ದಾಸನ​ ಬೆನ್ನುನೋವು ಜೈಲು ಅಧಿಕಾರಿಗಳಿಗೆ ತಲೆನೋವು; ದರ್ಶನ್ ಇನ್ ಡೇಂಜರ್!

ದಾಸನ​ ಬೆನ್ನುನೋವು ಜೈಲು ಅಧಿಕಾರಿಗಳಿಗೆ ತಲೆನೋವು; ದರ್ಶನ್ ಇನ್ ಡೇಂಜರ್!

Published : Oct 25, 2024, 12:54 PM ISTUpdated : Oct 25, 2024, 12:56 PM IST

ಇದೀಗ MRI ಸ್ಕ್ಯಾನಿಂಗ್ ರಿಪೋರ್ಟ್ ಜೈಲು ಅಧಿಕಾರಿಗಳ ಕೈ ಸೇರಿದೆ. ವೈದ್ಯರು ಕೊಟ್ಟಿರೋ ರಿಪೋರ್ಟ್​​ನಲ್ಲಿ ಶಾಕಿಂಗ್ ಸಂಗತಿಗಳೇ ಇವೆ. L5, S1 ಭಾಗದಲ್ಲಿ ದರ್ಶನ್​ಗೆ ಊತ ಕಾಣಿಸಿಕೊಂಡಿದ್ದು, ನಿರ್ಲಕ್ಷ ಮಾಡದೇ ತಕ್ಷಣ ಶಸ್ತ್ರಚಿಕಿತ್ಸೆ ಪಡೆದುಕೊಳ್ಳಿ ಅಂತ ವೈದ್ಯರು..

ತೀವ್ರ ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್​ಗೆ ಮಂಗಳವಾರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಮಾಡಲಾಗಿತ್ತು. ಇದೀಗ ಸ್ಕ್ಯಾನಿಂಗ್ ರಿಪೋರ್ಟ್ ಜೈಲು ಅಧಿಕಾರಿಗಳ ಕೈ ಸೇರಿದ್ದು, ದರ್ಶನ್ ಸ್ಥಿತಿ ಕ್ರಿಟಿಕಲ್ ಅನ್ನೋ ವರದಿ ಬಂದಿದೆ. ನಿರ್ಲಕ್ಷ ಮಾಡದೇ ಅತೀ ಶೀಘ್ರದಲ್ಲಿ ಸರ್ಜರಿ ಮಾಡಿಸೋಕೆ ಸೂಚನೆ ನೀಡಲಾಗಿದೆ. ವೈದ್ಯರ ರಿಪೋರ್ಟ್ ದರ್ಶನ್ ನಿದ್ದೆಗೆಡಿಸಿದೆ.

ಬೆನ್ನು ನೋವಿನಿಂದ ತೀವ್ರ ತೊಂದರೆಗೀಡಾಗಿರೋ ದರ್ಶನ್​ಗೆ ಕಳೆದ ಮಂಗಳವಾರ ವಿಮ್ಸ್ ಆಸ್ಪತ್ರೆಗೆ ಕರೆದೊಯ್ದು MRI ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ವಿಮ್ಸ್ ಆಸ್ಪತ್ರೆಗೆ ಕರೆತಂದ ವೇಳೆ ಅಭಿಮಾನಿಗಳ ತಳ್ಳಾಟದಲ್ಲಿ ದರ್ಶನ್ ಪರದಾಡಿ ಹೋಗಿದ್ರು. ದರ್ಶನ್ ಮುಖದಲ್ಲಿ ನೋವಿನ ಗೆರೆಗಳು ಕಾಣ್ತಾ ಇದ್ವು. ನಡೆದಾಡೋದಕ್ಕೂ ಪರದಾಡ್ತಾ ಇರೋದು ಫ್ಯಾನ್ಸ್ ಕಣ್ಣಿಗೆ ಬಿದ್ದಿತ್ತು.

ಇದೀಗ MRI ಸ್ಕ್ಯಾನಿಂಗ್ ರಿಪೋರ್ಟ್ ಜೈಲು ಅಧಿಕಾರಿಗಳ ಕೈ ಸೇರಿದೆ. ವೈದ್ಯರು ಕೊಟ್ಟಿರೋ ರಿಪೋರ್ಟ್​​ನಲ್ಲಿ ಶಾಕಿಂಗ್ ಸಂಗತಿಗಳೇ ಇವೆ. L5, S1 ಭಾಗದಲ್ಲಿ ದರ್ಶನ್​ಗೆ ಊತ ಕಾಣಿಸಿಕೊಂಡಿದ್ದು, ಈ ಸಮಸ್ಯೆಗಳ ಬಗ್ಗೆ ಖುದ್ದು ವೈದ್ಯರು ಜೈಲಿಗೆ ಬಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ನಿರ್ಲಕ್ಷ ಮಾಡದೇ ತತ್ ಕ್ಷಣ ಶಸ್ತ್ರಚಿಕಿತ್ಸೆ ಪಡೆದುಕೊಳ್ಳಿ ಅಂತ ಸೂಚನೆ ಕೊಟ್ಟಿದ್ದಾರೆ.

ಅಸಲಿಗೆ ದರ್ಶನ್​ಗೆ ಬೆನ್ನು ನೋವು ಕಾಣಿಸಿಕೊಂಡ ಬೆನ್ನಲ್ಲೇ ಜೈಲಾಧಿಕಾರಿಗಳು ಸರ್ಕಾರಿ ಆ್ಪಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ರು. ಆದ್ರೆ ದರ್ಶನ್ ತನಗೆ ಬೆಂಗಳೂರಿನ ಮಣಿಪಾಲ್​ನಲ್ಲೇ ಚಿಕಿತ್ಸೆ ಆಗಬೇಕು ಅಂತ ಪಟ್ಟು ಹಿಡಿದಿದ್ರು. ಬೆನ್ನು ನೋವಿನ ಕಾರಣ ಕೊಟ್ರೆ ಹೈಕೋರ್ಟ್ ಬೇಗ ಬೇಲ್ ಕೊಟ್ಟುಬಿಡುತ್ತೆ ಅನ್ನೋದು ದರ್ಶನ್ ನಂಬಿಕೆಯಾಗಿತ್ತು. ಆದ್ರೆ ಆ ನಂಬಿಕೆ ಹುಸಿಯಾಗಿದೆ. ಹೈಕೋರ್ಟ್​​ನಲ್ಲೂ ಬೇಲ್ ಮುಂದೂಡಿಕೆ ಆಗ್ತಾ ಇದೆ. ಬೆನ್ನು ನೋವು ಮಾತ್ರ ಹೆಚ್ಚಾಗ್ತಾ ಇದೆ.. ಮುಂದೇನು ದರ್ಶನ್ ಕಥೆ, ವಿಡಿಯೋ ನೋಡಿ..

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more