
ಅಲ್ಲಿಗೆ ಚಂದು ಸಂಜು ಕುರಿತ ಗಾಸಿಪ್ ಗೆ ಒಂದು ಫುಲ್ ಸ್ಟಾಪ್ ಬಿದ್ದಿದೆ. ಇನ್ನೂ ಸೂತ್ರಧಾರಿ ಸಿನಿಮಾ ಬಗ್ಗೆ ಹೇಳೊದಾದ್ರೆ ಇದು ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರೋ ಚೊಚ್ಚಲ ಸಿನಿಮಾ. ಅಪೂರ್ವ ಇಲ್ಲಿ ಚಂದನ್ ಜೋಡಿಯಾಗಿ ಮಿಂಚಿದ್ದಾರೆ...
ರಾಪರ್ ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸಿರೋ ಚೊಚ್ಚಲ ಸಿನಿಮಾ ಸೂತ್ರಧಾರಿ ಸಿನಿಮಾದ ಡ್ಯಾಶ್ ಸಾಂಗ್ ಬಿಗ್ ಹಿಟ್ ಆಗಿದೆ. ಈ ಹಾಡು ಎಷ್ಟು ಸೌಂಡ್ ಮಾಡ್ತೋ ಇದ್ರಲ್ಲಿ ಹೆಜ್ಜೆ ಹಾಕಿದ ಚಂದನ್ ಮತ್ತು ಸಂಜನಾ ಲವ್ ಮ್ಯಾಟರ್ ಕೂಡ ಅಷ್ಟೇ ಸದ್ದು ಮಾಡ್ತು. ಇದೀಗ ಈ ವಿಷ್ಯದ ಬಗ್ಗೆ ಚಂದು- ಅಂಡ್ ಸಂಜನಾ ಮೊದಲ ಬಾರಿ ರಿಯ್ಯಾಕ್ಟ್ ಮಾಡಿದ್ದಾರೆ. ನಾವು ಪಾತ್ರಧಾರಿಗಳಷ್ಟೇ ಸೂತ್ರಧಾರಿ ಯಾರೋ ಗೊತ್ತಿಲ್ಲ ಅಂದಿದ್ದಾರೆ.
ಚಂದನ್ ಬಾಳಲ್ಲಿ ಸಂಜು..? ಪಾತ್ರಧಾರಿನಾ..? ಸೂತ್ರಧಾರಿನಾ..?
ಯೆಸ್ ಇತ್ತೀಚಿಗೆ ಸ್ಯಾಂಡಲ್ವುಡ್ ಅಂಗಳದಲ್ಲಿ ಹರಿದಾಡಿದ ಈ ಗಾಸಿಪ್ ಬಗ್ಗೆ ನೀವು ಕೇಳೇ ಕೇಳಿರ್ತೀತಿ. ಚಂದನ್ ಶೆಟ್ಟಿ ನಾಯಕನಾಗಿ ನಟಿಸ್ತಾ ಇರೋ ಸೂತ್ರಧಾರಿ ಅನ್ನೋ ಸಿನಿಮಾದಲ್ಲಿ ಡ್ಯಾಶ್ ಅನ್ನೋ ಸಖತ್ ಸಾಂಗ್ ಇದ್ದು, ಅದ್ರಲ್ಲಿ ಸಂಜನಾ ಆನಂದ್ ಹೆಜ್ಜೆ ಹಾಕಿದ್ರು.
ತಮ್ಮ ಬಗ್ಗೆ ಹುಟ್ಟಿಕೊಂಡ ಗಾಸಿಪ್ ಕುರಿತು ಚಂದನ್ ಶೆಟ್ಟಿ ಌಂಡ್ ಸಂಜನಾ ಆನಂದ್ ಒಟ್ಟಿಗೆ ಕ್ಲಾರಿಟಿ ಕೊಟ್ಟಿದ್ದಾರೆ, ಸೂತ್ರಧಾರಿ ಸಿನಿಮಾದ ವೇದಿಕೆ ಮೇಲೆನೆ ನಾವು ಪಾತ್ರಧಾರಿಗಳು ಮಾತ್ರ ಈ ಗಾಸಿಪ್ ಸೂತ್ರಧಾರಿ ಯಾರೋ ಗೊತ್ತಿಲ್ಲ ಅಂದಿದ್ದಾರೆ. ಸಂಜನಾ ಅಂತೂ ಚಂದು ನನ್ನ ಬ್ರದರ್ ಅಂದಿದ್ದಾರೆ.
ಅಲ್ಲಿಗೆ ಚಂದು ಸಂಜು ಕುರಿತ ಗಾಸಿಪ್ ಗೆ ಒಂದು ಫುಲ್ ಸ್ಟಾಪ್ ಬಿದ್ದಿದೆ. ಇನ್ನೂ ಸೂತ್ರಧಾರಿ ಸಿನಿಮಾ ಬಗ್ಗೆ ಹೇಳೊದಾದ್ರೆ ಇದು ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರೋ ಚೊಚ್ಚಲ ಸಿನಿಮಾ. ಅಪೂರ್ವ ಇಲ್ಲಿ ಚಂದನ್ ಜೋಡಿಯಾಗಿ ಮಿಂಚಿದ್ದಾರೆ.
ಈಗಲ್ ಮೀಡಿಯಾ ಕ್ರಿಯೇಷನ್ಸ್ ನ ನವರಸನ್ ಈ ಚಿತ್ರವನ್ನ ನಿರ್ಮಿಸಿದ್ದು, ಕಿರಣ್ ಕುಮಾರ್ ಚಿತ್ರಕ್ಕೆ ಌಕ್ಷನ್ ಕಟ್ ಹೇಳಿದ್ದಾರೆ. ಮೇ 9ಕ್ಕೆ ಈ ಸಿನಿಮಾ ತೆರೆಗ ಬರಲಿದ್ದು ಈಗಲೇ ಚತ್ರದ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿ ಪ್ರಚಾರ ಕಾರ್ಯಕ್ಕೆ ಸೂತ್ರಧಾರಿ ಟೀಂ ಚಾಲನೆ ಕೊಟ್ಟಿದೆ. ಸೂತ್ರಧಾರಿನ ಬಿಗ್ ಸ್ಕ್ರೀನ್ ಮೇಲೆ ನೋಡೋದಕ್ಕೆ ನೀವ್ ಕೂಡ ಸಜ್ಜಾಗಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..