಸಿಟಿವ್ ಟಾಕ್ ಕ್ರಿಯೇಟ್ ಆಗಿದೆ. ಇನ್ನೂ ಮಾರ್ಟಿನ್ ಬಳಿಕ ಧ್ರುವ ನಟನೆಯಲ್ಲಿ ಬರಲಿರೋ ಮುಂದಿನ ಸಿನಿಮಾ ಬಗ್ಗೆ ಕೂಡ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ. ಪ್ರೇಮ್ ನಿರ್ದೇಶನದಲ್ಲಿ , KVN ಪ್ರೊಡಕ್ಷನ್​ನಲ್ಲಿ  ಮೂಡಿಬಂದಿರೋ KD  ಸಿನಿಮಾ ಕೂಡ ಈ ವರ್ಷದ ಮೋಸ್ಟ್ ಅವೇಟೆಡ್ ಮೂವಿಗಳಲ್ಲೊಂದು. 

KD ಸಿನಿಮಾದಲ್ಲಿ ಬಹುದೊಡ್ಡ ತಾರಾಗಣ ಇದೆ. ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಜೊತೆಗೆ ಸಂಜಯ್  ದತ್ ಕೂಡ ನಟಿಸಿದ್ದಾರೆ. ಈ ಮಲ್ಟಿಸ್ಟಾರರ್ ಮೂವಿಯ ಆಡಿಯೋ ರೈಟ್ಸ್ ಬರೊಬ್ಬರಿ 17 ಕೋಟಿಗೆ ಸೇಲ್ ಆಗಿದ್ದು ಹೊಸ ದಾಖಲೆಯನ್ನೇ ನಿರ್ಮಿಸಿದೆ. ಡಿಸೆಂಬರ್​ಗೆ KD ಸಿನಿಮಾ ರಿಲೀಸ್ ಆಗೋದು ಫಿಕ್ಸ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ತಡವಾದ್ರೆ ಕೊಂಚ ಮುಂದಕ್ಕೆ ಹೋಗೋ ಸಾಧ್ಯತೆಯೂ ಇದೆ. ಒಟ್ನಲ್ಲಿ ಮಾರ್ಟಿನ್ ಬಳಿಕ ಧ್ರುವ ಮತ್ತೊಂದು ಮೆಗಾ ಸಿನಿಮಾ ಮೂಲಕವೇ ಫ್ಯಾನ್ಸ್ ಮುಂದೆ ಬರಲಿದ್ದಾರೆ. ಇನ್ನೂ ಈ ಎರಡೂ ಸಿನಿಮಾಗಳ ಬಳಿಕ ಧ್ರುವ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಫ್ಯಾನ್ಸ್ ನಡುವೆ ಇದೆ. ಈ ಬಗ್ಗೆ ಒಂದು ಕ್ರೇಜಿ ಅಪ್​ಡೇಟ್ ಕೂಡ ಸಿನಿರಂಗದಲ್ಲಿ ಹರಿದಾಡ್ತಾ ಇದೆ. ಬಾಲಿವುಡ್ ನ ಬಿಗ್ ಆಕ್ಷನ್ ಡ್ರಾಮಾ ವಾರ್-2ನಲ್ಲಿ ಧ್ರುವಗೆ ನಟಿಸೋ ಆಫರ್ ಬಂದಿದೆಯಂತೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more