Dec 7, 2019, 4:06 PM IST
ಸ್ಯಾಂಡಲ್‌ವುಡ್ ಬಬ್ಲಿ ಗರ್ಲ್ ರಚಿತಾ ರಾಮ್ ತಮ್ಮ ಮುದ್ದಿನ ಅಕ್ಕಳ ಮದುವೆಯನ್ನು ಬೆಂಗಳೂರಿನ ತಾಜ್ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ. ಅಕ್ಕ-ಭಾವನ ಜೊತೆ ಕ್ರೇಜಿ ಆಗಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ನಿತ್ಯಾ ರಾಮ್ ಈ ಹಿಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಮನಸ್ತಾಪ ಉಂಟಾದ ಕಾರಣ ಆ ಮದುವೆ ಮುರಿದು ಬಿದ್ದಿತ್ತು. ಇದು ಎರಡನೇ ಮದುವೆಯಾಗಿದ್ದರಿಂದ ಸರಳವಾಗಿಯ ವಿವಾಹ ಕಾರ್ಯಕ್ರಮ ನಡೆಯಿತು.