Oct 21, 2022, 11:31 PM IST
ಅಪ್ಪು ಅಂದರೆ ಅವರ ನಗುವಿನ ಮುಖ. ಯಾವುದೇ ಸಂದರ್ಭ ಆಗಿರಲಿ, ಯಾವುದೇ ಪರಿಸ್ಥಿತಿ ಇರಲಿ ಪುನೀತ್ ರಾಜ್‌ಕುಮಾರ್ ಮುಖದಲ್ಲಿ ನಗು ಯಾವತ್ತೂ ಮಾಸುತ್ತಿರಲಿಲ್ಲ. ಇದೀಗ ಅಪ್ಪು ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ ಬಂದಾಗ ನಂಬಲು ಸಾಧ್ಯವಾಗಲಿಲ್ಲ. ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಾ. ರಾಜ್‌ಕುಮಾರ್ ಕುಟುಂಬ ನನಗೆ ಆತ್ಮೀಯ. ಹಲವು ಬಾರಿ ಡಾ. ರಾಜ್ ಕುಮಾರ್ ನನ್ನನ್ನು ಹೊಗಳಿದ್ದಾರೆ. ಅಪ್ಪು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಗಂಧದ ಗುಡಿ ಚಿತ್ರಕ್ಕೆ ಬಿಗ್ ಬಿ ಶುಭಕೋರಿದ್ದಾರೆ. ಅಮಿತಾಬ್ ಬಚ್ಚನ್ ಮಾತುಗಳು ಇಲ್ಲಿವೆ.