ಡಿಜೆ ಪಾರ್ಟಿಯಲ್ಲಿ ಸನ್ನಿ ಥಕಧಿಮಿತ; ನಟಿ ಕುಣಿತಕ್ಕೆ ಬೆಂಗಳೂರು ಚಳಿಯೇ ಮಾಯ!

Dec 9, 2024, 6:33 PM IST

ಬೆಂಗಳೂರು  ವರ್ಷಾಂತ್ಯದ ಪಾರ್ಟಿಗೆ ಸಜ್ಜಾಗ್ತಾ ಇದೆ. ಈಗಾಗ್ಲೇ ಅನೇಕ ಕಡೆಗೆ ರಂಗೀನ್ ಇವೆಂಟ್​​ಗಳು ಅರೇಂಜ್ ಆಗಿವೆ. ಇತ್ತೀಚಿಗೆ ನಡೆದ ಒಂದು ಡಿಜೆ ಪಾರ್ಟಿಗೆ ಬಾಲಿವುಡ್ ಬೆಡಗಿ, ಮಾದಕ ತಾರೆ ಸನ್ನಿ ಲಿಯೋನ್ ಬಂದಿದ್ರು. ಚಳಿಯಲ್ಲಿ ಮುಳುಗಿರೋ ಬೆಂದಕಾಳೂರಿಗೆ ಬಂದ ಈ ಬಿಸಿ ಬಿಸಿ ಚೆಲುವೆ ಹೇಳಿದ್ದೇನು..? ನೋಡೋಣ ಬನ್ನಿ.

ಹೌದು, ಡಿಸೆಂಬರ್​ ಬಂತು ಅಂದ್ರೆ ಬೆಂಗಳೂರು ರಂಗೇರುತ್ತೆ.. ಮುಗಿಯದ ಮಸ್ತ್ ಪಾರ್ಟಿಗಳಿಗೆ ಸಜ್ಜಾಗುತ್ತೆ. ಈಗಾಗ್ಲೇ ಡಿಸೆಂಬರ್ ಚಳಿಯನ್ನ ಕಡಿಮೆ ಮಾಡುವಂಥಾ ಅನೇಕ ಪಾರ್ಟಿ ಇವೆಂಟ್ಸ್ ನಡೀತಾ ಇವೆ. ಈ ವಾರಾಂತ್ಯ ವೈಟ್​ಫಿಲ್ಡ್​ನಲ್ಲಿರುವ ವೈಟ್ ಲೋಟಸ್ ಕ್ಲಬ್​ನಲ್ಲಿ ಡಿಜೆ ಪಾರ್ಟಿ ನಡೆದಿದ್ದು, ಅಲ್ಲಿ ಗೆಸ್ಟ್ ಆಗಿ ಬಂದಿದ್ದು ಮಾದಕ ತಾರೆ ಸನ್ನಿ ಲಿಯೋನ್. ಸನ್ನಿ ಬರ್ತಾನೇ ಫುಲ್ ಪಾರ್ಟಿ ಮೂಡ್​​ನಲ್ಲಿದ್ರು. ಬೆಂಗಳೂರಂದ್ರೆ ನಂಗೆ ಶಾನೆ ಇಷ್ಟ ಅಂದ ಈ ಚೆಲುವೆ ಕಮ್ ಲೆಟ್ಸ್​ ಪಾರ್ಟಿ ಅಂತ ಕರೆಕೊಟ್ರು.

ನೆನಪಿರಲಿ ಪ್ರೇಮ್ ಕೂಡ ಈ ಇವೆಂಟ್​ನಲ್ಲಿ ಹಾಜರಿದ್ರು. ಸನ್ನಿನಾ ತಮ್ಮ ಫ್ಯಾಮಿಲಿಗೆ ಪರಿಚಯ ಮಾಡಿಸಿಕೊಟ್ರು. ಅಸಲಿಗೆ ಕನ್ನಡ ಸಿನಿರಸಿಕರಿಗೆ ಸನ್ನಿ ಲಿಯೋನ್ ಏನು ಹೊಸಬಳಲ್ಲ. ಈಕೆ ಬಾಲಿವುಡ್​ಗೆ ಬಂದು ಮಿರಿ ಮಿರಿ ಮಿಂಚ್ತಾ ಇದ್ದ ಕಾಲದಲ್ಲೇ ನಮ್ಮ ಶೋ ಮ್ಯಾನ್ ಪ್ರೇಮ್ ಸನ್ನಿನಾ ಕನ್ನಡಕ್ಕೆ ಕರೆತಂದಿದ್ರು.

ಡಿಕೆ ಸಿನಿಮಾದಲ್ಲಿ ಸೇಸಮ್ಮಾ ಸೇಸಮ್ಮಾ ಅಂತ ಕುಣಿದಿದ್ದ ಸನ್ನಿ, ಪಡ್ಡೆ ಹೈಕಳನ್ನ ಹುಚ್ಚೆದ್ದು ಕುಣಿಸಿದ್ಳು. ಇನ್ನೂ ಇಂದ್ರಜೀತ್ ಲಂಕೇಶ್ ನಿರ್ದೇಶನದ ಲವ್ ಯು ಆಲಿಯಾ ಸಿನಿಮಾದಲ್ಲೂ ಸನ್ನಿ ಸ್ಪೆಷಲ್ ನಂಬರ್​ವೊಂದಕ್ಕೆ ಕುಣಿದು ಕಿಚ್ಚು ಹಚ್ಚಿದ್ಲು.

2022ರಲ್ಲಿ ಬಂದ ಚಾಂಪಿಯನ್ ಅನ್ನೋ ಮೂವಿನಲ್ಲೂ ಈ ಮಾದಕ ಚೆಲುವೆಯ ಕುಣಿತ ಇತ್ತು. ಡಿಂಗರ್ ಬಿಲ್ಲಿ ಅನ್ನೋ ಐಟಂ ನಂಬರ್​ಗೆ ಸನ್ನಿ ಕುಣಿದು ಮತ್ತೇರಿಸಿದ್ಳು.

ಇನ್ನೇನು ರಿಲೀಸ್​ ಗೆ ಸಜ್ಜಾಗಿರೋ ಉಪೇಂದ್ರ ನಟನೆ ನಿರ್ದೇಶನದ  UI  ಸಿನಿಮಾದಲ್ಲೂ ಸನ್ನಿ ಇದ್ದಾಳೆ. ರಿಯಲ್ ಸ್ಟಾರ್ ಉಪ್ಪಿ ತಮ್ಮ UI ಯೂನಿವರ್ಸ್​​ನಲ್ಲಿ ಈ ಚೆಲುವೆಯನ್ನ ಹೇಗೆ ತೋರಿಸಿದ್ದಾರೆ ಅನ್ನೋ ಕುತೂಹಲಕ್ಕೆ ಇದೇ ಡಿಸೆಂಬರ್ 20ರಂದು ಉತ್ತರ ಸಿಗಲಿದೆ.

ಸದ್ಯಕ್ಕಂತೂ ಖಾಸಗಿ ಪಾರ್ಟಿನಲ್ಲಿ ಸನ್ನಿ ಮಾದಕ ಭಂಗಿಯಲ್ಲಿ ಹೆಜ್ಜೆ ಹಾಕಿ ಹೋಗಿದ್ದಾಳೆ. ಅದನ್ನ ನೋಡೋದಕ್ಕೆ ನೀವು ಟಿಕೆಟ್ ತಗೋಬೇಕು. ಆ ದುಬಾರಿ ಟಿಕೆಟ್ ಬೇಡ ಅಂದ್ರೆ UI ಟಿಕೆಟ್ ತಗೋಳಿ ಸಾಕು.. ಸನ್ನಿ ಜೊತೆ ಇಯರ್ ಎಂಡ್ ಪಾರ್ಟಿ ಮಾಡಬಹುದು.