
16 ವರ್ಷಕ್ಕೆ ಬಣ್ಣದ ದುನಿಯಾಗೆ ಕಾಲಿಟ್ಟ ರಮ್ಯಾ ಕೃಷ್ಣ, ಆ ಕಾಲದಲ್ಲಿ ಗ್ಲಾಮರ್ ಗೊಂಬೆಯಾಗೇ ಗುರುತಿಸಿಕೊಂಡಿದ್ದವರು. ಪಂಚಭಾಷೆಯ ಸಕಲ ಬಿಗ್ಸ್ಟಾರ್ ಗಳ ಜೊತೆ ನಟಿಸಿದ ನಟಿಮಣಿ ಇವರು. ಇದೀಗ ಮತ್ತೆ ಹೊಸ ರೂಪ ತಾಳಿದ್ದಾರೆ.
ಪಂಚಭಾಷಾ ನಟಿ ರಮ್ಯಾ ಕೃಷ್ಣನ್‌ಗೆ (Ramya Krishnan) ಈಗ 55ರ ಹರೆಯ. ಬಾಹುಬಲಿಯ ರಾಜಮಾತೆ ಪಾತ್ರ ಮಾಡಿದ ಮೇಲಂತೂ ಎಲ್ಲರೂ ಇವರನ್ನ ರಾಜಮಾತೆ ಅಂತಾನೇ ಕರೀತಾರೆ. ಆದ್ರೆ ರಮ್ಯಾ ಕೃಷ್ಣನ್ ಈವಾಗ ರಾಜಮಾತೆ ಗೆಟಪ್ ಬಿಟ್ಟು ಮತ್ತೆ ಗ್ಲಾಮರ್ ಗೊಂಬೆ ಅವತಾರ ತಳೆದಿದ್ದಾರೆ.
ರಾಜದೂತ್ ಏರಿದ ರಾಜಮಾತಾ ಶಿವಗಾಮಿ..!
ಯೆಸ್ ರಾಮ್ ಗೋಪಾಲ್ ವರ್ಮಾ ಡೈರೆಕ್ಟ್ ಮಾಡ್ತಾ ಇರೋ ಪೊಲೀಸ್ ಸ್ಟೇಶನ್ ಮೆ ಭೂತ್ ಸಿನಿಮಾದಲ್ಲಿ ರಮ್ಯಾ ಕೃಷ್ಣ ನಟಿಸ್ತಾ ಇದ್ದಾರೆ. ಸದ್ಯ ಈ ಸಿನಿಮಾದಲ್ಲಿನ ರಮ್ಯಾ ಕೃಷ್ಣ ಹೊಸ ಅವತಾರದ ಫೋಟೋಸ್ ಹೊರಬಿದ್ದಿದ್ದು ಎಲ್ಲರೂ ಸ್ಟನ್ ಆಗಿದ್ದಾರೆ.
ರಮ್ಯಾ ಕೃಷ್ಣಗೀಗ 55ರ ಹರೆಯ, ಇವರು ತಾಯಿ, ಅತ್ತೆ ಪಾತ್ರಗಳನ್ನ ಮಾಡೋದಕ್ಕೆ ಶುರುಮಾಡಿ ದಶಕಗಳೇ ಆಗಿವೆ. ಅದ್ರಲ್ಲೂ ಬಾಹುಬಲಿಯಲ್ಲಿ ರಾಜಮಾತೆ ಶಿವಗಾಮಿ ಪಾತ್ರ ಮಾಡಿದ ಮೇಲೆ ರಮ್ಯಾ ಕೃಷ್ಣನ ಎಲ್ರೂ ರಾಜಮಾತೆ ಅಂತಲೇ ಕರೀತಾ ಇದ್ರು.
ಆಧ್ರೆ ಇಂಥಾ ರಾಜಮಾತೆ ಈಗ ರಾಜದೂತ್ ಏರಿದ್ದಾರೆ. ಕೈಯಲ್ಲಿ ಸಿಗರೇಟ್ ಹಿಡಿದು ದಂ ಹೊಡೀತಾ ಬೋಲ್ಡ್ ಕಾಸ್ಟೂಮ್ನಲ್ಲಿ ಪೋಸ್ ಕೊಟ್ಟಿದ್ದಾರೆ. ರಮ್ಯಾ ಕೃಷ್ಣ ಹೊಸ ಅವತಾರ ನೋಡಿದವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಅಸಲಿಗೆ 16 ವರ್ಷಕ್ಕೆ ಬಣ್ಣದ ದುನಿಯಾಗೆ ಕಾಲಿಟ್ಟ ರಮ್ಯಾ ಕೃಷ್ಣ, ಆ ಕಾಲದಲ್ಲಿ ಗ್ಲಾಮರ್ ಗೊಂಬೆಯಾಗೇ ಗುರುತಿಸಿಕೊಂಡಿದ್ದವರು. ಪಂಚಭಾಷೆಯ ಸಕಲ ಬಿಗ್ಸ್ಟಾರ್ ಗಳ ಜೊತೆ ನಟಿಸಿದ ನಟಿಮಣಿ ಇವರು.
ಕನ್ನಡದಲ್ಲೂ ರಮ್ಯಾ ಕೃಷ್ಣ ಹಲವು ಚಿತ್ರಗಳನ್ನ ಮಾಡಿದ್ದಾರೆ. ಹಲವು ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಗಡಿಬಿಡಿ ಗಂಡನ ಹೆಂಡತಿ, ಬಾ ಬಾರೋ ರಸಿಕದ ಲೇಡಿಬಾಸ್, ರಕ್ತಕಣ್ಣೀರಿನ ಕಾಂತಾಳ ಛಮಕ್ನ ಮರೆಯೋದುಂಟೇ
ಇತ್ತೀಚಿಗೆ ರಮ್ಯಾ ಕೃಷ್ಣ ಕನ್ನಡದಲ್ಲೂ ತಾಯಿ ಪಾತ್ರ ಮಾಡೋದಕ್ಕೆ ಶುರುಮಾಡಿದ್ರು. ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ತಾಯಿ ಪಾತ್ರ ಮಾಡಿದ್ರು. ಆದ್ರೆ ನೀವಿರೋದು ತಾಯಿ ರೋಲ್ ಮಾಡಕ್ಕಲ್ಲ.. ಹೀಗೆ ರೋಲ್ ಮಾಡೆಲ್ ಆಗಿ ಕಾಣ್ಲಿಕ್ಕೆ ಅಂತ ಆರ್,ಜಿ.ವಿ ರಮ್ಯಾಗೆ ಈ ಹೊಸ ಗೆಟಪ್ ಕೊಟ್ಟಿದ್ದಾರೆ. ಈ ಗೆಟಪ್ ನೋಡಿದ ಪ್ರೇಕ್ಷಕರು ಐ ಲೈಕ್ ಇಟ್ ಕಾಂತಾ ಅಂತಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..