
ಸಿನಿಮಾದ ನಿರ್ದೇಶಕಿ ಗೀತು ಮೋಹನದಾಸ್, ನಿರ್ಮಾಪಕ ಕೆವಿಎನ್ ವೆಂಕಟ್ ಮತ್ತು ನಟ ಯಶ್ ಅನ್ನೋದನ್ನ ಬಿಟ್ರೆ ಇನ್ಯಾವ ವಿಷ್ಯನೂ ಅಧೀಕೃತವಾಗಿ ರಿವೀಲ್ ಮಾಡಿಲ್ಲ. ಆದ್ರೆ ಸಿನಿಮಾದ ಕಲಾವಿದರು, ತಂತ್ರಜ್ಞರ ಬಗ್ಗೆ ಒಂದೊಂದೇ ಗುಟ್ಟು ರಟ್ಟಾಗ್ತಾ ಇವೆ. ಸದ್ಯ ಟಾಕ್ಸಿಕ್ ಅಡ್ಡಾದಿಂದ ಲೀಕ್ ಆಗಿರೋ ಲೇಟೆಸ್ಟ್ ಗುಟ್ಟು..
ರಾಕಿಂಗ್ ಸ್ಟಾರ್ ಯಶ್ ಕನಸಿನ ಸಿನಿಮಾ ಟಾಕ್ಸಿಕ್ ಭರದಿಂದ ಚಿತ್ರೀಕರಣ ಆಗ್ತಾ ಇದೆ. ಇದೂವರೆಗೂ ಯಶ್ ಈ ಸಿನಿಮಾದ ಸ್ಟಾರ್ ಕಾಸ್ಟ್ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ. ಆದ್ರೆ ಚಿತ್ರದ ಒಂದೊಂದೇ ವಿಷ್ಯ ಲೀಕ್ ಆಗ್ತಾನೇ ಇವೆ. ಇದೀಗ ಟಾಕ್ಸಿಕ್ ಅಡ್ಡಾದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಮುಖ್ಯಪಾತ್ರ ಮಾಡ್ತಾ ಇರೋ ಗುಟ್ಟು ರಟ್ಟಾಗಿದೆ.
ಹೌದು, ರಾಕಿಂಗ್ ಸ್ಟಾರ್ ಯಶ್ ನಟನೆಯ ಮಹತ್ವಾಕಾಂಕ್ಷೆಯ ಸಿನಿಮಾ ಟಾಕ್ಸಿಕ್. ವಿಶ್ವವೇ ಮೆಚ್ಚುವಂತಾ ಸಿನಿಮಾ ಮಾಡ್ತೀನಿ ಅಂತ ಪಣ ತೊಟ್ಟಿರೋ ರಾಕಿ ಈ ಸಿನಿಮಾವನ್ನ ಅತ್ಯಂತ ಅದ್ದೂರಿಯಾಗಿ ರೆಡಿ ಮಾಡ್ತಾ ಇದ್ದಾರೆ. ಜೊತೆಗೆ ಈ ಸಿನಿಮಾದ ಯಾವ ಗುಟ್ಟೂ ರಟ್ಟಾಗದಂತೆ ಸೀಕ್ರೆಟ್ ಮೆಂಟೈನ್ ಮಾಡ್ತಾ ಇದ್ದಾರೆ.
ಸಿನಿಮಾದ ನಿರ್ದೇಶಕಿ ಗೀತು ಮೋಹನದಾಸ್, ನಿರ್ಮಾಪಕ ಕೆವಿಎನ್ ವೆಂಕಟ್ ಮತ್ತು ನಟ ಯಶ್ ಅನ್ನೋದನ್ನ ಬಿಟ್ರೆ ಇನ್ಯಾವ ವಿಷ್ಯನೂ ಅಧೀಕೃತವಾಗಿ ರಿವೀಲ್ ಮಾಡಿಲ್ಲ. ಆದ್ರೆ ಸಿನಿಮಾದ ಕಲಾವಿದರು, ತಂತ್ರಜ್ಞರ ಬಗ್ಗೆ ಒಂದೊಂದೇ ಗುಟ್ಟು ರಟ್ಟಾಗ್ತಾ ಇವೆ. ಸದ್ಯ ಟಾಕ್ಸಿಕ್ ಅಡ್ಡಾದಿಂದ ಲೀಕ್ ಆಗಿರೋ ಲೇಟೆಸ್ಟ್ ಗುಟ್ಟು ಅಂದ್ರೆ ನಯನತಾರಾ ಪಾತ್ರದ್ದು.
ಲೇಡಿ ಸೂಪರ್ ಸ್ಟಾರ್ ನಯನತಾರಾ ಟಾಕ್ಸಿಕ್ನಲ್ಲಿ ನಟಿಸ್ತಾ ಇದ್ದಾರೆ ಅಂತ ಮೊದಲು ಸುದ್ದಿಯಾಗಿತ್ತು. ಆ ನಂತರ ಅವರು ಚಿತ್ರದಿಂದ ಹೊರನಡೆದರು ಅಂತ ಹೇಳಲಾಗಿತ್ತು. ಆದ್ರೆ ಈ ಸಿನಿಮಾದಲ್ಲಿ ನಟಿಸ್ತಾ ಇರೋ ಯುವನಟ ಅಕ್ಷಯ್ ಓಬೆರಾಯ್ ಇತ್ತೀಚಿಗೆ ಇಂಟರ್ವ್ಯೂ ಒಂದರಲ್ಲಿ ಟಾಕ್ಸಿಕ್ ನಲ್ಲಿ ನಯನಾ ಇದ್ದಾರೆ ಅನ್ನೋ ಗುಟ್ಟು ರಿವೀಲ್ ಮಾಡಿದ್ದಾನೆ.
ಅಸಲಿಗೆ ಟಾಕ್ಸಿಕ್ನಲ್ಲಿ ರಾಕಿಯಷ್ಟೇ ಸ್ಟ್ರಾಂಗ್ ಕ್ಯಾರೆಕ್ಟರ್ ನಯನತಾರಾಗೂ ಇದೆ ಎನ್ನಲಾಗ್ತಾ ಇದೆ. ರಾಕಿಂಗ್ ಸ್ಟಾರ್ ಎದುರು ಲೇಡಿ ಸೂಪರ್ ಸ್ಟಾರ್ ಜುಗಲ್ಬಂದಿ ಸಖತ್ ಆಗಿ ಮೂಡಿಬಂದಿದೆಯಂತೆ. ಸೋ ಟಾಕ್ಸಿಕ್ ಮೂವಿ ಬಗ್ಗೆ ನಿರೀಕ್ಷೆ ಹೆಚ್ಚೋದಕ್ಕೆ ಇದೂ ಒಂದು ಹೊಸ ಕಾರಣ ಅಂದ್ರೆ ತಪ್ಪಾಗಲ್ಲ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..