ನಿಧಿ ಸುಬ್ಬಯ್ಯ: ಪಂಚರಂಗಿ ಬ್ಯೂಟಿಯಿಂದ ಫಿಟ್ನೆಸ್ ಫ್ರೀಕ್ ಆಗಿ!

Dec 25, 2024, 12:51 PM IST

ನಿಧಿ ಸುಬ್ಬಯ್ಯ. ಪಟ ಪಟ ಅಂತ ಪ್ರೀತಿಯ ಮಾತುಗಳನ್ನಾಡುತ್ತಾ ಹುಡುಗರ  ಹಾರ್ಟ್​ನಲ್ಲಿ ಗುಡಿ ಕಟ್ಟಿದ್ದ ಸುರ ಸುಂದರಿ. ಯೋಗರಾಜ್ ಭಟ್ಟರ ಪಂಚರಂಗಿ ಸಿನಿಮಾದಲ್ಲಿ ಸದ್ದು ಮಾಡಿ ಪಡ್ಡೆ ಹುಡುಗರ ಫೇವರಿಟ್​ ಆಗಿದ್ದ ನಿಧಿ, ಓ ಮೈ ಗಾಡ್ ಅನ್ನೋ ಹಾಗೆ ನಟಿಸುತ್ತಿದ್ರು.

ಚೆಲುವಾಂತ ಚೆಲುವೆ ನಿಧಿ ಕ್ಯೂಟ್​ ಸ್ಮೈಲ್​​​ ಗಂಡ್​ ಹೈಕ್ಳ ಫೇವರಿಟ್. ಕನ್ನಡ, ತೆಲುಗು ಹಿಂದಿ ಸಿನಿ ರಂಗವನ್ನ ಸುತ್ತುತ್ತಿರೋ ನಿಧಿ ಸುಬ್ಬಯ್ಯ ಎರಡ್ಮೂರು ವರ್ಷದಿಂದ ಸ್ವಲ್ಪ ಸೈಲೆಂಟ್ ಆಗಿದ್ರು. ಸಿನಿ ರಂಗದಲ್ಲಿ 15 ವರ್ಷ ಪೂರೈಸಿರೋ ನಿಧಿ ಫಿಟ್ನೆಸ್ ಫ್ರೀಕ್. ಕಳೆದ ಎರಡು ವರ್ಷದಿಂದ ಕೂರ್ಗ್​ ಸೇರಿದ್ದ ನಿಧಿಗೆ ಹುಡುಕಿದವರು ಹಲವು ಮಂದಿ. ಹಾಗಂತ ಈ ಪಂಚರಂಗಿ ಬ್ಯೂಟಿ ಸುಮ್ಮನೆ ಕೂತೀರಲಿಲ್ಲ. ಜಿಮ್​​ನಲ್ಲಿ ಬೆವರು ಹರಿಸ್ತಾ ಕಮ್​​​ ಬ್ಯಾಕ್​​​​ ಆಗೋಕೆ ಸಖತ್ ಆಗಿರೋ ಫಿಟ್​ನೆಟ್​ ಮಾಡಿದ್ರು. ಈಗ ನಿಧಿಗೆ ಜಿಮ್​ ಅನ್ನೋದು ಡೈಲಿ ರೊಟೀನ್ ಆಗಿದೆ. 
 
ನಿಧಿ ಸುಬ್ಬಯ್ಯ ಈಗ ಹಾಟ್​ ಹೀರೋಯಿನ್​ ಆಗಿದ್ದಾರೆ. ಉಪ್ಪಿಯ ಯುಐನಲ್ಲಿ ಸಖತ್ ಆಗೇ ಎಂಟ್ರಿ ಕೊಡೋ ನಿಧಿ ಮತ್ತೊಂದು ಇನ್ಸಿಂಗ್ ಶುರು ಮಾಡಿದ್ದಾರೆ. ನಿಧಿಯ ನ್ಯೂ ಲುಕ್​ ಹಿಂದೆ ಈಕೆಯ ವರ್ಕೌಟ್​​ ತಾಕತ್ತೇ ಕಾರಣ.