ಸಂಕ್ರಾಂತಿಗೆ ದರ್ಶನ್‌ಗೆ ಸರ್ಜರಿ, ಸುಬ್ಬ-ಸುಬ್ಬಿ ನ್ಯೂ ಚಾಪ್ಟರ್ ಓಪನ್: ಮಾರ್ಚ್​ನಿಂದ ಡೆವಿಲ್ ಶೂಟಿಂಗ್

Jan 5, 2025, 11:38 AM IST

ದರ್ಶನ್​ಗೆ ಜೈಲಿನಲ್ಲಿ ಬೆನ್ನು ಬಿದ್ದ ಬೆನ್ನು ನೋವು ಇನ್ನೂ ತೊಂದರೆ ಕೊಡ್ತಾನೇ ಇದೆ. ಭರ್ತಿ ಒಂದೂವರೇ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೂ ದರ್ಶನ್ ಬೆನ್ನು ನೋವು ಗುಣವಾಗಿಲ್ಲ. ಸೋ ಸಂಕ್ರಾತಿ ಹೊತ್ತಲ್ಲಿ ದಾಸನಿಗೆ ಸರ್ಜರಿ ನಡೆಯೋದು ಬಹುತೇಕ ಫಿಕ್ಸ್. ಇನ್ನೂ ಇದೇ ಸಂಕ್ರಾಂತಿಗೆ ಪವಿತ್ರಾ ಗೌಡ ಕೂಡ ಒಂದು ಹೊಸ ಚಾಪ್ಟರ್ ಓಪನ್ ಮಾಡ್ತಾ ಇದ್ದಾಳೆ. ಏನದು ಸುಬ್ಬ-ಸುಬ್ಬಿ ನ್ಯೂ ಚಾಪ್ಟರ್..? ಇಲ್ಲಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರೋ ದರ್ಶನ್ & ಪವಿತ್ರಾ ಗೌಡ ಹೊಸ ವರ್ಷಕ್ಕೆ ಚಾಪ್ಟರ್ ಆರಂಬಿಸುವ ತಯಾರಿಯಲ್ಲಿದ್ದಾರೆ. ದರ್ಶನ್ ಹೊಸ ವರ್ಷದ ಮೊದಲ ದಿನವೇ ಡೆವಿಲ್ ಸಿನಿಮಾಗೆ ಡಬ್ಬಿಂಗ್ ಮಾಡಿದ್ದು, ಬಣ್ಣದ ದುನಿಯಾಗೆ ಮರಳಿದ್ದಾನೆ. ಈ ನಡುವೆ ತನ್ನ ಬೆನ್ನು ಬಿದ್ದಿರೋ ಬೆನ್ನು ನೋವಿಗೆ ಫುಲ್ ಸ್ಟಾಪ್ ಹಾಕಬೇಕು ಆಸ್ಪತ್ರೆಗಳನ್ನ ಸುತ್ತತಾ ಇದ್ದಾನೆ. 

ಬಳ್ಳಾರಿ ಜೈಲಿನಲ್ಲಿ ದರ್ಶನ್​ಗೆ ವಿಪರೀತ ಕಾಟ ಕೊಟ್ಟಿದ್ದ ಬೆನ್ನು ನೋವು ಇನ್ನೂ ಗುಣವಾಗಿಲ್ಲ. ಮಧ್ಯಂತರ ಬೇಲ್ ಪಡೆದು ಬಂದು ಬಿಜಿಎಸ್ ಆಸ್ಪತ್ರೆಯಲ್ಲಿ ಒಂದೂವರೇ ತಿಂಗಳು ಫಿಸಿಯೋಥೆರಪಿ ಚಿಕಿತ್ಸೆ ಪಡೆದರೂ ಇದು ಗುಣವಾಗಿಲ್ಲ. ಸೋ ವೈದ್ಯರು ದರ್ಶನ್​ಗೆ ಸರ್ಜರಿ ಮಾಡಿಸಿಕೊಳ್ಳಲೇಬೇಕು ಅಂತ ಸೂಚನೆ ಕೊಟ್ಟಿದ್ದಾರಂತೆ. ಹೌದು ಮೂಲಗಳ ಪ್ರಕಾರ ದರ್ಶನ್ ಮೈಸೂರಿನ ಖಾಸಗಿ ಆಸ್ಪತ್ರೆಲ್ಲಿ ಸರ್ಜರಿ ಮಾಡಿಸಿಕೊಳ್ಳಲಿದ್ದು, ಮುಂದಿನ ಒಂದು ವಿಶ್ರಾಂತಿ ಪಡೆಯಬೇಕಿದೆ. ಮಾರ್ಚ್ ನಿಂದ ದರ್ಶನ್​ ಡೆವಿಲ್ ಶೂಟಿಂಗ್​ಗೆ ಹಾಜರಾಗಿ ಮತ್ತೆ ನಟನೆಗೆ ಮರಳುವ ಪ್ಲ್ಯಾನ್ ನಲ್ಲಿದ್ದಾರೆ. ದರ್ಶನ್ ಸರ್ಜರಿ ಮಾಡಿಸಕೊಂಡು ಶೂಟಿಂಗ್​ಗೆ ಮರಳುವ ತಯಾರಿಯಲ್ಲಿದ್ರೆ, ಇತ್ತ ಎ-1 ಆರೋಪಿಯಾಗಿ ಜೈಲು ಸೇರಿದ್ದ ಪವಿತ್ರಾ ಗೌಡ ಕೂಡ ಸಂಕ್ರಾಂತಿಯಿಂದ ತನ್ನ ಸ್ಟುಡಿಯೋ ಮರುಪ್ರಾರಂಭ ಮಾಡೋ ಪ್ಲಾನ್ ಮಾಡಿಕೊಂಡಿದ್ದಾಳೆ. 

ಬೆಂಗಳೂರಿನ ಆರ್ ಆರ್ ನಗರದಲ್ಲಿ ಪವಿತ್ರಾ ರೆಡ್ ಕಾರ್ಪೆಟ್ ಸ್ಟುಡಿಯೋ ಅನ್ನೋ ಐಷಾರಾಮಿ ಬೊಟಿಕ್ ಹೊಂದಿದ್ದಾಳೆ. ಆರ್ ಆರ್ ನಗರದ ಸಿರಿವಂತರ ನೆಚ್ಚಿನ ಬೋಟಿಕ್ ಇದು, ಇಲ್ಲಿಗೆ ಹಲವು ಸೆಲೆಬ್ರಿಟಿಗಳು ಕೂಡ ಶಾಪಿಂಗ್​ಗೆ ಬರ್ತಾ ಇದ್ರು. ಪವಿತ್ರಾ ಗೌಡ ಜೈಲು ಸೇರಿದ ಮೇಲೆ ಈ ಬೋಟಿಕ್​ಗೂ ಬೀಗ ಬಿದ್ದಿತ್ತು. ಇದೀಗ ಬೇಲ್ ಪಡೆದು ಆಚೆ ಬಂದಿರೋ ಪವಿತ್ರಾ ಗೌಡ ಮತ್ತೆ   ಈ ಬೋಟಿಕ್ ಆರಂಭಿಸಲಿದ್ದಾಳೆ. ಸಂಕ್ರಾಂತಿ ದಿನವೇ ಬೋಟಿಕ್  ನಲ್ಲಿ ಪೂಜೆ ಮಾಡಿ ಮರುಪ್ರಾರಂಭ ಮಾಡಲಿದ್ದಾಳೆ. ಒಟ್ಟಾರೆ ಸಂಕ್ರಾತಿ ಹೊತ್ತಲ್ಲಿ ಸುಬ್ಬ ಸುಬ್ಬಿಯ ನ್ಯೂ ಚಾಪ್ಟರ್ ಆರಂಭ ಆಗ್ತಾ ಇದೆ. ಎಳ್ಳು ಬೆಲ್ಲ ತಿಂದು ಒಳ್ಳೆ ಕೆಲಸ ಮಾಡ್ತೀವಿ ಅಂತ ಈ ಕೆಡಿ ಜೋಡಿ ರೆಡಿಯಾಗಿ ನಿಂತಿದೆ.