ಸ್ಯಾಂಡಲ್ವುಡ್ ನಟಿ ಭಾವನಾಗೆ ತಾಯ್ತನ ಒಂದು ಕಡೆ ಸಂತಸವನ್ನ ತಂದ್ರೆ, ಮತ್ತೊಂದು ಕಡೆ ಭರಿಸಲಾಗದ ನೋವನ್ನ ತಂದಿದೆ. ಅವಳಿ ಮಕ್ಕಳಲ್ಲಿ ಒಂದು ಮಗು ಮಡಿಲು ಸೇರಿದ್ರೆ, ಇನ್ನೊಂದು ಮಗು ತೀರಿಹೋಗಿದ್ದು, ಖುಷಿ-ದುಃಖ ಒಟ್ಟೊಟ್ಟಿಗೆ ಬಂದಿವೆ. ಅಷ್ಟಕ್ಕೂ ಆ ದಿನ ಏನಾಯ್ತು..? ಭಾವನಾ ಹೇಳಿದ ಆ ಕರಾಳ ಕಥೆ ಇಲ್ಲಿದೆ ನೋಡಿ.
ಸ್ಯಾಂಡಲ್ವುಡ್ ನಟಿ ಭಾವನಾ ರಾಮಣ್ಣ IVF ಮೂಲಕ ಅವಳಿ ಮಕ್ಕಳನ್ನ ಪಡೆಯೋದಕ್ಕೆ ಸಜ್ಜಾಗಿದ್ದ ವಿಷ್ಯ ಭಾರಿ ಸದ್ದು ಮಾಡಿತ್ತು. ಮದುವೆಯೇ ಆಗದ ಭಾವನಾ ಮಕ್ಕಳನ್ನ ಪಡೆಯೋದಕ್ಕೆ ಹೊರಟಿದ್ದರ ಬಗ್ಗೆ ಸಮಾಜದಲ್ಲಿ ಮೀಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಕೆಲವರು ಇದೇನು ಸಂಸ್ಕ್ರತಿ ಅಂತ ಮೂಗು ಮುರಿದರೇ ಮತ್ತೆ ಕೆಲವರು ಭಾವನಾದು ಬೋಲ್ಡ್ ನಡೆ ಅಂತ ಅಭಿನಂದಿಸಿದ್ರು. ಈ ವಾದ-ವಿವಾದಗಳ ನಡುವೆಯೇ ಭಾವನಾ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ರು. ಅವಳಿ ಮಕ್ಕಳನ್ನ ಸ್ವಾಗತಿಸೋದಕ್ಕೆ ಸಜ್ಜಾಗಿ ನಿಂತಿದ್ರು. ಆದ್ರೆ ವಿಧಿ ಭಾವನಾ ಬದುಕಲ್ಲಿ ವಿಚಿತ್ರ ತಿರುವನ್ನ ತಂದೊಡ್ಡಿದೆ. ಅವಳಿ ಮಕ್ಕಳ ಪೈಕಿ ಒಂದು ಮಗು ತೀರಿ ಹೋಗಿದ್ದು, ಇನ್ನೊಂದು ಭಾವನಾ ಮಡಿಲು ಸೇರಿದೆ.
ಸೀಮಂತ ಮುಗಿದ ಬಳಿಕ ಭಾವನಾಗೆ ಹೆಚ್ಚು ಹೊತ್ತು ಕೂರಲಿಕ್ಕೆ ಸಾಧ್ಯವಾಗಲಿಲ್ಲವಂತೆ. ಹಠಾತ್ ರಕ್ತಸ್ರಾವ ಶುರುವಾಗಿದ್ದರಿಂದ ಹತ್ತಿರದ ಆಸ್ಪತ್ರೆಗೆ ಹೋದ್ರು. ಅಲ್ಲಿ ವೈದ್ಯರು ನೀವು ಟೈಮ್ ಬಾಂಬ್ ಕುಳಿತಿದ್ದೀರಿ ಅಂದಿದ್ರಂತೆ. ಒಂದು ಮಗು ಆರೋಗ್ಯವಾಗಿತ್ತು. ಆದರೆ ಆ ಮಗುವಿನ ತೂಕ ಕಡಿಮೆ ಇದೆ ಅಂತ ಗೊತ್ತಾಗಿ ದೇವರ ಬಳಿ ಪ್ರಾರ್ಥನೆ ಮಾಡಿದ್ವಿ. ಆದರೆ ಆರೋಗ್ಯ ಸುಧಾರಿಸದೆ ಆಪರೇಶನ್ ಮಾಡಬೇಕಾಯ್ತು. ಮಾನಿಟರ್‌ನಲ್ಲಿ ಒಂದು ಮಗುವಿನ ಹಾರ್ಟ್‌ಬೀಟ್ ಕುಸಿಯುತ್ತಿರೋದನ್ನ ನೋಡಿದೆ, ಆಗ ಆದ ಆಘಾತವನ್ನು ಹೇಗೆ ಹೇಳಲಿ? ಅಂತ ಭಾವನಾ ಭಾವುಕರಾಗಿದ್ದಾರೆ. ಈ ನೋವಿನ ನಡುವೆಯೂ ಮಡಿಲು ಸೇರಿದ ಹೆಣ್ಣುಮಗುವನ್ನ ಪ್ರೀತಿಯಿಂದ ಆರೈಕೆ ಮಾಡ್ತಾ ಇದ್ದಾರೆ. ತನ್ನ ಅಜ್ಜಿ ರುಕ್ಮಿಣಿಯವರ ಹೆಸರನ್ನೇ ಮಗಳಿಗೆ ಇಡೋದಕ್ಕೆ ಸಜ್ಜಾಗಿದ್ದಾರೆ. ಒಟ್ನಲ್ಲಿ ಭಾವನಾ ಬದುಕಲ್ಲಿ ಒಂಥರಾ ಸಿಹಿ-ಕಹಿ ಅನುಭವಗಳು ಒಟ್ಟಿಗೆ ಬಂದಿವೆ. ಇದನ್ನ ಎದುರಿಸಿ ದಿಟ್ಟವಾಗಿ ನಡೀತಿದ್ದಾರೆ ಚಂದ್ರಮುಖಿ ಭಾವನಾ...!